ಕೆಂಪೇಗೌಡರ ಸಾಧನೆ ಸೂರ್ಯ, ಚಂದ್ರರಿರುವ ತನಕ ಶಾಶ್ವತ: ಡಾ.ಬಿ.ಎಸ್ .ಬೋರೇಗೌಡ

| Published : Jun 28 2024, 12:51 AM IST

ಕೆಂಪೇಗೌಡರ ಸಾಧನೆ ಸೂರ್ಯ, ಚಂದ್ರರಿರುವ ತನಕ ಶಾಶ್ವತ: ಡಾ.ಬಿ.ಎಸ್ .ಬೋರೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕೆಂಪೇಗೌಡರು ಜಾತಿಯಲ್ಲಿ ಒಕ್ಕಲಿಗರಾಗಿದ್ದರು ಸಹ ಅವರ ಸೇವೆ ಸರ್ವ ಜನರಿಗೂ ನೆಮ್ಮದಿ ನೀಡುವುದಾಗಿತ್ತು. ಬೆಂಗಳೂರಿನ ಸುತ್ತಮುತ್ತ ಕೋಟೆಯ ಹೆಬ್ಬಾಗಿಲನ್ನು ನಿರ್ಮಿಸುವಾಗ ಬಲಿದಾನ ಮಾಡುವ ಸನ್ನಿವೇಶ ಒದಗಿ ಬಂದಿತ್ತು. ಇಂತಹ ಸನ್ನಿವೇಶದಲ್ಲಿ ಕೆಂಪೇಗೌಡರ ಸೊಸೆ ಲಕ್ಷ್ಮಿದೇವಿ ಗಮನಿಸಿ ಹೆಬ್ಬಾಗಿಲಿಗೆ ತನ್ನ ಪ್ರಾಣವನ್ನು ಆತ್ಮಾರ್ಪಣೆ ಮಾಡಿಕೊಂಡ ಕುಟುಂಬವಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಜಾತ್ಯತೀತ ಸಮಾಜದ ನೆಮ್ಮದಿ ಬದುಕಿಗೆ ಆದ್ವಿತೀಯ ಕೊಡುಗೆ ನೀಡಿದ ನಾಡಪ್ರಭು ಕೆಂಪೇಗೌಡರ ಸಾಧನೆಗಳು ಸೂರ್ಯ ಚಂದ್ರರಿರುವ ತನಕ ಶಾಶ್ವತವಾಗಿ ಉಳಿಯುತ್ತವೆ ಎಂದು ಭಾರತಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಬಿ.ಎಸ್.ಬೋರೇಗೌಡ ಗುರುವಾರ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕ ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿಯಲ್ಲಿ ಪ್ರಧಾನ ಭಾಷಣ ಮಾಡಿ, ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರಿರುವ ಕೆಂಪೇಗೌಡರು ಜಾತಿಯಲ್ಲಿ ಒಕ್ಕಲಿಗರಾಗಿದ್ದರು ಸಹ ಅವರ ಸೇವೆ ಸರ್ವ ಜನರಿಗೂ ನೆಮ್ಮದಿ ನೀಡುವುದಾಗಿತ್ತು ಎಂದರು.

ಬೆಂಗಳೂರಿನ ಸುತ್ತಮುತ್ತ ಕೋಟೆಯ ಹೆಬ್ಬಾಗಿಲನ್ನು ನಿರ್ಮಿಸುವಾಗ ಬಲಿದಾನ ಮಾಡುವ ಸನ್ನಿವೇಶ ಒದಗಿ ಬಂದಿತ್ತು. ಇಂತಹ ಸನ್ನಿವೇಶದಲ್ಲಿ ಕೆಂಪೇಗೌಡರ ಸೊಸೆ ಲಕ್ಷ್ಮಿದೇವಿ ಗಮನಿಸಿ ಹೆಬ್ಬಾಗಿಲಿಗೆ ತನ್ನ ಪ್ರಾಣವನ್ನು ಆತ್ಮಾರ್ಪಣೆ ಮಾಡಿಕೊಂಡ ಕುಟುಂಬವಾಗಿದೆ ಎಂದು ಸ್ಮರಿಸಿದರು.

