ಸಾರಾಂಶ
ಮುಂಡರಗಿ: ರಾಜ್ಯದ ಗುಂಡ್ಲುಪೇಟೆಯಿಂದ ಬೀದರವರೆಗೆ ಎಲ್ಲ ಜಿಲ್ಲೆಗಳ ವೈದ್ಯ ಮತದಾರರು ನನಗೆ ಮತ ನೀಡಿ ಬೆಂಬಲಿಸುವ ಮೂಲಕ ಗೆಲ್ಲಿಸಿದ್ದಾರೆ. ಅವರೆಲ್ಲರಿಗೂ ನಾನು ಚಿರಋಣಿಯಾಗಿರುವೆ ಎಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯದ ನೂತನ ಸೆನೆಟ್ ಸದಸ್ಯ ಡಾ. ವಿರೇಶ ಹಂಚಿನಾಳ ಹೇಳಿದರು.
ಅವರು ಭಾನುವಾರ ಪಟ್ಟಣದ ಬಸವಾ ಏಜೆನ್ಸಿ ಆವರಣದಲ್ಲಿ ಕೆ.ವಿ. ಹಂಚಿನಾಳ ಅಭಿಮಾನಿ ಬಳಗ ಹಾಗೂ ರಜನಿಕಾಂತ ದೇಸಾಯಿ ಅಭಿಮಾನಿಗಳ ಬಳಗದಿಂದ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ರಾಜ್ಯದ ಬೀದರ, ಚಾಮರಾಜನಗರ, ದಕ್ಷಿಣ ಕನ್ನಡ, ಮಂಗಳೂರು, ಸೂಳ್ಯ, ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿಯೂ ಹೆಚ್ಚಿನ ಮತ ನೀಡಿದ್ದಾರೆ. ಮೆಡಿಕಲ್, ಡೆಂಟಲ್, ಆಯುರ್ವೇದ, ಸಿದ್ದಿ, ಯುನಾನಿ, ಹೋಮಿಯೋಪತಿ, ಫಾರ್ಮಸಿ, ನರ್ಸಿಂಗ್ ಸುಮಾರು 3 ಸಾವಿರ ವಿವಿಧ ವೈದ್ಯಕೀಯ ಕಾಲೇಜುಗಳ ವ್ಯಾಪ್ತಿ ಈ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯ ಹೊಂದಿದೆ. ಇದು ಏಶಿಯಾ ಖಂಡದ ಅತ್ಯಂತ ದೊಡ್ಡ ವಿಶ್ವವಿದ್ಯಾಲಯವಾಗಿದೆ. ಇದರ ವ್ಯಾಪ್ತಿಗೆ ಬರುವ ಎಲ್ಲ ಕಾಲೇಜುಗಳಲ್ಲಿನ ಜನರ ಹಾಗೂ ಸಂಸ್ಥೆಯ ಮತ್ತು ಕಾಲೇಜುಗಳ ಸಮಸ್ಯೆಗಳಿಗೆ ಸದಾ ಸ್ಪಂದಿಸುವುದಾಗಿ ಭರವಸೆ ನೀಡಿ, ಗದಗ ಭಾಗದಲ್ಲಿ ಯುನಾನಿ, ಹೋಮಿಯೋಪತಿ ಸೇರಿದಂತೆ ಅವಶ್ಯವಿರುವ ಮೆಡಿಕಲ್ ಕಾಲೇಜು ಸಾಧ್ಯವಾದಷ್ಟು ಮಟ್ಟಿಗೆ ತರುವ ಹಾಗೂ ಅಲ್ಲಿನ ಶಿಕ್ಷಕರು ಸೇರಿದಂತೆ ಇತರೆ ಸಿಬ್ಬಂದಿಗಳ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹೇಳಿದರು.
