ಕಿಕ್ಕೇರಿಯ ಬಯಲು ಸೀಮೆ ಕುಕ್ಕೆ ಸಾಸಲು ಕ್ಷೇತ್ರದ ಮುಜರಾಯಿ ದೇಗುಲವಾದ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲದ ಹುಂಡಿ ಎಣಿಕೆ ಕಾರ್ಯ ನಡೆದು 16,66,746 ರು. ಸಂಗ್ರಹವಾಗಿದೆ.

ಕಿಕ್ಕೇರಿ:

ಬಯಲು ಸೀಮೆ ಕುಕ್ಕೆ ಸಾಸಲು ಕ್ಷೇತ್ರದ ಮುಜರಾಯಿ ದೇಗುಲವಾದ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲದ ಹುಂಡಿ ಎಣಿಕೆ ಕಾರ್ಯ ನಡೆದು 16,66,746 ರು. ಸಂಗ್ರಹವಾಗಿದೆ.

ಮುಜರಾಯಿ ಇಲಾಖೆ ತಹಸೀಲ್ದಾರ್ ಎಸ್.ಯು.ಅಶೋಕ್ ಮಾರ್ಗದರ್ಶನದಂತೆ ಉಪ ತಹಸೀಲ್ದಾರ್ ವೀಣಾರ ಸಮ್ಮುಖದಲ್ಲಿ ಬೆಳಗ್ಗಿನಿಂದ ಸಂಜೆವರೆಗೆ ದೇಗುಲದ ಆವರಣದಲ್ಲಿ ಎಣಿಕೆ ಕಾರ್ಯ ನಡೆದು ಎರಡು ದೇಗುಲಗಳಿಂದ 16,66,746 ರು. ಕಾಣಿಕೆ ರೂಪದಲ್ಲಿ ಭಕ್ತರು ಹುಂಡಿ ಹಾಕಲಾಗಿತ್ತು. ಹಲವು ಭಕ್ತರು ಬೆಳ್ಳಿ ಲೇಪನದ ನಾಗರಸೆಡೆ, ತೊಟ್ಟಿಲುವಿನಂತಹ ವಸ್ತುಗಳನ್ನು ಹರಕೆ ರೂಪದಲ್ಲಿ ಭಕ್ತರುದೇವರಿಗೆ ಅರ್ಪಿಸಿದ್ದರು.

ದೇಗುಲಗಳಲ್ಲಿದ್ದ 16 ಹುಂಡಿಗಳನ್ನು ಪೊಲೀಸರ ಬಿಗಿ ಭದ್ರತೆಯಲ್ಲಿ ಎಣಿಕೆ ಮಾಡಲಾಯಿತು. ಕಂದಾಯ ಇಲಾಖೆಯವರು ಬೆಳಗ್ಗಿನಿಂದ ಸಂಜೆವರೆಗೆ ಎಣಿಕೆ ಮಾಡಲಾಯಿತು.

ನಂತರ ಕಾಣಿಕೆ ಹಣವನ್ನು ಕೆ.ಆರ್.ಪೇಟೆ ಬ್ಯಾಂಕ್‌ ಆಫ್ ಬರೋಡಾದ ದೇಗುಲದ ಮುಜರಾಯಿ ಖಾತೆಗೆ ಜಮಾಕರಿಸಲಾಯಿತು.

ಉಪ ತಹಸೀಲ್ದಾರ್ ವೀಣಾ, ರಾಜಸ್ವ ನಿರೀಕ್ಷಕ ಡಿ.ಆರ್.ನರೇಂದ್ರ, ಗ್ರಾಮ ಆಡಳಿತಾಧಿಕಾರಿ ತಿಪ್ಪೇಶ್, ಸುನೀಲ್‌ ಗಾಣಿಗೇರ್, ವನಜಾಕ್ಷಿ, ಗ್ರಾಮ ಸಹಾಯಕರು, ಬ್ಯಾಂಕ್‌ ಆಫ್‌ ಬರೋಡಾ ಸಿಬ್ಬಂದಿ, ಗ್ರಾಮ ಮುಖಂಡರು ಇದ್ದರು.