ಕೆರೆಕಾಡು ಗ್ರಾಮೋತ್ಸವ ಗೂಡು ದೀಪ ಸ್ಪರ್ಧೆ 2024

| Published : Oct 29 2024, 12:51 AM IST / Updated: Oct 29 2024, 12:52 AM IST

ಸಾರಾಂಶ

ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಹಾಗೂ ವಿವಿಧ ಸಂಸ್ಥೆಗಳ ಸಹಕಾರದಲ್ಲಿ ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಗ್ರಾಮೋತ್ಸವ ಗೂಡು ದೀಪ ಸ್ಪರ್ಧೆ ಕಾರ್ಯಕ್ರಮ ನಡೆಯಿತು.ಉದ್ಯಮಿ ಸುರೇಶ್ ರಾವ್, ಶ್ರೀನಿಧಿ ಪುನರೂರು ದೀಪ ಹಚ್ಚಿ, ಭಾರತ ಮಾತೆ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೂಡು ದೀಪ ಏರಿಸುವ ಮೂಲಕ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಹಾಗೂ ವಿವಿಧ ಸಂಸ್ಥೆಗಳ ಸಹಕಾರದಲ್ಲಿ ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಗ್ರಾಮೋತ್ಸವ ಗೂಡು ದೀಪ ಸ್ಪರ್ಧೆ ಕಾರ್ಯಕ್ರಮ ನಡೆಯಿತು.ಉದ್ಯಮಿ ಸುರೇಶ್ ರಾವ್, ಶ್ರೀನಿಧಿ ಪುನರೂರು ದೀಪ ಹಚ್ಚಿ, ಭಾರತ ಮಾತೆ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೂಡು ದೀಪ ಏರಿಸುವ ಮೂಲಕ ಉದ್ಘಾಟಿಸಿದರು. ಮಂಗಳೂರು ವಿಭಾಗ ಗ್ರಾಮ ವಿಕಾಸದ ಸಂಯೋಜಕ ಜಿತೇಂದ್ರ ದೀಪಾವಳಿ ಹಬ್ಬದ ಪರಿಕಲ್ಪನೆ ಬಗ್ಗೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಧಾಕರ್ ರಾವ್ ಎಸ್‌.ಕೋಡಿ ವಹಿಸಿದ್ದರು.

ಪ್ರೇಮ ಶಂಕರ್ ಗೋಳಿಜೋರ, ರಾಘವೇಂದ್ರ ರಾವ್ , ಅನಂತ ಪದ್ಮನಾಭ, ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳು ಇದ್ದರು.

ತೀರ್ಪುಗಾರರಾಗಿ ಶಂಕರ್ ಮಾಸ್ಟರ್ ಗೋಳಿಜಾರ, ಶಶಿ ಆಚಾರ್ಯ ಅಂಗರಗುಡ್ಡೆ ಸಹಕರಿಸಿದರು

ಮಾಧವ ಕೆರೆಕಾಡು ಪ್ರಾಸ್ತಾವಿಕ ಮಾತನಾಡಿದರು. ಐಶ್ವರ್ಯ ಪವನ್ ಸ್ವಾಗತಿಸಿದರು.

ಗಾಯತ್ರಿ ರಾಜೇಶ್ ವಂದಿಸಿದರು ಉಷಾ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

ಗೂಡು ದೀಪ ಸ್ಪರ್ಧೆ ವಿಜೇತರು. ಸಾಂಪ್ರದಾಯಿಕ ವಿಭಾಗ ಪ್ರಥಮ: ಸಂಜೀವ ಪೂಜಾರಿ, ದ್ವಿತೀಯ: ಹರಿಶ್ಚಂದ್ರ ಕೌಶಿಕ್ ಶೆಟ್ಟಿಗಾರ್, ತೃತೀಯ: ಸೌರಭ. ಎನ್‌. ಭಟ್, ಆಧುನಿಕ ವಿಭಾಗ: ಪ್ರಥಮ: ಚಿನ್ಮಯ್ ಶೆಟ್ಟಿಗಾರ್, ದ್ವಿತೀಯ: ವಿಶ್ವಾಸ್ ವೈ. ಆಚಾರ್ಯ, ತೃತೀಯ: ನಮನ್ ಕೆರೆಕಾಡು

ವಿಜೇತರಿಗೆ ನಗದು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಭಾಗವಹಿಸಿದ ಎಲ್ಲರಿಗೂ ಪ್ರೋತ್ಸಾಹ ನಗದು ನೀಡಿ ಗೌರವಿಸಲಾಯಿತು.