ನೋಂದಣಿ ಫಲಕ ಇಲ್ಲದ ವಾಹನಗಳ ವಿರುದ್ಧ ಖಾಕಿ ಕ್ರಮ

| Published : Jun 19 2024, 01:01 AM IST

ನೋಂದಣಿ ಫಲಕ ಇಲ್ಲದ ವಾಹನಗಳ ವಿರುದ್ಧ ಖಾಕಿ ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ನೋಂದಣಿ ಫಲಕ ಇಲ್ಲದೆ ಬೇಕಾಬಿಟ್ಟಿ ಓಡಾಡುತ್ತಿದ್ದ ವಾಹನಗಳ ವಿರುದ್ಧ ಸಮರ ಸಾರಿರುವ ನಗರ ಸಂಚಾರಿ ಪೊಲೀಸರು 344 ವಾಹನಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ನಗರದಲ್ಲಿ ಎಲ್ಲೆಂದರಲ್ಲಿ ವಾಹನಗಳು ನೋಂದಣಿ ಫಲಕ ಇಲ್ಲದೇ ಓಡಾಡುತ್ತಿರುವುದು ಹಾಗೂ ಅವುಗಳನ್ನು ಅಪರಾಧಿಕ ಕೃತ್ಯಗಳಲ್ಲಿ ಬಳಸುತ್ತಿರುವ ಹಿನ್ನೆಲೆಯಲ್ಲಿ ಕ್ರಮಕೈಗೊಂಡಿರುವ ಪೊಲೀಸರಿಗೆ ನೋಂದಣಿ ಫಲಕ ಇಲ್ಲದಿರುವ ವಾಹನಗಳ ಸಂಖ್ಯೆಯನ್ನು ನೋಡಿ ಅಚ್ಚರಿಗೊಳ್ಳುವಂತಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಗರದಲ್ಲಿ ನೋಂದಣಿ ಫಲಕ ಇಲ್ಲದೆ ಬೇಕಾಬಿಟ್ಟಿ ಓಡಾಡುತ್ತಿದ್ದ ವಾಹನಗಳ ವಿರುದ್ಧ ಸಮರ ಸಾರಿರುವ ನಗರ ಸಂಚಾರಿ ಪೊಲೀಸರು 344 ವಾಹನಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ನಗರದಲ್ಲಿ ಎಲ್ಲೆಂದರಲ್ಲಿ ವಾಹನಗಳು ನೋಂದಣಿ ಫಲಕ ಇಲ್ಲದೇ ಓಡಾಡುತ್ತಿರುವುದು ಹಾಗೂ ಅವುಗಳನ್ನು ಅಪರಾಧಿಕ ಕೃತ್ಯಗಳಲ್ಲಿ ಬಳಸುತ್ತಿರುವ ಹಿನ್ನೆಲೆಯಲ್ಲಿ ಕ್ರಮಕೈಗೊಂಡಿರುವ ಪೊಲೀಸರಿಗೆ ನೋಂದಣಿ ಫಲಕ ಇಲ್ಲದಿರುವ ವಾಹನಗಳ ಸಂಖ್ಯೆಯನ್ನು ನೋಡಿ ಅಚ್ಚರಿಗೊಳ್ಳುವಂತಾಗಿದೆ. ನಗರದಲ್ಲಿ ಒಟ್ಟು 344 ದ್ವಿಚಕ್ರ ವಾಹನಗಳನ್ನು ಹಿಡಿದಿರುವ ಪೊಲೀಸರು ಈ ಪೈಕಿ 266 ವಾಹನಗಳ ದಾಖಲಾತಿಗಳನ್ನು ಪರಿಶೀಲಿಸಿ ದಂಡ ವಿಧಿಸಿದ್ದಾರೆ. ಬಳಿಕ ನಿಯಮಾನುಸಾರ ನೋಂದಣಿ ಫಲಕ ಅಳವಡಿಸಿದ ನಂತರವೇ ವಾಹನಗಳನ್ನು ಬಿಡುಗಡೆಗೊಳಿಸಿದ್ದಾರೆ.

ಅಲ್ಲದೇ ಸಂಶಯಾಸ್ಪದ ಹಿನ್ನೆಲೆ 78 ವಾಹನಗಳನ್ನು ತಡೆಹಿಡಿದಿರುವ ಪೊಲೀಸರು ಕಾನೂನು ಪ್ರಕ್ರಿಯೆ ಕೈಗೊಂಡಿದ್ದಾರೆ. ಇನ್ನೂ 160 ವಾಹನಗಳನ್ನು ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಇರುವುದರಿಂದ ಬಾಕಿ ಇರುವ ದಂಡ ಪಾವತಿಸಿ ಬಿಟ್ಟು ಕಳುಹಿಸಿದ್ದಾರೆ.ಇನ್ನೂ ನಗರ ಪ್ರದೇಶಗಳಲ್ಲಿ ಇತ್ತೀಚಿಗೆ ದೋಷಪೂರಿತ ಸೈಲೆನ್ಸರ್‌ಗಳನ್ನು ಅಳವಡಿಸಿ ಕರ್ಕಶ ಶಬ್ದ ಹೊರಹಾಕುವುದು, ನಿಷ್ಕಾಳಜಿಯಿಂದ ವಾಹನ ಚಾಲನೆ, ಹೆಲ್ಮೆಟ್‌ ಧರಿಸದೇ ದ್ವಿಚಕ್ರ ವಾಹನ ಓಡಿಸುವುದು ಹಾಗೂ ಟ್ರಿಪಲ್‌ ರೈಡಿಂಗ್‌ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ. ಆದ್ದರಿಂದ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರ ಹಾಗೂ ಮಾಲೀಕರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸುವುದಾಗಿ ನಗರ ಪೊಲೀಸರು ತಿಳಿಸಿದ್ದಾರೆ.