ಕೆಂಪೇಗೌಡರ ದೂರದೃಷ್ಟಿಯಿಂದ ಬೆಂಗ್ಳೂರು ವಿಶ್ವಖ್ಯಾತಿ: ಶಾಸಕ ಶಿವಲಿಂಗೇಗೌಡ

| Published : Jun 28 2024, 12:55 AM IST / Updated: Jun 28 2024, 12:56 AM IST

ಕೆಂಪೇಗೌಡರ ದೂರದೃಷ್ಟಿಯಿಂದ ಬೆಂಗ್ಳೂರು ವಿಶ್ವಖ್ಯಾತಿ: ಶಾಸಕ ಶಿವಲಿಂಗೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ನಾಡಪ್ರಭು ಕೆಂಪೇಗೌಡರು ಎಲ್ಲಾ ಸಮುದಾಯಗಳ ವ್ಯಾಪಾರದ ಅನುಕೂಲಕ್ಕಾಗಿ ಪೇಟೆಗಳನ್ನು ನಿರ್ಮಿಸಿದ್ದರು. ಒಟ್ಟಾರೆ ಬೆಂಗಳೂರು ಎಂಬ ಮಹಾನಗರವನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ, ಕೆಂಪೇಗೌಡರಿಗೆ ಸಲ್ಲುತ್ತದೆ. ಇಂದು ಅವರು ನಿರ್ಮಿಸಿರುವ ಬೆಂಗಳೂರು ನಗರವು ಕೋಟ್ಯಂತರ ಜನರು ನೆಮ್ಮದಿಯಿಂದ ಬದುಕುತ್ತಿರುವ ಆಶ್ರಯ ತಾಣವಾಗಿದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಕೇವಲ ಒಂದು ಸಮಾಜ, ಒಂದು ಪ್ರದೇಶಕ್ಕೆ ಮೀಸಲಾದ ನಾಯಕತ್ವದ ಗುಣ ಬೆಳೆಸಿಕೊಂಡವರಲ್ಲ, ಅವರ ದೂರ ದೃಷ್ಟಿಯಿಂದ ನಿರ್ಮಾಣಗೊಂಡಿರುವ ಬೆಂಗಳೂರು ಮಹಾನಗರ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಶಾಸಕ ಹಾಗೂ ಗೃಹ ಮಂಡಳಿಯ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.

ಒಕ್ಕಲಿಗರ ಸಂಘ ಹಾಗೂ ತಾಲೂಕು ಆಡಳಿತದಿಂದ ತಾಲೂಕು ಕಚೇರಿಯ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡ‌ 515ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಆಗಿನ ಕಾಲದಲ್ಲೇ ಆಧುನಿಕ ಪರಿಕಲ್ಪನೆಯಲ್ಲಿ ಮಹಾನಗರವನ್ನು ನಿರ್ಮಿಸಿದ್ದರು. ಕೆಂಪೇಗೌಡರು ಆ ಕಾಲದಲ್ಲೇ ಬೆಂಗಳೂರಿನಲ್ಲಿ ದೇವಾಲಯಗಳು ಮತ್ತು ಸುಸಜ್ಜಿತ ನೀರಿನ ಜಲಾಶಯಗಳನ್ನು ನಿರ್ಮಿಸಿದ್ದರು. ಸರ್ಕಾರವು ಕೆಂಪೇಗೌಡರೆಂಬ ಈ ಯುಗಪುರುಷನ ಜನ್ಮದಿನ ಆಚರಿಸುತ್ತಿರುವುದು ಇಂದಿನ‌ ಪೀಳಿಗೆಗೆ ಅವರ ಮಹಾನ್ ಕಾರ್ಯಗಳನ್ನು ತಿಳಿಯಲು ಸಹಕಾರಿಯಾಗಿದೆ ಎಂದರು.

