ಪೊನ್ನಂಪೇಟೆ ಗ್ರಾ.ಪಂ. ಉಪಾಧ್ಯಕ್ಷರಿಗೆ ಕೆಎಂಎ ಸನ್ಮಾನ

| Published : Apr 05 2024, 01:09 AM IST

ಸಾರಾಂಶ

ಪೊನ್ನಂಪೇಟೆ ಸಮೀಪದ ಕಾಟ್ರಕೊಲ್ಲಿಯ ಆಲೀರ ಎಂ. ರಶೀದ್ ಪೊನ್ನಂಪೇಟೆ ಗ್ರಾ. ಪಂ.ಗೆ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಅವರನ್ನು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ವಿರಾಜಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಪೊನ್ನಂಪೇಟೆ ಗ್ರಾ. ಪಂ.ಗೆ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಪೊನ್ನಂಪೇಟೆ ಸಮೀಪದ ಕಾಟ್ರಕೊಲ್ಲಿಯ ