ಕನ್ನಡಪ್ರಭ ವಾರ್ತೆ ಖಾನಾಪುರ ಪಟ್ಟಣದಲ್ಲಿ ಸಧ್ಯ ಗೋವಾ ಕ್ರಾಸ್‌ನಿಂದ ಮರಾಠಾ ಮಂಡಳ ಡಿಗ್ರಿ ಕಾಲೇಜ್‌ವರೆಗಿನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಈ ಕಾಮಗಾರಿ ಕುಂಟುತ್ತ ಸಾಗುತ್ತಿದ್ದು, ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಸುಗಮ ಸಂಚಾರಕ್ಕೆ ಅಡಚಣೆ ಉಂಟು ಮಾಡಿರುವ ಕಾರಣ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಸಮಸ್ಯೆ ಉಂಟಾಗುತ್ತಿದೆ. ಇದನ್ನು ಖಂಡಿಸಿ ಫೆ.೨೬ರಂದು ಖಾನಾಪುರ ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಮಹಾಂತೇಶ ರಾಹೂತ ಹೇಳಿದರು.
ಕನ್ನಡಪ್ರಭ ವಾರ್ತೆ ಖಾನಾಪುರ
ಪಟ್ಟಣದಲ್ಲಿ ಸಧ್ಯ ಗೋವಾ ಕ್ರಾಸ್‌ನಿಂದ ಮರಾಠಾ ಮಂಡಳ ಡಿಗ್ರಿ ಕಾಲೇಜ್‌ವರೆಗಿನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಈ ಕಾಮಗಾರಿ ಕುಂಟುತ್ತ ಸಾಗುತ್ತಿದ್ದು, ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಸುಗಮ ಸಂಚಾರಕ್ಕೆ ಅಡಚಣೆ ಉಂಟು ಮಾಡಿರುವ ಕಾರಣ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಸಮಸ್ಯೆ ಉಂಟಾಗುತ್ತಿದೆ. ಇದನ್ನು ಖಂಡಿಸಿ ಫೆ.೨೬ರಂದು ಖಾನಾಪುರ ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಮಹಾಂತೇಶ ರಾಹೂತ ಹೇಳಿದರು.ಪಟ್ಟಣದಲ್ಲಿ ಸೋಮವಾರ ಈ ಕುರಿತು ತಹಸೀಲ್ದಾರ್ ಕಚೇರಿ ಮತ್ತು ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಪಟ್ಟಣದ ಹೊರವಲಯದ ಮೀನು ಮಾರುಕಟ್ಟೆ ಬಳಿ ಹಲವು ತಿಂಗಳಿಂದ ಮುಖ್ಯ ರಸ್ತೆ ಅಗೆದು ವಾಹನ ಸಂಚಾರ ಬಂದ್ ಮಾಡಲಾಗಿದೆ. ಇದರಿಂದ ನಾಲ್ಕು ಚಕ್ರದ ವಾಹನಗಳು, ಬಸ್ ಗಳು ಈ ಮಾರ್ಗದಲ್ಲಿ ಸಂಚರಿಸುತ್ತಿಲ್ಲ. ಪರಿಣಾಮ ನಾಗರಿಕರು ಅನಿವಾರ್ಯವಾಗಿ ಸುತ್ತಿ ಬಳಸಿ ಸಂಚರಿಸುವಂತಾಗಿದೆ. ಅದೇ ರೀತಿ ಖಾನಾಪುರ ಪಟ್ಟಣದ ಹಲವು ಕಡೆ ಒಂದು ಬದಿಯಲ್ಲಿ ಕಾಮಗಾರಿ ನಡೆದಿದ್ದರೂ ಅದನ್ನು ಅರ್ಧಂಬರ್ಧ ಮಾಡಿ ಉಳಿದ ಕಾಮಗಾರಿ ಪೂರ್ಣಗೊಳಿಸದೇ ಮೀನು ಮಾರುಕಟ್ಟೆ ಬಳಿ ಸೇತುವೆ ಕಾಮಗಾರಿಯು ಅಪೂರ್ಣವಾಗಿದೆ. ಖಾನಾಪುರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕಾಮಗಾರಿ ಕೈಗೊಳ್ಳುವುದು ಬಾಕಿ ಇದ್ದರೂ ಸಹ ಇಲ್ಲಿಯ ಕಾಮಗಾರಿಯನ್ನು ಅರ್ಧಕ್ಕೆ ಕೈ ಬಿಟ್ಟು ಗಾಂಧಿನಗರ ವ್ಯಾಪ್ತಿಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಇದರಿಂದ ಡಿಗ್ರಿ ಕಾಲೇಜ್, ಕೋರ್ಟ್, ಹಲಕರ್ಣಿ ಮಾರ್ಗವಾಗಿ ಖಾನಾಪುರಕ್ಕೆ ಬರುವ ಬಸ್ ಸಂಚಾರ ಸ್ಥಗಿತವಾಗಿದ್ದು, ಪ್ರಯಾಣಿಕರಿಗೆ ತೀವ್ರ ಸಮಸ್ಯೆಯಾಗಿದೆ. ಈ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟಾಗುವ ರೀತಿಯಲ್ಲಿ ಕೈಗೊಳ್ಳುತ್ತಿರುವ ಕಾರಣ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಕಾರಣಗಳಿಂದಾಗಿ ಖಾನಾಪುರ ಪಟ್ಟಣ ಹಾಗೂ ಅಕ್ಕಪಕ್ಕದ ಪ್ರದೇಶದಲ್ಲಿ ವಾಸಿಸುವ ನಾಗರಿಕರು, ವ್ಯಾಪಾರಸ್ಥರು, ಸಂಘಸಂಸ್ಥೆಗಳ ಪದಾಧಿಕಾರಿಗಳು ಸೇರಿ ಈ ಕಾಮಗಾರಿಯಲ್ಲಿ ಉಂಟಾಗಿರುವ ವಿಳಂಬ ಧೋರಣೆ ಖಂಡಿಸಿ ಫೆ.26ರಂದು ಖಾನಾಪುರ ಬಂದ್ ಮಾಡಿ ತಹಸೀಲ್ದಾರ್ ಕಚೇರಿ ಎದುರು ಅನಿರ್ದಿಷ್ಟ ಧರಣಿ ಆರಂಭಿಸಲು ತೀರ್ಮಾನಿಸಿದ್ದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶಿವಶಂಕರ ಕಟ್ಟಿಮನಿ, ಬಸವರಾಜ ಹೊಂಡದಕಟ್ಟಿ, ರಾಜೇಶ ಪೂಜಾರಿ, ಆದರ್ಶ ರಾಹೂತ, ಪ್ರದೀಪ ಶೆಟ್ಟಿ, ರಮೇಶ ಜೈನ್, ಆದಿತ್ಯ ಕಲಾಲ, ಶಿವಾ ಸುಳಕರ, ಲೋಕೇಶ ಕಲಬುರ್ಗಿ ಹಾಗೂ ಇತರರು ಇದ್ದರು.