ಕೆಎಲ್ಇ ಶಿಕ್ಷಣ ಜತೆಗೆ ಸಂಸ್ಕಾರ ನೀಡಿದ ಸಂಸ್ಥೆ

| Published : Nov 17 2025, 01:45 AM IST

ಸಾರಾಂಶ

ಗ್ರಾಮೀಣ ಭಾಗದಲ್ಲಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಕೆಎಲ್ಇ ಸಂಸ್ಥೆಯು ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಒಳ್ಳೆಯ ಕಾರ್ಯ

ಕುಕನೂರು: ಕೆಎಲ್ಇ ಸಂಸ್ಥೆ ಶಿಕ್ಷಣ ಜತೆಗೆ ಸಂಸ್ಕಾರ ಸಹ ನೀಡಿದೆ ಎಂದು ನಿವೃತ್ತ ಪ್ರಾಚಾರ್ಯ ಎಸ್.ಸಿ. ಪಾಟೀಲ್ ಹೇಳಿದರು.

ಪಟ್ಟಣದ ಕೆಎಲ್ಇ ಸಂಸ್ಥೆಯ ಪದವಿಪೂರ್ವ ಕಾಲೇಜಿನಲ್ಲಿ ಸಂಸ್ಥೆಯ 110ನೇಯ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಸಂಸ್ಥೆಯ ಆಡಳಿತ ಚುಕ್ಕಾಣಿ ಹಿಡಿದಾಗ ಕೇವಲ 34 ಅಂಗ ಸಂಸ್ಥೆಗಳಿದ್ದು, ಈಗ 316ಕ್ಕೂ ಹೆಚ್ಚು ಅಂಗಸಂಸ್ಥೆ ಹೊಂದಿದೆ. ಶಿಕ್ಷಣದ ಜತೆಗೆ ಅನೇಕರ ಬಾಳಿಗೆ ಉದ್ಯೋಗ ನೀಡಿ ಬೆಳಕಾಗಿದೆ ಎಂದರು.

ಉಪನ್ಯಾಸಕ ಎಸ್.ಎಸ್.ರಾಜೂರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಕೆಎಲ್ಇ ಸಂಸ್ಥೆಯು ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಒಳ್ಳೆಯ ಕಾರ್ಯ ಎಂದರು.

ಉಪನ್ಯಾಸಕ ಕುಂಟೆಪ್ಪ ಬೇವೂರ ಮಾತನಾಡಿ, ಏಳು ಜನ ಶಿಕ್ಷಕರಿಂದ ಸ್ಥಾಪಿಸಲ್ಪಟ್ಟ ಕೆಎಲ್ಇ ಸಂಸ್ಥೆಯು ಇಂದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೃಹದಾಕಾರವಾಗಿ ಬೆಳೆದಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಅರುಣಕುಮಾರ ಹಿರೇಮಠ ಮಾತನಾಡಿ ಸಂಸ್ಥೆ ಕಟ್ಟಿದ ಮಹನೀಯರನ್ನು ಸ್ಮರಿಸಿದರು.

ಉಪನ್ಯಾಸಕ ಶರಣಪ್ಪ ಉಮಚಗಿ, ನೇತ್ರಾವತಿ ಎಸ್ ಉಳ್ಳಾಗಡ್ಡಿ, ಕಿರಣಕುಮಾರ, ಮಂಜುಳಾ ಎಂ. ಪೂಜಾ ಸಸಿಮಠ ಇತರರಿದ್ದರು.