ಪು-3ಕ್ಕೆ...ಸಂಭ್ರಮದಿಂದ ಜರುಗಿದ ಖಾಸ್ಗತೇಶ್ವರ ರಥೋತ್ಸವ

| Published : Apr 21 2024, 02:27 AM IST

ಸಾರಾಂಶ

ತಾಳಿಕೋಟೆ: ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದ ಶಾಖಾ ಮಠವಾದ ಅಮಲ್ಯಾಣ ಗ್ರಾಮದ ಶ್ರೀಖಾಸ್ಗತ ಮಠದ ಜಾತ್ರೋತ್ಸವ ಅಂಗವಾಗಿ ಮಹಾ ರಥೋತ್ಸವ ಶನಿವಾರ ಶ್ರೀಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರ ದಿವ್ಯ ಸಾನ್ನಿದ್ಯದಲ್ಲಿ ಜರುಗಿತು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದ ಶಾಖಾ ಮಠವಾದ ಅಮಲ್ಯಾಣ ಗ್ರಾಮದ ಶ್ರೀಖಾಸ್ಗತ ಮಠದ ಜಾತ್ರೋತ್ಸವ ಅಂಗವಾಗಿ ಮಹಾ ರಥೋತ್ಸವ ಶನಿವಾರ ಶ್ರೀಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರ ದಿವ್ಯ ಸಾನ್ನಿದ್ಯದಲ್ಲಿ ಜರುಗಿತು.

ಅಮಲ್ಯಾಳ ಗ್ರಾಮದಲ್ಲಿ ಜರುಗುವ ಶ್ರೀಖಾಸ್ಗತೇಶ್ವರರ ಮಹಾ ರಥೋತ್ಸವ ಗ್ರಾಮದಿಂದ ಮದುವೆಯಾಗಿ ಬೇರೆ ಊರಿಗೆ ಹೋದ ಮಹಿಳೆಯರೇ ಈ ಜಾತ್ರೋತ್ಸವಕ್ಕೆ ಆಗಮಿಸಿ ರಥ ಎಳೆಯುತ್ತಿರುವುದು ವಿಶೇಷವಾಗಿದೆ. ಜಾತ್ರೋತ್ಸವ ಅಂಗವಾಗಿ ಶ್ರೀಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರನ್ನು ಸಾರೋಟಿನಲ್ಲಿ ಕೂಡ್ರಿಸಿ ಪಲ್ಲಕ್ಕಿ ಉತ್ಸವದೊಂದಿಗೆ ಗಂಗಸ್ಥಳ ಕಾರ್ಯಕ್ರಮದೊಂದಿಗೆ ಸುಮಂಗಲೆಯರ ಕುಂಭ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಸಂಜೆ ಜರುಗಿದ ಭವ್ಯ ರಥೋತ್ಸವದಲ್ಲಿ ಅಸಂಖ್ಯಾತ ಭಕ್ತ ಸಮೂಹ ಪಾಲ್ಗೊಂಡು ಶ್ರೀ ಖಾಸ್ಗತರ ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು, ಎಸೆದು ಭಕ್ತಿ ಮೆರೆದರು.