ಸಾರಾಂಶ
ಹುಲಿಯನ್ನು ದ್ವೇಷಕ್ಕಾಗಿ ಕೊಲ್ಲುವುದು ಅಕ್ಷಮ್ಯ ಅಪರಾಧ. ಹುಲಿಯ ಸಾವಿನ ವಿಚಾರ ತಿಳಿದು ನನ್ನ ಮನಸ್ಸಿಗೆ ತೀವ್ರ ದುಃಖವಾಯಿತು
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಹುಲಿಯನ್ನು ದ್ವೇಷಕ್ಕಾಗಿ ಕೊಲ್ಲುವುದು ಅಕ್ಷಮ್ಯ ಅಪರಾಧ. ಹುಲಿಯ ಸಾವಿನ ವಿಚಾರ ತಿಳಿದು ನನ್ನ ಮನಸ್ಸಿಗೆ ತೀವ್ರ ದುಃಖವಾಯಿತು. ಇಂತಹ ಘಟನೆ ಮರುಕಳಿಸಿದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಸಂಸದ ಸುನೀಲ್ ಬೋಸ್ ಹೇಳಿದರು. ಪಟ್ಟಣದಲ್ಲಿ ರಾಮಲಿಂಗ ಚೌಡೇಶ್ವರಿ ಕತ್ತಿ ಹಬ್ಬದ ಪೂರ್ವಭಾವಿ ಕಾರ್ಯಕ್ರಮ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಹುಲಿ, ಚಿರತೆ ಇನ್ನಿತರೆ ಪ್ರಾಣಿಗಳು ನಮ್ಮ ಆಸ್ತಿ, ಅವೆಲ್ಲವೂ ಕಾಡಿನ ಸಂಪತ್ತುಗಳಾಗಿವೆ. ಜೂನ್ ತಿಂಗಳಲ್ಲಿ ಹುಲಿ ಸಾವಿನ ವಿಚಾರ ನನಗೆ ಬಹಳ ಬೇಸವನ್ನುಂಟುಮಾಡಿತ್ತು. ಈಗ ಮತ್ತೆ ಮತ್ತೊಂದು ಹುಲಿಗೆ ವಿಷ ಹಾಕಿ ಕೊಂದು ಬಳಿಕ3 ಭಾಗ ಕತ್ತರಿಸಿರುವ ಕ್ರಮ ಘೋರವಾದದ್ದು. ಇಂತಹ ಘಟನೆ ಮತ್ತೆ ನಡೆಯದಂತೆ ಕಟ್ಟೆಚ್ಚರ ವಹಿಸಬೇಕಿದೆ, ಅಲ್ಲದೆ ರಾಷ್ಟ್ರೀಯ ಪ್ರಾಣಿ ಹುಲಿ ಇದನ್ನ ವಯುಕ್ತಿಕ ದ್ವೇಷಕ್ಕಾಗಿ ಕೊಲೆ ಮಾಡಲಾಗುತ್ತಿದೆ ಎಂಬುದು ಸರಿಯಾದ ಕ್ರಮವಲ್ಲ. ಈ ಹಿನ್ನೆಲೆ ಹುಲಿ ಸಂರಕ್ಷಿತ ಧಾಮಕ್ಕಾಗಿ ಸಂಬಂಧಿಸಿದವರ ಜೊತೆ ಚರ್ಚಿಸುವೆ ಎಂದರು.