ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಕೇರಳಾಪುರ ಗ್ರಾಮ ಪಂಚಾಯಿತಿ

| Published : Mar 19 2024, 12:50 AM IST

ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಕೇರಳಾಪುರ ಗ್ರಾಮ ಪಂಚಾಯಿತಿ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಾಪಟ್ಟಣದ ಕೇರಳಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸುಮಾರು ೩ ಸಾವಿರ ಮನೆಗಳಿದ್ದು ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾತದಾರರನ್ನು ಹೊಂದಿರುವ ಗ್ರಾಮಗಳಲ್ಲಿ ಒಂದಾಗಿದೆ.

ಅರಕಲಗೂಡು ಅಂಚಿನ ಗ್ರಾಮ । 4 ತಾಲೂಕು, 40ಕ್ಕೂ ಹೆಚ್ಚು ದೇವಸ್ಥಾನ । ತಾಲೂಕಲ್ಲಿ ಹೆಚ್ಚು ಮತದಾರರ ಗ್ರಾಮ

ಜಯ್‌ಕುಮಾರ್ ಬಸವಾಪಟ್ಟಣ

ಕನ್ನಡಪ್ರಭ ವಾರ್ತೆ ಬಸವಾಪಟ್ಟಣ

ಇಲ್ಲಿಗೆ ಸಮೀಪದ ಕೇರಳಾಪುರ ಗ್ರಾಮವು ಅರಕಲಗೂಡು ತಾಲೂಕಿನ ಅಂಚಿನ ಗ್ರಾಮವಾಗಿದ್ದು ೪ ತಾಲೂಕುಗಳ ಸಂಗಮ ಸ್ಥಳವಾಗಿದೆ. ಕಾವೇರಿ ನದಿಯ ಎಡದಂಡೆಯ ಮೇಲೆ ಕೇಂದ್ರೀಕೃತವಾದ ಈ ಗ್ರಾಮದಲ್ಲಿ ಸುಮಾರು ೪೦ಕ್ಕೂ ಹೆಚ್ಚು ದೇವಸ್ಥಾನಗಳಿದ್ದು, ಗ್ರಾಮವು ಸಾಮರಸ್ಯದ ನೆಲೆಯಾಗಿದೆ.

ಕೇರಳಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸುಮಾರು ೩ ಸಾವಿರ ಮನೆಗಳಿದ್ದು ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾತದಾರರನ್ನು ಹೊಂದಿರುವ ಗ್ರಾಮಗಳಲ್ಲಿ ಒಂದಾಗಿದೆ. ಸುಮಾರು ೧೬ ಜನ ಗ್ರಾಮ ಪಂಚಾಯಿತಿಯ ಸದಸ್ಯರನ್ನು ಹೊಂದಿದ ಗ್ರಾಮ ಪಂಚಾಯಿತಿಯಾಗಿದೆ. 2023ರ ಆಗಸ್ಟ್‌ 2 ರಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜ್ಯೋತಿ ಕುಮಾರ್‌ ಆಯ್ಕೆಯಾದರು. ಈ ಅವಧಿಯಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ಅವಿರತವಾಗಿ ಗ್ರಾಮ ಪಂಚಾಯಿತಿಯಲ್ಲಿ ಸಾಗಿ ಗ್ರಾಮವು ಅಭಿವೃದ್ದಿ ಪಥದತ್ತ ಮುನ್ನಡೆಯುತ್ತಿದೆ. ಕ್ಷೇತ್ರದ ಶಾಸಕ ಎ.ಮಂಜು ಸಹಕಾರದಿಂದ ಗ್ರಾಮದಲ್ಲಿ ಅನೇಕ ಅಭಿವೃದ್ದಿ ಕಾರ್ಯದಿಂದ ಕೇರಳಾಪುರ ಗ್ರಾಮವು ಮಾದರಿ ಗ್ರಾಮವಾಗಿ ಮಾರ್ಪಡುತ್ತಿದೆ.