ತಹಸೀಲ್ದಾರ್ ಕೆ.ಎಸ್.ಸೋಮಶೇಖರ್ ಮಾತನಾಡಿ, ರಣವೀರರಾಗಿ ನ್ಯಾಯ. ನಿಷ್ಠೆ ಮತ್ತು ಧರ್ಮಕ್ಕೆ ಹೆಸರಾಗಿದ್ದ ನಾಡಪ್ರಭು ಕೆಂಪೇಗೌಡರು ತಮ್ಮ ಆಡಳಿತದಲ್ಲಿ ಹೊಂದಿದ್ದ ದೂರ ದೃಷ್ಟಿಯ ಫಲವಾಗಿ ಬೆಂಗಳೂರು ನಗರ ಇಂದು ಅಭಿವೃದ್ಧಿಯಲ್ಲಿ ಮುನ್ನಡೆಯಲು ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಇಡಿಯಲ್ಲಿ ಚಿನ್ನದ ಪದಕ ಪಡೆದ ನವ್ಯರಾಜ್, ವಿದ್ಯಾವರ್ಧಕ ಕಾಲೇಜಿನ ನಿವೃತ್ತ ಗ್ರಂಥಪಾಲಕ ಕೆ.ಟಿ. ಕೃಷ್ಣಪ್ಪ, ಪತ್ರಕರ್ತ ಪುಟ್ಟ ಲಿಂಗೇಗೌಡ, ರೈತ ಮುಖಂಡ ಅಣ್ಣೂರು ಮಹೇಂದ್ರ, ಸಾಮಾಜಿಕ ಕಾರ್ಯಕರ್ತ ಹುಲಿಗೆರೆಪುರ ಮಹದೇವು ಅವರುಗಳನ್ನು ಅಭಿನಂದಿಸಲಾಯಿತು.

ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಶ್ರೀ ನರಸಿಂಹಸ್ವಾಮಿ ದೇವಾಲಯದ ಆವರಣದಿಂದ ಪ್ರಮುಖ ಬೀದಿಗಳ ಮೂಲಕ ಜಾನಪದ ಕಲಾತಂಡಗಳ ಆಕರ್ಷಕ ಪ್ರದರ್ಶನ ಹಾಗೂ ಶಾಲಾ ವಿದ್ಯಾರ್ಥಿಗಳ ಪಥಸಂಚಲನ ದೊಂದಿಗೆ ನಾಡಪ್ರಭು ಕೆಂಪೇಗೌಡರ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಪ್ರತಿಷ್ಠಾಪನೆ ಮಾಡಿ ಪುಷ್ಪಾರ್ಚನೆ ನೆರವೇರಿಸಿದ ನಂತರ ಪ್ರಮುಖ ಬೀದಿಗಳ ಮೂಲಕ ಕ್ರೀಡಾಂಗಣದವರಿಗೆ ಮೆರವಣಿಗೆ ನಡೆಸಲಾಯಿತು. ಅಲ್ಲದೇ, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಬಿಇಒ ಸಿ.ಕಾಳಿರಯ್ಯ, ಪುರಸಭೆ ಮುಖ್ಯಾಧಿಕಾರಿ ಕರಿಬಸವಯ್ಯ, ಒಕ್ಕಲಿಗರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ನ.ಲಿ.ಕೃಷ್ಣ, ತಾಲೂಕು ಅಧ್ಯಕ್ಷ ಶಿವಲಿಂಗೇಗೌಡ, ಕಾರ್ಯದರ್ಶಿ ಹಾಗಲಹಳ್ಳಿ ಬಸವರಾಜು, ನಾಡಪ್ರಭು ಕೆಂಪೇಗೌಡರ ಒಕ್ಕಲಿಗರ ಸಂಘದ ಅಧ್ಯಕ್ಷ ದೇಶಹಳ್ಳಿ ಶಿವಪ್ಪ, ಆತಗೂರು ವೆಂಕಟಾಚಲುವಯ್ಯ, ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ವಿ.ಸಿ.ಉಮಾಶಂಕರ್, ತಿಪ್ಪುರು ರಾಜೇಶ್, ಕೃಷಿ ಅಧಿಕಾರಿ ಪರಮೇಶ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕಿ ರೇಖಾ ಸೇರಿದಂತೆ ಸಮಾಜ ಮುಖಂಡರುಗಳು , ಅಧಿಕಾರಿಗಳು ಪಾಲ್ಗೊಂಡಿದ್ದರು.