ಇಡೀ ಭಾರತದಲ್ಲಿ ಹಿಂದುಗಳ ಪರ ಧ್ವನಿ ಎತ್ತುವ ಆರ್‌ಎಸ್‌ಎಸ್ ಸಂಘಟನೆಯನ್ನು ವಿಷದ ಹಾವಿಗೆ ಹೋಲಿಸಿದ ಮಲ್ಲಿಕಾರ್ಜುನ ಖರ್ಗೆ ಇಡೀ ಹಿಂದೂ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದರು.

ಉಡುಪಿ: ಇಡೀ ಭಾರತದಲ್ಲಿ ಹಿಂದುಗಳ ಪರ ಧ್ವನಿ ಎತ್ತುವ ಆರ್‌ಎಸ್‌ಎಸ್ ಸಂಘಟನೆಯನ್ನು ವಿಷದ ಹಾವಿಗೆ ಹೋಲಿಸಿದ ಮಲ್ಲಿಕಾರ್ಜುನ ಖರ್ಗೆ ಇಡೀ ಹಿಂದೂ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದರು.ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಖರ್ಗೆಯವರ ಹಿರಿತನವನ್ನು ನಾವು ಗೌರವಿಸುತ್ತೇವೆ. ಆದರೆ ಅವರು ಆಡಿರುವ ಮಾತು ಸರಿಯಲ್ಲ. ಆರ್‌ಎಸ್‌ಎಸ್ ಬಗ್ಗೆ ಅತ್ಯಂತ ಕೀಳುಮಟ್ಟದ ಮಾತನಾಡಿದ್ದಾರೆ. ಆರ್‌ಎಸ್‌ಎಸ್ ನ್ನು ವಿಷದ ಹಾವಿಗೆ ಹೋಲಿಸಿ, ಕೊಲ್ಲಬೇಕು ಎಂದಿದ್ದಾರೆ. ಖರ್ಗೆಯಂತಹ ಹಿರಿಯರಿಂದ ಈ ಮಾತು ನಿರೀಕ್ಷೆ ಮಾಡಿರಲಿಲ್ಲ ಎಂದರು.

ಉಪಚುನಾವಣೆ ಕುರಿತು ಮಾತನಾಡಿ, ಬಿಜೆಪಿ ಈ ಬಾರಿ ಬಹು ದೊಡ್ಡ ಗೆಲುವು ಸಾಧಿಸಲಿದೆ. ಕೇರಳ ಚುನಾವಣೆಯಲ್ಲಿ ಬಿಜೆಪಿ ನಿರ್ಣಾಯಕ ಶಕ್ತಿ ಆಗಲಿದೆ. ಕರ್ನಾಟಕದ ಎರಡು ಕ್ಷೇತ್ರದ ಉಪಚುನಾವಣೆಯಲ್ಲೂ ಗೆಲುವು ಖಚಿತ. ಎರಡು ಕ್ಷೇತ್ರಗಳಲ್ಲಿ ನಾನು ಪ್ರಚಾರ ಮಾಡಿದ್ದೇನೆ. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇದೆ. ಕೇಂದ್ರ ಸರ್ಕಾರದ ಜನಪರ ಕೆಲಸವನ್ನು ಬೆಂಬಲಿಸುತ್ತಾರೆ. ದೇಶದ ಸಮಗ್ರತೆ ಮತ್ತು ಭದ್ರತೆಗೆ ಮತ ಹಾಕುತ್ತಾರೆ. ಮೂರು ವರ್ಷದ ರಾಜ್ಯ ಆಡಳಿತದ ಅನಾಹುತಗಳನ್ನು ಜನ ಗಮನಿಸಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.