ಸಾರಾಂಶ
ಯಕ್ಷಲಹರಿ ಕಿನ್ನಿಗೋಳಿಯ 35ನೇ ವರ್ಷ ಸಂಭ್ರಮ ಪ್ರಯುಕ್ತ ಕರ್ಣಾಟಕ ಬ್ಯಾಂಕ್ ಪ್ರಾಯೋಜಿತ ತಾಳಮದ್ದಲೆ ಸಪ್ತಾಹ. ತೆಂಕುತಿಟ್ಟು ಹಿಮ್ಮೇಳ ಸ್ಪರ್ಧಾ ಸಪ್ತಾಹ ಜು.27ರಿಂದ ಆ.2ರ ವರೆಗೆ ನಡೆಯಲಿದೆ. ಆಸಕ್ತರು ಮೇ ೧೦ರೊಳಗೆ ಹೆಸರು ನೋಂದಾಯಿಸಲು ಅವಕಾಶ ಇದೆ.
ಕನ್ನಡಪ್ರಭ ವಾರ್ತೆ ಮೂಲ್ಕಿಯಕ್ಷಲಹರಿ ಕಿನ್ನಿಗೋಳಿಯ 35ನೇ ವರ್ಷ ಸಂಭ್ರಮ ಪ್ರಯುಕ್ತ ಕರ್ಣಾಟಕ ಬ್ಯಾಂಕ್ ಪ್ರಾಯೋಜಿತ ತಾಳಮದ್ದಲೆ ಸಪ್ತಾಹ. ತೆಂಕುತಿಟ್ಟು ಹಿಮ್ಮೇಳ ಸ್ಪರ್ಧಾ ಸಪ್ತಾಹ ಜು.27ರಿಂದ ಆ.2ರ ವರೆಗೆ ನಡೆಯಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳು ತೆಂಕುತಿಟ್ಟು ಹಿಮ್ಮೇಳ ಹೊಂದಿರಬೇಕು. ಸ್ಪರ್ಧೆಯ ಅವಧಿ 2 ಗಂಟೆ 30 ನಿಮಿಷ. ಸ್ಪರ್ಧಾ ತಂಡದಲ್ಲಿ ಹಿಮ್ಮೇಳ ಮುಮ್ಮೇಳ ಸೇರಿ ಗರಿಷ್ಠ 10 ಮಂದಿ ಕನಿಷ್ಠ 8 ಮಂದಿ ಸದಸ್ಯರು ತಂಡದಲ್ಲಿರುವುದು ಕಡ್ಡಾಯ. ಹಿಮ್ಮೇಳ ಮುಮ್ಮೇಳಗಳಲ್ಲಿ ಭಾಗವಹಿಸುವವರು ಹವ್ಯಾಸಿ ಕಲಾವಿದರು ಆಗಿರಬೇಕು. ಸ್ಪರ್ಧೆಯಲ್ಲಿ ಪುರುಷ ಅಥವಾ ಮಹಿಳಾ ತಂಡಗಳು ಅಥವಾ ಸಂಯುಕ್ತವಾಗಿಯೂ ಭಾಗವಹಿಸಬಹುದು.ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು.
ಸ್ಪರ್ಧಿಸುವ ತಂಡಗಳು ರು. 5 ಸಾವಿರ ಭದ್ರತಾ ಠೇವಣಿಯಾಗಿ ಪಾವತಿಸುವುದು ಕಡ್ಡಾಯ. ಈ ಮೊಬಲಗನ್ನು ಕಾರ್ಯಕ್ರಮ ನೀಡಿದ ಬಳಿಕ ಹಿಂದಿರುಗಿಸಲಾಗುವುದು.ಭಾಗವಹಿಸುವ ತಂಡಗಳಿಗೆ ಕನಿಷ್ಠ ರು. 3,000, ಗರಿಷ್ಠ ರು. 5,000 ಗೌರವಧನವನ್ನಾಗಿ ನೀಡಿ ಪ್ರೋತ್ಸಾಹಿಸಲಾಗುವುದು. ಸ್ಪರ್ಧಾ ತಂಡಗಳು ಪ್ರವೇಶ ಪತ್ರವನ್ನು ಮೇ 10 ರ ಒಳಗೆ: ಅಧ್ಯಕ್ಷರು/ಕಾರ್ಯದರ್ಶಿ ಯಕ್ಷಲಹರಿ ಕಿನ್ನಿಗೋಳಿ, ದ.ಕ. ಶ್ರೀ ದುರ್ಗಾ ರೆಸಿಡೆನ್ಸಿ ರಾಜರತ್ನಪುರ, ಕಿನ್ನಿಗೋಳಿ - 574150 ಇಲ್ಲಿಗೆ ತಲುಪಿಸಬೇಕುಯ
ಆಯ್ಕೆ ಪ್ರಕ್ರಿಯೆ ನಡೆಸಿ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾದ ತಂಡಗಳಿಗೆ ಮೇ 15 ರ ಒಳಗೆ ತಿಳಿಸಲಾಗುವುದು. ಮೇ 18 ರ ಒಳಗೆ ಆಯ್ಕೆಯಾದ ತಂಡಗಳ ಭದ್ರತಾ ಠೇವಣಿ ಪಾವತಿಸುವುದು ಕಡ್ಡಾಯ. ಮೇ 25 ರಂದು ಆಯ್ಕೆಯಾದ ತಂಡದವರ ಉಪಸ್ಥಿತಿಯಲ್ಲಿ ಸಂಘಟಕರು ನಿಗದಿಗೊಳಿಸಿದ ಪ್ರಸಂಗಗಳನ್ನು ಚೀಟಿ ಎತ್ತುವ ಮೂಲಕ ದಿನಾಂಕದೊoದಿಗೆ ನಿಗದಿಗೊಳಿಸಲಾಗುವುದುದೆಂದು ಪ್ರಕಟಣೆ ತಿಳಿಸಿದೆ.