ಗಾಳಿ ವಿದ್ಯುತ್ ಯಂತ್ರಗಳನ್ನು ಅಳವಡಿಸಲು ಬಂದಿರುವ ಬೇರೆ ಬೇರೆ ರಾಜ್ಯಗಳ ಕಾರ್ಮಿಕರು ಕೆಲಸ ಮುಗಿಸಿ ತಡರಾತ್ರಿ ಮನೆಗೆ ತೆರಳುತ್ತಾರೆ. ಅವರನ್ನು ಜನರು ಅನುಮಾನದಿಂದ ನೋಡುವಂತಾಗಿದೆ.
ರಿಯಾಜಅಹ್ಮದ ಎಂ. ದೊಡ್ಡಮನಿ
ಡಂಬಳ: ಡಂಬಳ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆದ ಕೃಷಿ ಉಪಕರಣಗಳು, ವಾಹನಗಳ ಬ್ಯಾಟರಿ ಮತ್ತು ಟೈರ್ ಕಳ್ಳತನ ಗ್ರಾಮಸ್ಥರ ನಿದ್ದೆಗೆಡಿಸಿದೆ.ಲಾರಿ ಮತ್ತು ಟಿಪ್ಪರ್ ಬ್ಯಾಟರಿ ಹಾಗೂ ಬೊಲೆರೋ ವಾಹನದ ಟೈರ್‌ಗಳನ್ನು ಈ ಪ್ರದೇಶದಲ್ಲಿ ಪದೇ ಪದೇ ಕಳವು ಮಾಡಲಾಗುತ್ತಿದೆ. ಅಂತಹ ಹಲವು ಪ್ರಕರಣಗಳು ನಡೆದಿವೆ. ಈಗ ಗ್ರಾಮಸ್ಥರು ಹೊರಗಿನವರು ಯಾರೇ ಬಂದರೂ ಅನುಮಾನದಿಂದ ನೋಡುವಂತಾಗಿದೆ.
ಡಂಬಳ ಹೊರಠಾಣೆ ವ್ಯಾಪ್ತಿಗೆ 24 ಹಳ್ಳಿಗಳು ಬರುತ್ತವೆ. ರಾಷ್ಟ್ರೀಯ ಹೆದ್ದಾರಿ, ಐತಿಹಾಸಿಕ ದೇವಾಲಯಗಳು, ಮಠಗಳು, ಸಸ್ಯ ಸಂಪತ್ತು ಹೊಂದಿರುವ ಕಪ್ಪತ್ತಗುಡ್ಡ, 10 ಗ್ರಾಪಂ ಕಟ್ಟಡಗಳು, ನೂರಾರು ಗಾಳಿಯಂತ್ರಗಳು, ಸಾವಿರಾರು ಎಕರೆಗಳಲ್ಲಿ ಸೋಲಾರ್, ಶಾಲೆ, ಕಾಲೇಜುಗಳು, ಆಸ್ಪತ್ರೆಗಳ ಸುರಕ್ಷತೆ ನೋಡಿಕೊಳ್ಳಲು ಒಬ್ಬನೇ ಒಬ್ಬ ಪೊಲೀಸ್ ಸಿಬ್ಬಂದಿ ಕೂಡ ಇರುವುದಿಲ್ಲ.ಗ್ರಾಮೀಣ ಭಾಗದಲ್ಲಿ ಜಮೀನುಗಳಿಗೆ ತೆರಳಲು ರೈತ ಮಹಿಳೆಯರು ಅಂಜುವ ಸ್ಥಿತಿ ಉಂಟಾಗಿದೆ. ಕೆಲವರು ಮನೆ ಭದ್ರತೆಗೆ ಕಬ್ಬಿಣದ ಗ್ರಿಲ್ ಅಳವಡಿಸಿಕೊಳ್ಳತೊಡಗಿದ್ದಾರೆ. ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳತೊಡಗಿದ್ದಾರೆ. ರಾತ್ರಿ ವೇಳೆ ತಿರುಗಾಡಲು ಕೆಲವರು ಹೆದರುತ್ತಿದ್ದಾರೆ.