ರಾಜ್ಯ ಐಎಂಎ ಮಾಜಿ ಅಧ್ಯಕ್ಷ ಡಾ. ಅನ್ನದಾನಿ ಮೇಟಿ ಮಾತನಾಡಿ, ವಿರೇಶ ಹಂಚಿನಾಳ ಒಬ್ಬ ವ್ಯಕ್ತಿಯಲ್ಲ, ಅವರು ಒಂದು ಶಕ್ತಿ. ಎಲ್ಲರನ್ನೂ ಮಾನವೀಯತೆಯ ದೃಷ್ಠಿಯಿಂದ ನೋಡುವಂತವರು. ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯ ಗುಣಮಟ್ಟದ ಶಿಕ್ಷಣ ಒದಗಿಸುವ ಸಂಸ್ಥೆಯಾಗಿದೆ. ಇದರ ಸೆನೆಟ್ ಸದಸ್ಯರಾಗುವುದು ಸರಳವಾದ ಕೆಲಸವಲ್ಲ. ಇಂದು ವೈದ್ಯಕೀಯ ರಂಗ ಖುಷಿಯುತ್ತಿದೆ. ಅಲ್ಲಿನ ಗುಣಮಟ್ಟ ಖುಷಿಯುತ್ತಿದ್ದು ಅದನ್ನು ಸುಧಾರಿಸುವ ಕಾರ್ಯವನ್ನು ಡಾ.ವಿರೇಶ ಮಾಡಬೇಕಿದೆ ಎಂದರು.ಧಾರವಾಡ ಕೆಎಂಎಫ್ ನಿರ್ದೇಶಕ ಲಿಂಗರಾಜಗೌಡ ಪಾಟೀಲ, ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಡಾ. ವಿರೇಶ ಹಂಚಿನಾಳ ಜಿಲ್ಲೆಯಾದ್ಯಂತ ಹೆಸರು ಮಾಡಿದ್ದಾರೆ. ಸಹಾಯ ಕೇಳಿ ಬಂದವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಾ ಬಂದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜನತೆ ಸನ್ಮಾನಿಸಿ ಗೌರವಿಸಿದರು. ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಈಶ್ವರಪ್ಪ ಹಂಚಿನಾಳ, ಡಾ.ವಿ.ಕೆ. ಸಂಕನಗೌಡ್ರ, ಡಾ. ಗೋಣೇಶ, ಹೇಮಂತಗೌಡ ಪಾಟೀಲ, ಕರಬಸಪ್ಪ ಹಂಚಿನಾಳ, ವಿ. ಸೀತಾರಾಮರಾಜು, ಬಸವರಾಜ ಹಂಚಿನಾಳ, ರಜನಿಕಾಂತ ದೇಸಾಯಿ, ಈರಣ್ಣ ಕರ್ಜಗಿ, ಚೆನ್ನವೀರಪ್ಪ ಯಲಿಗಾರ, ಮೈಲಾರಪ್ಪ ಉದಂಡಿ, ಶಿವಪ್ಪ ಚಿಕ್ಕಣ್ಣವರ, ನಾಗರಾಜ ಹೊಂಬಳಗಟ್ಟಿ, ಕೊಟ್ರೇಶ ಬಳ್ಳೊಳ್ಳಿ, ಪ್ರಹ್ಲಾದ ಹೊಸಮನಿ, ಪವನ್ ಮೇಟಿ, ಮಹ್ಮದರಫಿಕ್ ಮುಲ್ಲಾ, ಕರಿಯಪ್ಪ ಹಡಗಲಿ, ಮದರಸಾಬ್ ಸಿಂಗನಮಲ್ಲಿ, ರುದ್ರಗೌಡ ಪಾಟೀಲ, ಕೊಪ್ಪಣ್ಣ ಕೊಪ್ಪಣ್ಣವರ, ಸೋಮು ಹಕ್ಕಂಡಿ, ಮುತ್ತು ಅಳವಂಡಿ, ವೆಂಕಟೇಶ ದೇಸಾಯಿ, ಯಲ್ಲಪ್ಪ ತ್ಯಾಪಿ, ಪ್ರಶಾಂತ ಗುಡದಪ್ಪನವರ, ರವೀಂದ್ರಗೌಡ ಪಾಟೀಲ, ಎ.ವಿ. ಹಳ್ಳಿಕೇರಿ, ಡಾ. ಗೋಣೇಶ, ಅಶೋಕ ಹುಬ್ಬಳ್ಳಿ, ಫಾಲಾಕ್ಷಿ ಗಣದಿನ್ನಿ, ಎಸ್.ಎಸ್. ಗಡ್ಡದ, ಡಿ.ಎಂ. ತಾಂಬ್ರಗುಂಡಿ, ಯಲ್ಲಪ್ಪ ತ್ಯಾಪಿ, ತಿಪ್ಪಣ್ಣ ಕಟ್ಟೀಮನಿ, ದೇವು ಹಡಪದ, ನಾಗರಾಜ ಗುಡಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಬಸವಾ ಏಜೆನ್ಸಿ ಮಾಲೀಕ ರಜನಿಕಾಂತ ದೇಸಾಯಿ ಸ್ವಾಗತಿಸಿ, ಶಿದ್ದಲಿಂಗಪ್ಪ ದೇಸಾಯಿ ನಿರೂಪಿಸಿದರು.