ಉದ್ಯೋಗಖಾತ್ರಿ ಯೋಜನೆಯಲ್ಲಿ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ನೆನೆಗುದಿಗೆ ಬಿದ್ದಿದ್ದ ವಾಣಿಜ್ಯ ಮಳಿಗೆಗಳ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಿ ಗ್ರಾಮ ಪಂಚಾಯಿತಿಯ ಅದಾಯವನ್ನು ಹೆಚ್ಚಿಸಲಾಗಿದೆ. ಗ್ರಾಮದಲ್ಲಿನ ಅನುಕೂಲಕ್ಕಾಗಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಮತ್ತು ಗ್ರಾಮದ ಸಾರ್ವಜನಿಕ ಸ್ಮಶಾನಕ್ಕಾಗಿ ಜಾಗವನ್ನು ಗುರುತಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಗ್ರಾಮ ಪಂಚಾಯಿತಿಯಲ್ಲಿ ಕಸ ಸಾಗಾಣಿಕೆಗಾಗಿ ವಾಹನವನ್ನು ಖರೀದಿಸಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೩ ಸಾವಿರ ಮನೆಗಳಿಗೆ ಜಲಜೀವನ್ ಮಿಷನ್ ಯೋಜನೆ ಅನ್ವಯ ಮನೆ ಮನೆಗೆ ಗಂಗೆಯ ಮೂಲಕ ೩ ಸಾವಿರ ನಲ್ಲಿಗಳ ಸಂಪರ್ಕಕ್ಕೆ ಚಾಲನೆ ನೀಡಲಾಗಿದೆ.

ಈ ಹಿಂದೆಯೇ ಗ್ರಾಮ ಪಂಚಾಯಿತಿಯಿಂದ ಕೃಷಿಪತ್ತಿನ ಸಹಕಾರಿ ಸಂಘ ಮತ್ತು ಹಾಲು ಉತ್ಪಾದಕರ ಸಹಕಾರಿ ಸಂಘಗಳ ನೂತನ ಕಟ್ಟಡ ನಿರ್ಮಾಣಕ್ಕೆ ನಿವೇಶನವನ್ನು ನೀಡಲಾಗಿದೆ. ಗ್ರಾಮದ ಸ್ವಚ್ಛತೆ, ನೀರು ಸರಬರಾಜು, ಬೀದಿ ದೀಪ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಎಲ್ಲಾ ಅಭಿವೃದ್ದಿ ಕಾರ್ಯಗಳಲ್ಲಿ ಕ್ಷೇತ್ರದ ಶಾಸಕ ಎ.ಮಂಜುರವರ ಸಹಕಾರ ಮತ್ತು ಮಾರ್ಗದರ್ಶನದಿಂದ ಗ್ರಾಮವು ಪ್ರಗತಿ ಪಥದತ್ತ ಮುನ್ನಡೆಯುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಜ್ಯೋತಿ ಕುಮಾರ್‌ ತಿಳಿಸಿದ್ದಾರೆ.

ಅಲ್ಲದೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಮಶೆಟ್ಟಿ, ಸದಸ್ಯರಾದ ಕೆ.ಎಂ.ಶಿವಣ್ಣ, ಶುಭ, ರಾಮೇಗೌಡ, ನವೀನ, ಮಂಜುನಾಥ್, ರೇಣುಕ, ಮಮತಾ, ಗಂಗಾಮಣಿ, ಕೃಷ್ಣೆಗೌಡ, ಚಲುವಯ್ಯ, ಸುನಂದ, ರತ್ನಮ್ಮ, ಚಂದ್ರು, ರವಿ ಇವರ ಸೂಕ್ತ ಸಲಹೆ ಸಹಕಾರದಿಂದ ಕೇರಳಾಪುರ ಗ್ರಾಮ ಪಂಚಾಯಿತಿಯು ಅಭಿವೃದ್ದಿಯತ್ತ ಸಾಗಿದೆ. ಅಭಿವೃದ್ದಿ ಕಾರ್ಯಗಳಿಗೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಲೋಕೇಶ್ ಮತ್ತು ಸಿಬ್ಬಂದಿ ವರ್ಗವೂ ಸಹ ಶ್ರಮಿಸುತ್ತಿದೆ ಎಂದು ಎಂದು ಜ್ಯೋತಿ ಕುಮಾರ್ ತಿಳಿಸಿದ್ದಾರೆ. ಕೇರಳಾಪುರ ಗ್ರಾಮ ಪಂಚಾಯಿತಿ ಸದಸ್ಯರು.