ಸಾರಾಂಶ
ಇತ್ತೀಚಿಗೆ ಆನೆ ತುಳಿತದಿಂದ ಮೃತಪಟ್ಟ ಸೀತೂರು ಗ್ರಾಮದ ಕೆರೆಗದ್ದೆಯ ಉಮೇಶ ಅವರ ಮನೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಭಾನುವಾರ ಭೇಟಿ ನೀಡಿ ಉಮೇಶ್ ಅವರ ಪತ್ನಿ ಹಾಗೂ ಕುಟುಂಬದವರಿಗೆ ಸಾಂತ್ವಾನ ಹೇಳಿದರು.
ನರಸಿಂಹರಾಜಪುರ: ಇತ್ತೀಚಿಗೆ ಆನೆ ತುಳಿತದಿಂದ ಮೃತಪಟ್ಟ ಸೀತೂರು ಗ್ರಾಮದ ಕೆರೆಗದ್ದೆಯ ಉಮೇಶ ಅವರ ಮನೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಭಾನುವಾರ ಭೇಟಿ ನೀಡಿ ಉಮೇಶ್ ಅವರ ಪತ್ನಿ ಹಾಗೂ ಕುಟುಂಬದವರಿಗೆ ಸಾಂತ್ವಾನ ಹೇಳಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಇತ್ತೀಚಿಗೆ ಆನೆಗಳ ಸಂಖ್ಯೆ ಜಾಸ್ತಿಯಾಗಿದೆ. ಆನೆ ತುಳಿತದಿಂದ ಉಮೇಶ್ ಮತಪಟ್ಟಿರುವುದು ಸರ್ಕಾರಕ್ಕೂ ನೋವು ತಂದಿದೆ. ಈಗಾಗಲೇ ಸರ್ಕಾರದಿಂದ ₹15 ಲಕ್ಷ , ಅರಣ್ಯ ಇಲಾಖೆಯಿಂದ ₹5 ಲಕ್ಷ ಪರಿಹಾರ ನೀಡಿದ್ದೇವೆ. ಶಾಸಕ ಟಿ.ಡಿ. ರಾಜೇಗೌಡ ₹1 ಲಕ್ಷ ವೈಯ್ಯಕ್ತಿಕವಾಗಿ ನೀಡಿದ್ದರು. ನಾನು ₹1 ಲಕ್ಷ ವೈಯ್ಯಕ್ತಿಕವಾಗಿ ನೀಡುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್ ಅವರು ವೈಯ್ಯಕ್ತಿಕವಾಗಿ ₹2 ಲಕ್ಷ ನೀಡುವುದಾಗಿ ತಿಳಿಸಿದ್ದಾರೆ.ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ಉಮೇಶ್ ಅವರು ಕಾಡಾನೆಗಳ ದಾಳಿಗೆ ತುತ್ತಾಗಿ ಮೃತ ಪಟ್ಟಿರುವುದಕ್ಕೆ ಸರ್ಕಾರವು ಸಾಂತ್ವಾನ ಹೇಳುತ್ತಿದೆ. ನಾನು ಈ ಮನೆಗೆ 2 ಬಾರಿ ಭೇಟಿ ನೀಡಿದ್ದೇನೆ. ಸರ್ಕಾರದಿಂದ ಪರಿಹಾರ ನೀಡಿದ್ದೇವೆ. ಆನೆಗಳ ಕಾಟ ತಡೆಯಲು ಶಾಶ್ವತ ಪರಿಹಾರ ರೂಪಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್, ಚಿಕ್ಕಮಗಳೂರು ಕ್ಷೇತ್ರದ ಶಾಸಕ ತಮ್ಮಯ್ಯ, ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಆಮಟೆ. ಕೊಪ್ಪ ಡಿ. ಎಫ್.ಓ ನಂದೀಶ್ ಮತ್ತಿತರರು ಇದ್ದರು.