ಕೆರೆ ಗ್ರಾಮ ಠಾಣಾಜಾಗ ಒತ್ತುವರಿ: ತೀರ್ಥಪ್ಪ ಏಕಾಂಗಿ ಹೋರಾಟ

| Published : Jan 18 2024, 02:01 AM IST

ಸಾರಾಂಶ

ತಾಲೂಕಿನ ಬಿಕ್ಕೋಡು ಹೋಬಳಿಯ ಕೆಸಗೋಡು ಗ್ರಾಪಂ ವ್ಯಾಪ್ತಿಯ ಕೆಸಗೋಡು, ಹೊಳಲು, ಹೊಸಳ್ಳಿ ಗ್ರಾಮಗಳ ಕೆರೆಗಳು ಹಾಗೂ ಗ್ರಾಮಠಾಣಾ ಜಾಗದ ಒತ್ತುವರಿ ಮಾಡಿರುವ ಪ್ರಭಾವಿ ವ್ಯಕ್ತಿಗಳ ವಿರುದ್ಧ ಏಕಾಂಗಿ ಹೋರಾಟಗಾರ ತೀರ್ಥಪ್ಪ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಬಿಕ್ಕೋಡು ಹೋಬಳಿಯ ಕೆಸಗೋಡು ಗ್ರಾಪಂ ವ್ಯಾಪ್ತಿಯ ಕೆಸಗೋಡು, ಹೊಳಲು, ಹೊಸಳ್ಳಿ ಗ್ರಾಮಗಳ ಕೆರೆಗಳು ಹಾಗೂ ಗ್ರಾಮಠಾಣಾ ಜಾಗದ ಒತ್ತುವರಿ ಮಾಡಿರುವ ಪ್ರಭಾವಿ ವ್ಯಕ್ತಿಗಳ ವಿರುದ್ಧ ಏಕಾಂಗಿ ಹೋರಾಟಗಾರ ತೀರ್ಥಪ್ಪ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಏಕಾಂಗಿ ಹೋರಾಟಗಾರ ತೀರ್ಥಪ್ಪ ಕೆಸಗೋಡು ಗ್ರಾಪಂ ವ್ಯಾಪ್ತೀಯ ಕೆಸಗೋಡು ಮತ್ತು ಹೊಳಲು ,ಹೊಸಳ್ಳಿ ಗ್ರಾಮಗಳ ಕೆರೆಗಳು ಸುಮಾರು ೨೪ ಎಕರೆ ಇದ್ದು ೧೨ ಎಕರೆ ಒತ್ತುವರಿಯಾಗಿದೆ ಈ ಕೆರೆಗಳನ್ನು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುತ್ತಾರೆ. ಸುಮಾರು ೮ ವರ್ಷಗಳ ಹಿಂದೆಯೇ ಒತ್ತುವರಿಯಾಗಿದ್ದು ಗ್ರಾಮದಲ್ಲಿ ದನಕರುಗಳು ನೀರು ಕುಡಿಯುವುದಕ್ಕೂ ಕೆರೆಗಳಿಲ್ಲದಂತಾಗಿದೆ. ಬೇಸಿಗೆಯಲ್ಲಿ ಬೆಳೆಗಳಿಗೆ ನೀರನ್ನು ಹಾಯಿಸಲು ಸಹ ಕಷ್ಟವಾಗಿದೆ ಎಂದು ತೀರ್ಥಪ್ಪ ತಿಳಿಸಿದರು.ಕೆಸಗೋಡು ಗ್ರಾಪಂ ವ್ಯಾಪ್ತಿಯ ಮೂಡಲಗೆರೆ ಒಳಲು ಗ್ರಾಮಕ್ಕೆ ಸಂಬಂಧಪಟ್ಟಂತೆ ಗ್ರಾಮಠಾಣಾ ಜಾಗ ೫೦ ಎಕರೆ ಇದ್ದು ಸುಮಾರು ೩೦ಎಕರೆಯನ್ನು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿದ್ದಾರೆ.

ಈ ಸಂಭಂದ ಹಿಂದಿನ ತಹಸೀಲ್ದಾರ್‌ಗಳಿಗೂ ಹಾಗೂ ಈಗಿನ ತಹಸೀಲ್ದಾರ್ ಅವರಿಗೂ ಮನವಿಯನ್ನು ನೀಡಿದ್ದೇವೆ‌. ಅವರು ಸ್ಥಳಕ್ಕೆ ಆಗಮಿಸಿ ಕೆರೆ ಒತ್ತುವರಿಯನ್ನು ವೀಕ್ಷಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಕಲೆ ಹಾಕಲು ಸೂಚಿಸಿದ್ದಾರೆ. ಸುಮಾರು ೪ ತಿಂಗಳು ಕಳೆದರೂ ಸಹ ಇದರ ಬಗ್ಗೆ ಯಾವುದೇ ಅಧಿಕಾರಿಗಳು ಗಮನ ಹರಿಸಿಲ್ಲ. ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿಗಳು ಬೆಳೆಯನ್ನು ಬೆಳೆಯುತ್ತಲೆ ಇದ್ದಾರೆ. ಗ್ರಾಪಂ ಅಧ್ಯಕ್ಷರು ಅಥವಾ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಯಾರೂ ಸಹ ಇದರ ಬಗ್ಗೆ ಗಮನ ಹರಿಸಿಲ್ಲ. ಅಧಿಕಾರಿಗಳು ಕೆರೆ ಒತ್ತುವರಿಯಾಗಿದ್ದನ್ನು ಬಿಡಿಸಿಕೊಡಬೇಕು. ನಮಗೆ ನ್ಯಾಯ ದೊರಕದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.