ಸಾರಾಂಶ
ಗುಂಡ್ಲುಪೇಟೆ: ಕೇರಳ ರಸ್ತೆಯ ರಾತ್ರಿ ಸಂಚಾರ ತೆರವು ಪ್ರಯತ್ನ ಖಂಡಿಸಿ ಏ. 6 ರಂದು ಪರಿಸರ ಪ್ರೇಮಿಗಳು, ವಿವಿಧ ಸಂಘಟನೆಗಳ ಆಶ್ರಯದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಅರಿಶಿನ ಬೆಳೆಗಾರರ ಒಕ್ಕೂಟದ ನಾಗಾರ್ಜುನ್ ಹೇಳಿದರು.
ಗುಂಡ್ಲುಪೇಟೆ: ಕೇರಳ ರಸ್ತೆಯ ರಾತ್ರಿ ಸಂಚಾರ ತೆರವು ಪ್ರಯತ್ನ ಖಂಡಿಸಿ ಏ. 6 ರಂದು ಪರಿಸರ ಪ್ರೇಮಿಗಳು, ವಿವಿಧ ಸಂಘಟನೆಗಳ ಆಶ್ರಯದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಅರಿಶಿನ ಬೆಳೆಗಾರರ ಒಕ್ಕೂಟದ ನಾಗಾರ್ಜುನ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇರಳ ಸರ್ಕಾರ ಹಾಗೂ ವೈನಾಡು ಸಂಸದರು ರಾತ್ರಿ ಸಂಚಾರ ತೆರವು ಮಾಡಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದರಿಂದಲೇ ರಾಜ್ಯ ಸರ್ಕಾರ ರಾತ್ರಿ ಸಂಚಾರ ವಿಚಾರದಲ್ಲಿ ತಲೆ ಹಾಕಿದೆ ಎಂದರು.ಕೇರಳ ಸರ್ಕಾರಕ್ಕೆ ರಾಜ್ಯ ಸರ್ಕಾರದ ಮಣಿದರೆ ಪರಿಸರವಾದಿಗಳು ಹಾಗೂ ಸಾರ್ವಜನಿಕರು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾಡಂಚಿನ ಜನರು ಹಾಗೂ ತಾಲೂಕಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಏ.6 ರಂದು ನಡೆಯುವ ಪಾದಯಾತ್ರೆಯಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು. ಯುವ ಮುಖಂಡ ಮಡಹಳ್ಳಿ ಮಣಿ ಮಾತನಾಡಿ, ರಾತ್ರಿ ನಿಷೇಧವಾಗುವ ಮುಂಚೆ ಹೆದ್ದಾರಿ ಅಪಘಾತದಲ್ಲಿ ಪ್ರಾಣಿಗಳ ಸಾವು ಹೆಚ್ಚಿತ್ತು. ಆದರೆ ನಿಷೇಧದ ನಂತರ ಕಡಿಮೆಯಾಗಿದೆ ಎಂದರು. ಪರಿಸರ ಹೋರಾಟಗಾರ್ತಿ ತಾರಾ ನಾಗೇಂದ್ರ ಮಾತನಾಡಿ, ರಾತ್ರಿ ಅವಕಾಶ ನೀಡಿದರೆ ವನ್ಯಜೀವಿಗಳಿಗೆ ತೊಂದರೆಯಾಗಲಿದೆ, ಕಾಡು ನಾಶವಾದರೆ ಪ್ರಾಣಿ ಸಂಕುಲವೆ ನಶಿಸುತ್ತದೆ ಹಾಗಾಗಿ ರಾತ್ರಿ ಸಂಚಾರ ನಿಷೇಧ ಹಿಂಪಡೆದರೆ ಉಗ್ರ ಹೋರಾಟ ಎಂದು ಎಚ್ಚರಿಸಿದರು.