ಸಾರಾಂಶ
ಕೆಂಪೇಗೌಡ ದಿನಾಚರಣೆ । ನಾಡಪ್ರಭು ಬೆಂಗಳೂರಿನ ಕಾಮಧೇನು । ಮಕ್ಕಳು ನಾಯಕನ ಗುಣ ಅಳವಡಿಸಿಕೊಳ್ಳಬೇಕು
ಕನ್ನಡಪ್ರಭ ವಾರ್ತೆ ಹಳೆಬೀಡುಕೆಲವು ಮಹಾನ್ ವ್ಯಕ್ತಿಗಳನ್ನು ಎಂದಿಗೂ ಮರೆಯಲು ಸಾಧ್ಯವಾಗುವುದಿಲ್ಲ. ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಸಾಧನೆಗಳು ಅಮರವಾಗಿರುತ್ತವೆ. ಇವರ ಸಾಲಿನಲ್ಲಿ ನಾಡಪ್ರಭು ಕೆಂಪೇಗೌಡ ಸೇರುತ್ತಾರೆ ಎಂದು ನಿವೃತ್ತ ಪ್ರಾಂಶುಪಾಲ ಎನ್.ಪುಟ್ಟರಾಜು ಹೇಳಿದರು.
ಇಲ್ಲಿನ ಕೆಪಿಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜು ಅವರಣದಲ್ಲಿ ತಾಲೂಕು ಜಾನಪದ ಪರಿಷತ್ತು ವತಿಯಿಂದ ಕೆಂಪೇಗೌಡರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಕೆಂಪೇಗೌಡರು ಕರ್ನಾಟಕದ ಬೆಂಗಳೂರಿನ ಕಾಮಧೇನು ಇದ್ದಂತೆ. ಇಂತಹ ಮಹಾನ್ ವ್ಯಕ್ತಿಗಳ ಕೊಡುಗೆಗಳ ಬಗ್ಗೆ ಧನ್ಯತಾಭಾವ ಮನಸ್ಸಿನಲ್ಲಿರಬೇಕು. ಕಾರಣ ಇಂತಹ ಬೆಂಗಳೂರು ಕಟ್ಟಿದ ಮಹಾನ್ ವ್ಯಕ್ತಿ ಕೆಂಪೇಗೌಡರನ್ನು ನಾವು ಎಂದಿಗೂ ಮರೆಯಲು ಸಾದ್ಯವಿಲ್ಲ’ ಎಂದು ಹೇಳಿದರು.ಒಂದು ನಗರ ಹೇಗಿರಬೇಕೆಂಬ ಸ್ಪಷ್ಟ ಕಲ್ಪನೆ ಕೆಂಪೇಗೌಡರಿಗೆ ಇತ್ತು. ಇಂತಹ ದೂರದೃಷ್ಟಿಯಿಂದ ನದಿಮೂಲ ಇಲ್ಲದ ಒಂದು ನಗರ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಆ ಮೂಲಕ ಕೆಂಪೇಗೌಡರು ಇಂದಿಗೂ ಅವರ ಆಡಳಿತ, ನಗರ ನಿರ್ಮಾಣದ ಯೋಜನೆ, ಅವರ ದೂರದೃಷ್ಟಿ ಹಲವಾರು ಅಂಶಗಳನ್ನು ಇಂದಿನ ಸರ್ಕಾರಗಳು ಅವಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಒಂದು ನಗರ ಹೇಗಿರಬೇಕು ಅಲ್ಲಿನ ಕಸುಬುಗಳು ಹಾಗೂ ಜನರ ಬದುಕಿನ ರೀತಿಗೆ ಹೊಂದಿಕೊಳ್ಳವ ರೀತಿ ಅರಿವಿದ್ದ ಕೆಂಪೇಡಗೌಡರು ಬೆಂಗಳೂರನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಿದರು. ಇಂತಹ ನಾಯಕನ ಗುಣಗಳನ್ನು ಆದರ್ಶಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ಬೇಲೂರು ತಾಲೂಕು ಜಾನಪದ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೈ.