ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಬೆಂಗಳೂರು ಸಿಲಿಕಾನ್ ಸಿಟಿಯಾಗಿ ವಿಶ್ವವೇ ತಿರುಗಿ ನೋಡುವಂತೆ ಬೆಳೆದಿದೆ ಎಂದರೆ ಅದಕ್ಕೆ ನಾಡಪ್ರಭು ಕೆಂಪೇಗೌಡರು ಕಾರಣ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ಹೇಳಿದರು.

ಪಟ್ಟಣದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಘಟಕದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ೫೧೭ನೇ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ನಗರವನ್ನು ವ್ಯವಸ್ಥಿತವಾಗಿ ನಿರ್ಮಿಸುವಲ್ಲಿ ಕೆಂಪೇಗೌಡರು ಪ್ರಮುಖ ಪಾತ್ರ ವಹಿಸಿದ್ದಾರೆಂದರು. ಅಂದು ಅವರು ನಿರ್ಮಿಸಿದ ಬೆಂಗಳೂರು ನಗರ ಇಂದು ಬೃಹದಾಕಾರವಾಗಿ ಬೆಳೆದು ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿದೆ. ಬೆಂಗಳೂರು ಗಳೂರು ನಗರ ನಿರ್ಮಿಸಿದ ಕೆಂಪೇಗೌಡರ ಹೆಸರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡಲಾಗಿದ್ದು, ಕೆಂಪೇಗೌಡರ ೧೦೮ ಅಡಿ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಮಣ್ಣಿನ ಕೋಟೆಯಿಂದ ಕಟ್ಟಿದ ಹಳ್ಳಿ ಪ್ರದೇಶ ವಾಗಿದ್ದ ಬೆಂದಕಾಳೂರನ್ನು ನಗರವಾಗಿ ನಿರ್ಮಿಸಿ ದೇಶ-ವಿದೇಶಿಗರಿಗೆ ಪರಿಚಯಿಸಲಾ ಗಿದೆ ಎಂದು ತಿಳಿಸಿದರು.ಕೆಂಪೇಗೌಡರ ಶೌರ್ಯ, ದೂರದೃಷ್ಟಿಗೆ ಹೆಸರಾಗಿದ್ದು ಬೆಂಗಳೂರು ನಗರವನ್ನು ಜಾತಿ ಆಧಾರಿತವನ್ನಾಗಿ ಮಾಡದೇ ವೃತ್ತಿ ಆಧಾರಿತ ಭೂಮಿಯನ್ನಾಗಿ ಮಾಡಿ ನೂರಾರು ವ? ಗಳ ಹಿಂದೆಯೇ ರಸ್ತೆ ಬದಿಯ ಸಾಲುಮರಗಳು, ದನ-ಕರು, ಪ್ರಾಣಿ-ಪಕ್ಷಿಗಳು ನೀರು ಕುಡಿ ಯಲು ನೀರಿನ ತೊಟ್ಟಿ ಹಾಗು ರೈತರ ಅನುಕೂಲಕ್ಕಾಗಿ ಕೆರೆಕಟ್ಟೆಗಳ ನಿರ್ಮಾಣ ಮಾಡಿದ ಗೌಡರು ತಮ್ಮ ಅಧಿಕಾರದಲ್ಲಿ ಜಾತ್ಯಾತೀತ ಮನೋಭಾವನೆ ಯೊಂದಿಗೆ ಆಳ್ವಿಕೆ ಮಾಡಿದ್ದಾರೆಂದರು.ಚನ್ನರಾಯಪಟ್ಟಣದಲ್ಲಿ ಗುರುಭವನದ ಬಳಿ ಇರುವ ಕೆಂಪೇಗೌಡ ವೃತ್ತದಲ್ಲಿ ಮುಂಬರುವ ಕೆಂಪೇಗೌಡ ಜಯಂತಿ ಒಳಗೆ ಅಶ್ವರೂಢ ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ನಿರ್ಧಾರ ಮಾಡಲಾಗುವುದು, ಜು.೫ರಂದು ನವೋದಯ ವಿದ್ಯಾಸಂಸ್ಥೆಯಲ್ಲಿ ಸಭೆ ಕರೆಯಲಾಗಿದೆ. ಎಲ್ಲಾ ಸಂಘಟನೆ ಗಳ ಮುಖಂಡರು ಭಾಗವಹಿಸಿ ಸಲಹೆ ಸಹಕಾರ ನೀಡಬೇಕೆಂದರು.ಅನುದಾನಕ್ಕೆ ಮನವಿ:

