ದೂರದೃಷ್ಟಿ ನಾಯಕ ಕೆಂಪೇಗೌಡ: ಸುಧಾಕರ್‌

| Published : Jul 15 2024, 01:53 AM IST

ಸಾರಾಂಶ

ದೊಡ್ಡಬಳ್ಳಾಪುರ: ಭಾರತ ದೇಶದ ಸಾವಿರಾರು ಸಾಮಂತ ರಾಜರ ಪೈಕಿ ಕೆಂಪೇಗೌಡರು ಅಜರಾಮರವಾಗಿದ್ದಾರೆ. ನಾಡಿನ ಒಳಿತಿಗಾಗಿ ತನ್ನ ಜೀವನವನ್ನು ಪಣವಿಟ್ಟು ಕೆಲಸ ಮಾಡಿದ ಧೀಮಂತ ನಾಯಕ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.

ದೊಡ್ಡಬಳ್ಳಾಪುರ: ಭಾರತ ದೇಶದ ಸಾವಿರಾರು ಸಾಮಂತ ರಾಜರ ಪೈಕಿ ಕೆಂಪೇಗೌಡರು ಅಜರಾಮರವಾಗಿದ್ದಾರೆ. ನಾಡಿನ ಒಳಿತಿಗಾಗಿ ತನ್ನ ಜೀವನವನ್ನು ಪಣವಿಟ್ಟು ಕೆಲಸ ಮಾಡಿದ ಧೀಮಂತ ನಾಯಕ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.

ತಾಲೂಕಿನ ತೂಬಗೆರೆ ಹೋಬಳಿ ಟಿ. ಹೊಸಹಳ್ಳಿ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಆಚರಣಾ ಸಮಿತಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೆಂಪೇಗೌಡರು ದಕ್ಷ ಮತ್ತು ದೂರದೃಷ್ಟಿಯಳ್ಳ ಆಡಳಿತಗಾರನಾಗಿದ್ದರು. ಇದರ ಫಲವಾಗಿ ಇಂದು ಬೆಂಗಳೂರು ಬೃಹದಾಕಾರವಾಗಿ ಬೆಳೆದು ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಇಂತಹ ಮಹನೀಯರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಜಿಪಂ ಮಾಜಿ ಸದಸ್ಯ ಅಪ್ಪಯ್ಯಣ್ಣ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಸಾಧನೆ ಇಂದಿನ ಯುವ ಪೀಳಿಗೆಗೆ ಆದರ್ಶವಾಗಲಿ. ಅವರ ಅನನ್ಯ ಸಾಧನೆಯ ಫಲವಾಗಿ ಇಂದು ಸಾವಿರಾರು ಜನ ಬೆಂಗಳೂರು ನಗರದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ತೆಂಗು ನಾರಿನ ಮಹಾಮಂಡಳಿ ಅಧ್ಯಕ್ಷ ವೆಂಕಟೇಶ್ ಬಾಬು, ಜಿಪಂ ಮಾಜಿ ಸದಸ್ಯ ಕುರುವಿಗೆರೆ ನರಸಿಂಹಯ್ಯ, ಬಮೂಲ್ ನಿರ್ದೇಶಕ ಆನಂದ್, ವಕೀಲ ಪ್ರತಾಪ್, ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಪುರುಷೋತ್ತಮ್, ಗ್ರಾಪಂ ಸದಸ್ಯ ಕೃಷ್ಣಪ್ಪ, ರೈತ ಮುಖಂಡ ವಾಸು, ಮುರಳಿ, ಯುವ ಮುಖಂಡ ಉದಯ ಆರಾಧ್ಯ, ಕೆಂಪೇಗೌಡ ಆಚರಣೆ ಸಮಿತಿಯ ಪದಾಧಿಕಾರಿಗಳಾದ ಆರ್‌ಜಿಪಿಎನ್ ಗಂಗಾಧರ್, ಚನ್ನೇಗೌಡ, ಕುಮಾರ್, ಚಂದ್ರಪ್ಪ, ಚನ್ನಕೇಶವ, ಚಂದ್ರು, ಗೌಡ ಭಾಗವಹಿಸಿದ್ದರು.

14ಕೆಡಿಬಿಪಿ4-

ದೊಡ್ಡಬಳ್ಳಾಪುರ ತಾಲೂಕು ಟಿ ಹೊಸಹಳ್ಳಿ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಸಂಸದ ಡಾ.ಕೆ.ಸುಧಾಕರ್ ಉದ್ಘಾಟಿಸಿದರು.