ಸಿ.ಸಿದ್ದೇಗೌಡ ಮಾತನಾಡಿ, ‘ಕೆಂಪೇಗೌಡರ ಇತಿಹಾಸದ ಕುರಿತು ನಮಗೆ ನಿಖರವಾದ ದಾಖಲೆಗಳು ಸಿಗುವುದಿಲ್ಲ. ಮುಖ್ಯವಾಗಿ ಜನಪದ ಸಾಹಿತ್ಯದಲ್ಲಿ, ಜನಪದ ಕಥೆಗಳಲ್ಲಿ, ಕೆಲ ಕಲ್ಲಿನ ಶಾಸನಗಳಲ್ಲಿ ಇತಿಹಾಸ ಕಂಡು ಬರುತ್ತದೆ’ ಎಂದು ಹೇಳಿದರು.ಬೇಲೂರು ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ, ಪತ್ರಕರ್ತ ಹೆಬ್ಬಾಳು ಹಾಲಪ್ಪ ಮಾತನಾಡಿ, ನೀರಾವರಿ ಕ್ಷೇತ್ರಕ್ಕೆ ಕೆಂಪೇಗೌಡರು ನೀಡಿದ ಕೊಡುಗೆ ಅಪಾರವಾಗಿದೆ. ಆದರೆ ಇಂದು ಅಧುನಿಕತೆ ನೆಪದಲ್ಲಿ ಕೆರೆ ಕಟ್ಟೆಗಳನ್ನು ಒತ್ತುವರಿ ನಡೆಸಿ ಮನೆ ಕೈಗಾರಿಕಾ ನಿರ್ಮಸಿದ್ದಾರೆ. ವಿಶೇಷವಾಗಿ ಕೆಂಪೇಗೌಡರು ಎಂದಿಗೂ ಒಂದು ಜಾತಿ, ಧರ್ಮ ವರ್ಗಕ್ಕೆ ಸೀಮಿತವಾಗಿಲ್ಲ. ಅವರು ಇಡೀ ಕುಲಕಸಬುಗಳಿಗೆ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿ ವ್ಯಾಪಾರ ವಹಿವಾಟಿಗೆ ಮುನ್ನುಡಿ ಬರೆದಿದ್ದಾರೆ ಎಂದು ಹೇಳಿದರು.
ಲೇಖಕಿ ಕಮಲಮ್ಮ ಮಾತನಾಡಿ, ಕೆಂಪೇಗೌಡರ ಕಾಲಘಟ್ಟದಲ್ಲಿ ಧಾರ್ಮಿಕ ಪರಂಪರೆಯ ಉಳಿಸಿ ಬೆಳೆಸಲು ಅವರು ನೀಡಿದ ಕೊಡುಗೆ ನಿಜಕ್ಕೂ ಅಪಾರವಾಗಿದೆ. ಅಂತೆಯೇ ಶೈಕ್ಷಣಿಕ, ಸಾಮಾಜಿಕ ಮತ್ತು ಪರಿಸರ ಕ್ಷೇತ್ರದ ಕೊಡುಗೆ ನೀಡಿದ್ದಾರೆ. ಅವರ ಜೀವನ ಇಂದಿನ ಯುವ ಪೀಳಿಗೆಗೆ ತಿಳಿಸುವ ಅಗತ್ಯವಿದೆ ಎಂದರು.ವಿದ್ಯಾರ್ಥಿಗಳಾದ ಪ್ರಮೋದ್, ಭೂಮಿಕಾ, ಭಾವನ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾಲೇಜು ಪ್ರಾಂಶುಪಾಲ ವಿನುತ, ಹಾಸನ ಪದವಿ ಪೂರ್ವ ಶಿಕ್ಷಣ ಸಂಸ್ಥೆ ನಿವೃತ್ತ ಅಧೀಕ್ಷಕಿ ಕಮಲಮ್ಮ, ಸಾಹಿತಿ ಇಂದಿರಮ್ಮ, ಉಪನ್ಯಾಸಕರಾದ ಧನಂಜಯ ಧರ್ಮೇಗೌಡ, ಬಸವರಾಜು, ರಾಘವೇಂದ್ರ, ರಮೇಶ್, ಗೋಮತಿ, ನಾಗರಾಜ್, ಲೋಕೇಶ್, ಮಹೇಶ ಕುಮಾರ್, ವೆಂಕಟೇಶ್ ಇದ್ದರು.