ಕೆಜಿಎಫ್‌ನಲ್ಲಿ ಬೆಂಗಳೂರು ತ್ಯಾಜ್ಯ ಘಟಕ ಬೇಡ : ಕೆಜಿಎಫ್‌ ಬಂದ್‌ ಮಾಡುವುದಾಗಿ ನವ ಕರವೇ ಎಚ್ಚರಿಕೆ

| Published : Aug 24 2024, 01:27 AM IST / Updated: Aug 24 2024, 01:00 PM IST

ಕೆಜಿಎಫ್‌ನಲ್ಲಿ ಬೆಂಗಳೂರು ತ್ಯಾಜ್ಯ ಘಟಕ ಬೇಡ : ಕೆಜಿಎಫ್‌ ಬಂದ್‌ ಮಾಡುವುದಾಗಿ ನವ ಕರವೇ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನ ತ್ಯಾಜ್ಯವನ್ನು ತಂದು ಸುರಿದು ಕೆಜಿಎಫ್ ತಾಲೂಕಿನ ಸುತ್ತಮತ್ತಲೂ ಗ್ರಾಮಗಳ ಪರಿಸರ ಹಾಳು ಮಾಡಲು ಹೊರಟಿರುವ ಜಿಲ್ಲಾಡಳಿತ ಮತ್ತು ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಹಾಕುವುದಾಗಿ, ಕೆಜಿಎಫ್‌ ಬಂದ್‌ ಮಾಡುವುದಾಗಿ ನವ ಕರವೇ ಎಚ್ಚರಿಸಿದೆ

  ಕೆಜಿಎಫ್ :  ಕೆಜಿಎಫ್‌ ಚಿನ್ನದ ಗಣಿ ಪ್ರದೇಶದಲ್ಲಿ 300 ಎಕರೆ ಭೂಮಿಯಲ್ಲಿ ಬೆಂಗಳೂರಿನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಮುಂದಾಗಿರುವುದನ್ನು ವಿರೋಧಿಸಿ ನವ ಕರವೇ ಸಂಘಟನೆ ಶುಕ್ರವಾರ ನಗರದ ಸೂರಜ್‌ಮಲ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.

ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸ್ಥಳೀಯರು, ರೈತರು, ಕನ್ನಡ ಪರ ಸಂಘಟನೆಗಳು, ದಲಿತ ಪರ ಸಂಘಟನೆಗಳು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜಿಲ್ಲಾಧಿಕಾರಿ ಅಕ್ರಂಪಾಷ ಅವರು ಕಳೆದ ಭಾನುವಾರ ಬೆಂಗಳೂರಿನ ಕಸ ವಿಲೇವಾರಿ ಘಟಕ್ಕೆ ೩೦೦ ಎಕರೆ ಭೂಮಿ ಗುರುತಿಸಲು ಬಂದಿದ್ದರು. ಬೆಂಗಳೂರಿನ ತ್ಯಾಜ್ಯವನ್ನು ಹಾಕಲು ಕೆಜಿಎಫ್ ತಾಲೂಕಿನ ಚಿನ್ನದ ಭೂಮಿ ನೀಡಿ ಮಂಜೂರು ಮಾಡಿದರೆ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಘಟಕದಿಂದ ಪರಿಸರ ಹಾಳು

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಎಸ್.ಎನ್.ರಾಜಗೋಪಾಲಗೌಡ, ಚಿನ್ನದ ಗಣಿಗಳನ್ನು ಮುಚ್ಚಿ ೨೪ ವರ್ಷಗಳು ಕಳೆದಿವೆ, ಚಿನ್ನದ ಗಣಿಗಳ ಜಾಗದಲ್ಲಿ ಅಪಾರ ಪ್ರಮಾಣದ ಖನಿಜ ಸಂಪತ್ತು ಇದ್ದರೂ ಇಂತಹ ಜಾಗದಲ್ಲಿ ಬೆಂಗಳೂರಿನ ತ್ಯಾಜ್ಯವನ್ನು ತಂದು ಸುರಿದು ಕೆಜಿಎಫ್ ತಾಲೂಕಿನ ಸುತ್ತಮತ್ತಲೂ ಗ್ರಾಮಗಳ ಪರಿಸರ ಹಾಳು ಮಾಡಲು ಹೊರಟಿರುವ ಜಿಲ್ಲಾಡಳಿತ ಮತ್ತು ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಹಾಕುವುದಾಗಿ ತಿಳಿಸಿದ್ದಾರೆ.

ಈಗಾಗಲೇ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಕೆಜಿಎಫ್ ನಗರದಲ್ಲಿ ಕೈಗಾರಿಕೆಗಳ ಕಾಂತ್ರಿ ಮಾಡುವುದಾಗಿ ಹೋದಲ್ಲಿ ಬಂದಲ್ಲಿ ಕಳೆದ ೫ ವರ್ಷದಿಂದ ಭಾಷಣವನ್ನು ಬೀಗಿಯುತ್ತಿದ್ದಾರೆ. ಕೆಜಿಎಫ್ ತಾಲೂಕಿನ ಬೆಂಗಳೂರಿನ ಕಸ ಸುರಿಯುವುದೇ ಇವರ ಕೈಗಾರಿಕೆ ಕ್ರಾಂತಿ ಎಂದು ಶಾಸಕರ ವಿರುದ್ದ ವಿರುದ್ದ ಅಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಶಾಸಕರು ಕೆಜಿಎಫ್ ತಾಲೂಕಿನಲ್ಲಿ ಬೆಂಗಳೂರಿನ ತ್ಯಾಜ್ಯ ಸುರಿಯಲು ಭೂಮಿ ನೀಡಬಾರದೆಂದು ಒತ್ತಾಯಿಸಿದರು.

