ಕಿಯಾ ಕಾರು ಆಕರ್ಷಕ ಬೆಲೆ ಹೊಂದಿರುವ ಈ ವಾಹನವು ಕಿಯಾದ ಅತ್ಯಾಧುನಿಕ ಏ3 ಪ್ಲಾಟ್‌ಫಾರ್ಮ್ ಮೇಲೆ ನಿರ್ಮಿತವಾಗಿದೆ. ಹಳೆಯ ಮಾದರಿಗಿಂತ ಹೆಚ್ಚು ಉದ್ದ ಮತ್ತು ಅಗಲದ ವಿನ್ಯಾಸ ಒಳಗೊಂಡಿದೆ.

ಹುಬ್ಬಳ್ಳಿ:

ನಗರದ ಅಮರಗೋಳ ಎಪಿಎಂಸಿ ಮೂರನೇ ಗೇಟ್ ಬಳಿಯ ‘ನಾಗಶಾಂತಿ ಆಟೋಕಾರ್ಸ್’ ಎಲ್‌ಎಲ್‌ಪಿ ಶೋ ರೂಂದಲ್ಲಿ ‘ಆಲ್-ನ್ಯೂ ಕಿಯಾ ಸೆಲ್ಟೋಸ್’ ಕಾರನ್ನು ಅಧಿಕೃತವಾಗಿ ಮಂಗಳವಾರ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ನೂತನ ಮಾದರಿ ಕಾರು ಈ ಭಾಗದ ಎಸ್‌ಯುವಿ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸುವ ನಿರೀಕ್ಷೆಯಿದೆ ಎಂದು ಶೋ ರೂಂ ನಿರ್ದೇಶಕ ಅರುಣ ಅಗಡಿ ಮಾಧ್ಯಮದವರಿಗೆ ತಿಳಿಸಿದರು.ಆಕರ್ಷಕ ಬೆಲೆ ಹೊಂದಿರುವ ಈ ವಾಹನವು ಕಿಯಾದ ಅತ್ಯಾಧುನಿಕ ಏ3 ಪ್ಲಾಟ್‌ಫಾರ್ಮ್ ಮೇಲೆ ನಿರ್ಮಿತವಾಗಿದೆ. ಹಳೆಯ ಮಾದರಿಗಿಂತ ಹೆಚ್ಚು ಉದ್ದ ಮತ್ತು ಅಗಲದ ವಿನ್ಯಾಸ ಒಳಗೊಂಡಿದೆ. ವಿಸ್ತಾರವಾದ ವೀಲ್‌ಬೇಸ್ ಹೊಂದಿದೆ. ಇದರಿಂದಾಗಿ ಪ್ರಯಾಣಿಕರಿಗೆ ಹೆಚ್ಚಿನ ಕ್ಯಾಬಿನ್ ಸ್ಥಳಾವಕಾಶ ಹಾಗೂ ಆರಾಮದಾಯಕ ಪ್ರಯಾಣದ ಅನುಭವ ದೊರೆಯಲಿದೆ ಎಂದರು.ಹೊಸ ಸೆಲ್ಟೋಸ್ ತನ್ನ ವಿಭಾಗದಲ್ಲಿಯೇ ಮೊದಲ ಬಾರಿಗೆ ಹಲವು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದೆ. 30 ಇಂಚಿನ ಟ್ರಿನಿಟಿ ಪ್ಯಾನೊರಾಮಿಕ್ ಡಿಸ್ಪ್ಲೇ, ಪ್ರೀಮಿಯಂ ಲುಕ್ ನೀಡುವ ವಿಶಾಲವಾದ ಪರದೆ, ಮೆಮೊರಿ ಸೀಟ್ಸ್ ಮತ್ತು ಆಟೋ ರಿವರ್ಸ್, ಚಾಲಕನ ಅನುಕೂಲಕ್ಕೆ ತಕ್ಕಂತೆ ಸೀಟ್‌ಗಳನ್ನು ಹೊಂದಿಸುವ ವ್ಯವಸ್ಥೆ ಹೊಂದಿದೆ ಎಂದು ವಿವರಿಸಿದರು. ಈ ಸುಧಾರಿತ ಎಸ್‌ಯುವಿ ಈಗ ಹುಬ್ಬಳ್ಳಿ ಮಾತ್ರವಲ್ಲದೆ, ಶಿರಸಿ ಮತ್ತು ಹಾವೇರಿಯಲ್ಲೂ ಮಾರಾಟಕ್ಕೆ ಲಭ್ಯವಿದೆ ಎಂದರು.

ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಂಡು ಕುಲಕರ್ಣಿ, ಶೋರೂಂನ ಅನ್ನಪೂರ್ಣ ಅಗಡಿ, ಮಹಾಂತೇಶ ಮಟ್ಟಿ, ಸುಹಾನ ಗೌಡರ, ಮಾರ್ಕ್ ಫರ್ನಾಂಡೀಸ್ ಗೋಷ್ಠಿಯಲ್ಲಿದ್ದರು.