ಗಾಳಿ ವಿದ್ಯುತ್ ಯಂತ್ರಗಳನ್ನು ಅಳವಡಿಸಲು ಬಂದಿರುವ ಬೇರೆ ಬೇರೆ ರಾಜ್ಯಗಳ ಕಾರ್ಮಿಕರು ಕೆಲಸ ಮುಗಿಸಿ ತಡರಾತ್ರಿ ಮನೆಗೆ ತೆರಳುತ್ತಾರೆ. ಅವರನ್ನು ಜನರು ಅನುಮಾನದಿಂದ ನೋಡುವಂತಾಗಿದೆ.ಇತ್ತೀಚಿನ ದಿನಗಳಲ್ಲಿ ಗ್ರಾಮದಲ್ಲಿ ಹಲವು ಕಳ್ಳತನಗಳು ನಡೆದಿವೆ. ರೈತರ ಜಮೀನುಗಳಲ್ಲಿ ಇಟ್ಟಿರುವ ಟ್ರ್ಯಾಕ್ಟರ್ ಕುಂಟೆ, ರಂಟೆ, ಬಿತ್ತುವ ಯಂತ್ರ, ಹನಿ ನೀರಾವರಿ ಯೋಜನೆಯ ಉಪಕರಣಗಳು ಕಳ್ಳತನವಾಗಿವೆ.
ಟ್ರ್ಯಾಕ್ಟರ್ ಟ್ರೇಲರ್ ಕಳ್ಳತನ: ಬೃಹತ್ ಗಾತ್ರದ ಗಾಳಿ ಯಂತ್ರಗಳಲ್ಲಿ ಅಳವಡಿಸಿರುವ ಲಕ್ಷಾಂತರ ಬೆಲೆ ಬಾಳುವ ತಂತಿಗಳ ಕಳ್ಳತನ ನಡೆದಿವೆ. ಅಷ್ಟೇ ಅಲ್ಲದೆ ಸಾಕು ಪ್ರಾಣಿಗಳಾದ ಕುರಿ, ಆಡು, ಆಕಳುಗಳ ಕಳ್ಳತನ ಸಾಮಾನ್ಯವಾಗಿದೆ. ಬಸ್ ನಿಲ್ದಾಣದ ಪಕ್ಕವಿರುವ ಕಿರಾಣಿ, ಡಬ್ಬಿ ಅಂಗಡಿಗಳ ಕಳ್ಳತನ ನಡೆದಿವೆ.ಇಂತಹ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ರೈತ ಸಂಘಟನೆಗಳು ಮತ್ತು ವಿವಿಧ ಸಂಘಟನೆಗಳು, ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಆರ್ಥಿಕ ಸಂಕಷ್ಟ: ಎಂಟು ದಿನದ ಹಿಂದೆ ಅನ್ನಭಾಗ್ಯ ಅಕ್ಕಿ ಲಾರಿಗಳ, ಟಿಪ್ಪರ್‌ಗಳ ಬ್ಯಾಟರಿ ಕಳ್ಳತನ ಮಾಡಿದ್ದರು. ನನ್ನ ಹೆಂಡತಿಯ ಬಂಗಾರದ ಚೈನ್ ಒತ್ತೆ ಇಟ್ಟು, ಸಾಲ ಮಾಡಿ ನಾನು ನಡೆಸುವ ಲಾರಿಗೆ ಬ್ಯಾಟರಿ ತಂದು ಹಾಕಿದ್ದೆ. ಮತ್ತೆ ಇವತ್ತು ಕೂಡಾ ಬ್ಯಾಟರಿ ಕಳ್ಳತನವಾಗಿದೆ. ಬಹಳ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇನೆ ಎಂದು ಅನ್ನಭಾಗ್ಯ ಅಕ್ಕಿ ಸಾಗಿಸುವ ಲಾರಿ ಚಾಲಕ ಫಕೀರಪ್ಪ ತಳವಾರ ತಿಳಿಸಿದರು.ಧೈರ್ಯವಾಗಿರಿ: ಶೀಘ್ರದಲ್ಲಿ ಕಳ್ಳರನ್ನು ಪತ್ತೆ ಹಚ್ಚಲಾಗುವುದು. ಜನರು ಭಯ ಬೀಳುವ ಅವಶ್ಯಕತೆ ಇಲ್ಲ. ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ ಧೈರ್ಯವಾಗಿರಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