ಒಕ್ಕಲಿಗರ ಸಂಘದ ಅಧ್ಯಕ್ಷ ಆರ್. ಅನಂತ ಕುಮಾರ್ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಎಲ್ಲಾ ಸಮುದಾಯಗಳ ವ್ಯಾಪಾರದ ಅನುಕೂಲಕ್ಕಾಗಿ ಪೇಟೆಗಳನ್ನು ನಿರ್ಮಿಸಿದ್ದರು. ಒಟ್ಟಾರೆ ಬೆಂಗಳೂರು ಎಂಬ ಮಹಾನಗರವನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ, ಕೆಂಪೇಗೌಡರಿಗೆ ಸಲ್ಲುತ್ತದೆ. ಇಂದು ಅವರು ನಿರ್ಮಿಸಿರುವ ಬೆಂಗಳೂರು ನಗರವು ಕೋಟ್ಯಂತರ ಜನರು ನೆಮ್ಮದಿಯಿಂದ ಬದುಕುತ್ತಿರುವ ಆಶ್ರಯ ತಾಣವಾಗಿದೆ ಎಂದು ಶ್ಲಾಘಿಸಿದರು.

ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ಬೆಂಗಳೂರನ್ನು 500 ವರ್ಷಗಳ ಹಿಂದೆಯೇ ಜನ ಸಾಮಾನ್ಯರ ಅನುಕೂಲಕ್ಕಾಗಿ ಭವ್ಯವಾಗಿ ನಿರ್ಮಾಣ‌ ಮಾಡಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಪರಿಸರ ಪ್ರೇಮಿಯಾಗಿ ಆಗಿನ‌ ಕಾಲದಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಸುಂದರ ನಗರ ನಿರ್ಮಿಸಿದ್ದರಿಂದ ಈಗಿನ‌ ಆಧುನಿಕ‌ ಕಾಲಕ್ಕೂ ಉಪಯೋಗವಾಗಿದೆ ಹೇಳಿದರು.

ಕಾಂಗ್ರೆಸ್ ಮುಖಂಡ ಶಶಿಧರ್ ಮಾತನಾಡಿದರು, ಡಿ.ವೈ.ಎಸ್.ಪಿ ಲೋಕೇಶ್, ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ,ನಗರಸಭೆ ಆಯುಕ್ತ ಕೃಷ್ಣಮೂರ್ತಿ, ಕಸಾಪ ಅಧ್ಯಕ್ಷ ಚಂದ್ರಶೇಖರ್, ಮಾಜಿ ಜಿಪಂ ಸದಸ್ಯ ಹನುಮಪ್ಪ, ತಾಪಂ ಮಾಜಿ ಅಧ್ಯಕ್ಷ ರೇವಣ್ಣ, ಕರವೇ ತಾಲೂಕು ಅಧ್ಯಕ್ಷ ಹೇಮಂತ್ ಕುಮಾರ್, ನಗರ ಅಧ್ಯಕ್ಷ ಕಿರಣ್ ಕುಮಾರ್, ರೈತ ಸಂಘದ ಬೋರನಕೊಪ್ಪಲು ಶಿವಲಿಂಗಪ್ಪ, ಒಕ್ಕಲಿಗರ ಸಂಘದ ಉಪಾಧ್ಯಕ್ಷ ರಾಮಣ್ಣ, ದುಮ್ಮೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಗಿರೀಶ್ ತಿರುಪತಿಹಳ್ಳಿ, ಧರ್ಮೇಶ್, ನಗರಸಭಾ ಸದಸ್ಯರಾದ ರಮೇಶ್‌, ವೆಂಕಟಮುನಿ, ಮೇಲುಗಿರಿ ಗೌಡ, ಕರವೇ ತುಳಸಿದಾಸ್,ಗಣೇಶ್, ಕೃಷ್ಣ ದರ್ಶನ್, ರಾಘು, ಶಿಕ್ಷಕ ಸತೀಶ್ ಇನ್ನಿತರರು ಉಪಸ್ಥಿತರಿದ್ದರು.