ಕೃಷ್ಣಮೃಗಗಳಿಗೇ ನೀರು ಇಲ್ಲ

ಜಿಲ್ಲಾಧಿಕಾರಿಗಳೇ ೩೦೦ ಎಕರೆ ಅರಣ್ಯ ಭೂಮಿಯಲ್ಲಿ ನೂರಾರು ಕೃಷ್ಣಮೃಗಳು ಇವೆ. ಹಲವು ವರ್ಷದಿಂದ ಜಿಂಕೆಗಳಿಗೆ ಕುಡಿವ ನೀರು ಒದಗಿಸುವಂತೆ ಕನ್ನಡಪರ ಪರ ಸಂಘಟನೆಗಳು ಹಲವಾರು ಹೊರಾಟಗಳನ್ನು ಮಾಡಿದರೂ ನೀರಿನ ವ್ಯವಸ್ಥೆ ಮಾಡಿಲ್ಲ. ಈಗ ತ್ಯಾಜ್ಯವನ್ನು ತುಂಬಿಸಿ ಹಸಿರು ವಲಯವನ್ನು ಮಾಡುವುದಾಗಿ ಜನರಿಗೆ ವಂಚನೆ ಮಾಡಲು ಹೊರಟಿದ್ದಾರೆ. ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆಯಾಗುವಂತಹ ಕೆಲಸವನ್ನು ಮಾಡಬಾರದು. ಮೊದಲು ರೈತರು, ಸಂಘಟನೆಗಳ ಸಭೆಯನ್ನು ಕರೆದು ಚರ್ಚೆ ನಡೆಸಿ ಎಂದು ಒತ್ತಾಯಿಸಿದರು. ಗೊಲ್ಲಹಳ್ಳಿ ಗ್ರಾಪಂ, ಕಮ್ಮಸಂದ್ರ ಗ್ರಾಪಂ, ಘಟ್ಟಕಾಮದೇನಹಳ್ಳಿ ಗ್ರಾಪಂ, ವ್ಯಾಪ್ತಿಯಲ್ಲಿ ೬೫ ಕ್ಕೂ ಹೆಚ್ಚು ಗ್ರಾಮಗಳಿದ್ದು, ಮೂರು ಗ್ರಾಪಂ, ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ಇರುವುದರಿಂದ ಜಿಲ್ಲಾಧಿಕಾರಿ ಗುರುತಿಸಿರುವ ೩೦೦ ಎಕರೆ ಜಾಗದಲ್ಲಿ ಬೆಂಗಳೂರಿನ ತ್ಯಾಜ್ಯವನ್ನು ತಂದು ಸುರಿದರೆ ೬೫ ಗ್ರಾಮಗಳ ಜನರಿಗೆ ಆಪತ್ತು ಬರಲಿದೆ, ಇದರಿಂದ ಗ್ರಾಮದ ಜನರು ರೋಗರುಜನಗಳಿಂದ ತುತ್ತಾಗಲಿದ್ದಾರೆ ಎಂದರು.

ಕೆಜಿಎಫ್ ಬಂದ್ ಮಾಡುವ ಎಚ್ಚರಿಕೆಜಿಲ್ಲಾಧಿಕಾರಿ ಬೆಂಗಳೂರಿನ ತ್ಯಾಜ್ಯವನ್ನು ಸುರಿಯಲು ಬಡಮಾಕನಹಳ್ಳಿ ಬಳಿ ೩೦೦ ಎಕರೆ ಭೂಮಿಯನ್ನು ಜಿಲ್ಲಾಡಳಿತ ನೀಡಲು ಮುಂದಾರೆ ಕೆಜಿಎಫ್ ನಗರವನ್ನು ಬಂದ್ ಮಾಡಲಾಗುವುದೆಂದು ಬೆಸ್ಕಾಂ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ ತ್ಯಾಜ್ಯದ ಹೊರ ಬರುವ ಗಬ್ಬು ವಾಸನೆಗೆ ರೈತರ ಕೃಷಿ ಭೂಮಿ ಸರ್ವ ನಾಶವಾಗುಲಿದೆ, ಕೂಡಲೇ ಬಡಮಾಕನಹಳ್ಳಿ ಅರಣ್ಯ ಪ್ರದೇಶದಲ್ಲಿ ಬೆಂಗಳೂರಿನ ತ್ಯಾಜ್ಯವನ್ನು ತಂದು ಸುರಿಯುವುದಕ್ಕೆ ಜಿಲ್ಲಾಡಳಿತ ಭೂಮಿ ನೀಡಬಾರದು. ಒಂದು ವೇಳೆ ಭೂಮಿಯನ್ನು ನೀಡಿದರೆ 65 ಗ್ರಾಮಗಳ ರೈತರು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ನವಕರವೇ ರಾಜ್ಯಾಧ್ಯಕ್ಷ ಎಸ್.ಎನ್.ರಾಜಗೋಪಾಲಗೌಡ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.