ಚನ್ನರಾಯಪಟ್ಟಣ ಘಟಕದಿಂದ ನಿತ್ಯ ೧೦೭ ಬಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಅದೇ ರೀತಿ ಬೇರೆ ಜಿಲ್ಲೆಯಿಂದ ಸಾವಿರಕ್ಕೂ ಹೆಚ್ಚು ಬಸ್ ಬಂದು ಹೋಗುತ್ತವೆ. ಪ್ರಯಾಣಿಕರ ಅನು ಕೂಲಕ್ಕಾಗಿ ನಿಲ್ದಾಣದಲ್ಲಿ ಕುಡಿಯುವ ನೀರು ಸೌಕರ್ಯ, ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಪ್ರವೇಶ ದ್ವಾರದ ಬಲ ಭಾಗದಲ್ಲಿ ಹೈಮಾಸ್ಟ್ ದೀಪ ಅಳವಳಡಿಸಲಾಗಿದೆ. ಮುಂದಿನ ದಿನಗಳಲ್ಲಿ ಎಡಭಾಗದಲ್ಲೂ ಬೆಳಕಿನ ವ್ಯವಸ್ಥೆ ಮಾಡಲಾಗುವುದು. ಡಿಪೋ ಅಭಿವೃದ್ಧಿಗೆ ಒಂದು ಕೋಟಿ ರು. ಅನುದಾನ ಬಿಡುಗಡೆ ಮಾಡುವಂತೆ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದ್ದು, ಅನುದಾನ ಲಭ್ಯತೆ ಆಧಾರದ ಮೇಲೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದೆಂದು ತಿಳಿಸಿದರು.ಬಸ್ ನಿಲ್ದಾಣದಲ್ಲಿ ಹಾಸನದ ಮತ್ತು ಗ್ರಾಮಾಂತರ ಭಾಗದ ಬಸ್ ನಿಲುಗಡೆ ಜಾಗದಲ್ಲಿ ಪ್ರಯಾಣಿಕರು ಬಿಸಿಲಿನಲ್ಲಿ ಕಾಯುವಂತಾಗಿದೆ. ಹಾಗಾಗಿ ೧೭ ಲಕ್ಷ ರು. ವೆಚ್ಚದಲ್ಲಿ ಶೆಲ್ಟರ್‌ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿ ಸಿದ್ದು ಶೀಘ್ರವಾಗಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ನವೋದಯ ವಿದ್ಯಾ ಶಾಲೆಯ ಉಪನ್ಯಾಸಕ ಮಂಜಪ್ಪ ಕೆಂಪೇಗೌಡರ ಜೀವನ ಚರಿತ್ರೆ ಕುರಿತು ಸವಿವರವಾಗಿ ತಿಳಿಸಿಕೊಟ್ಟರು. ಸಾರಿಗೆ ಸಂಸ್ಥೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತ ರಾದ ಸುರೇಶ್ ಮೇಟಿಕೆರೆ, ಬಸವರಾಜು, ಹೊನ್ನೇಗೌಡ, ಹುಚ್ಚೇಗೌಡ, ಸಿ.ಎಸ್. ಮಧುಸೂದನ್, ಚಿದಾನಂದ್ ದ್ಯಾವನೂರು, ಕುಶಲಕರ್ಮಿ ಎನ್.ರಾಮಚಂದ್ರ ಅವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.ಘಟಕ ವ್ಯವಸ್ಥಾಪಕ ಜ್ಞಾನೇಶ್ ಅಧ್ಯಕ್ಷತೆ ವಹಿಸಿದ್ದರು, ಬಿಜೆಪಿ ಮುಖಂಡ ಸಿ.ಆರ್‌. ಚಿದಾನಂದ, ಸಾರ್ವಜನಿಕ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಧರಣೇಶ್, ಕೆಂಪೇಗೌಡ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಆನಂದ್ ಕಾಳೇನಹಳ್ಳಿ, ಎಪಿಎಂಸಿ ಮಾಜಿ ಅಧ್ಯಕ್ಷ ವಳಗೇರಹಳ್ಳಿ ಮಂಜುನಾಥ್, ಸಾರಿಗೆ ಸಂಸ್ಥೆಯ ಎಇಇ ಯಾದವ್ ಮತ್ತಿತರರಿದ್ದರು.