ಸಾರಾಂಶ
ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಿಚ್ಚು ಹಚ್ಚಿದ ಕೀರ್ತಿ ವೀರರಾಣಿ ಕಿತ್ತೂರು ಚೆನ್ನಮ್ಮನಿಗೆ ಸಲ್ಲುತ್ತದೆ. ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯಕ್ಕಾಗಿ ವೀರಮರಣ ಹೊಂದಿದರು. ಅವರ ಧೈರ್ಯ ಸಾಹಸ, ಇಂದಿಗೂ ಆದರ್ಶವಾಗಿದ್ದು, ಅವರ ನಡೆನುಡಿ, ದೇಶಪ್ರೇಮ ಎಲ್ಲರಲ್ಲಿಯೂ ಬರಬೇಕು.
ಲಕ್ಷ್ಮೇಶ್ವರ: ಕನ್ನಡ ನಾಡಿನ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅಪ್ರತಿಮ ಸಾಹಸ ಮತ್ತು ಶೌರ್ಯಗಳಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾರ್ಯ ಪ್ರಸ್ತುತವಾಗಿದ್ದು, ರಾಣಿ ಚೆನ್ನಮ್ಮ ಸ್ವಾಭಿಮಾನದ ಪ್ರತೀಕರಾಗಿದ್ದಾರೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಮಹಾಂತಶೆಟ್ಟರ ತಿಳಿಸಿದರು.
ಪಟ್ಟಣದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಮಹಿಳಾ ವೇದಿಕೆಯ ವತಿಯಿಂದ ಭಾನುವಾರ ಸಮಾಜದ ಲಕ್ಷ್ಮವ್ವ ಆಚಾರಿ ಅವರ ನಿವಾಸದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನ ೨೦೧ನೇ ವಿಜಯೋತ್ಸವ ಹಾಗೂ ೨೪೭ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಿಚ್ಚು ಹಚ್ಚಿದ ಕೀರ್ತಿ ವೀರರಾಣಿ ಕಿತ್ತೂರು ಚೆನ್ನಮ್ಮನಿಗೆ ಸಲ್ಲುತ್ತದೆ. ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯಕ್ಕಾಗಿ ವೀರಮರಣ ಹೊಂದಿದರು. ಅವರ ಧೈರ್ಯ ಸಾಹಸ, ಇಂದಿಗೂ ಆದರ್ಶವಾಗಿದ್ದು, ಅವರ ನಡೆನುಡಿ, ದೇಶಪ್ರೇಮ ಎಲ್ಲರಲ್ಲಿಯೂ ಬರಬೇಕು ಎಂದರು.ಶಕುಂತಲಾ ಹೊರಟ್ಟಿ, ಲಕ್ಷ್ಮವ್ವ ಆಚಾರಿ ಮಾತನಾಡಿ, ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಕ್ರಾಂತಿ ಕಹಳೆ ಮೊಳಗಿಸಿದ ಸ್ವತಂತ್ರ ಭಾರತದ ವೀರರಾಣಿ ಕಿತ್ತೂರು ಚೆನ್ನಮ್ಮ ಕನ್ನಡ ನಾಡಿನ ಹೆಮ್ಮೆ. ಚೆನ್ನಮ್ಮನ ದೇಶಪ್ರೇಮ, ಶೌರ್ಯ, ಸಾಹಸ ಯುವ ಪೀಳಿಗೆಗೆ ಆದರ್ಶವಾಗಬೇಕು ಎಂದರು.
ಸಭೆಯಲ್ಲಿ ಚೆನ್ನಮ್ಮ ಗುರಿಕಾರ್, ಶೈಲಾ ಆದಿ, ಮಂಜುಳಾ ಪಿಳ್ಳಿ ವಿಜಯಕ್ಕ ಬಾಳೆಕಾಯಿ, ಸುಶೀಲಾ ಪೂಜಾರ, ಚೆನ್ನಮ್ಮ ಚಿಂಚಲಿ, ಕುಸುಮಾ ಸೋಮಕ್ಕನವರ, ಸರೋಜಕ್ಕ ಬನ್ನೂರ, ನೀಲಕ್ಕ ಬೂದಿಹಾಳ, ಗೀತಾ ಕೊಡ್ಲಿ, ಸುನಂದಾ ಆಚಾರಿ, ಚಂಪಾವತಿ ಬಾಳಿಕಾಯಿ, ಗುರುಬಾಯಿ ಹುಲಸೂರ ಸೇರಿದಂತೆ ವಿನಾಯಕ ನಗರದ ಮಹಿಳೆಯರು ಉಪಸ್ಥಿತರಿದ್ದರು. ಮಹಿಳೆಯರಿಗಾಗಿ ಹಾಡು ಆಟ ಮನರಂಜನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಾಜದ ಮಹಿಳೆಯರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.;Resize=(128,128))
;Resize=(128,128))
;Resize=(128,128))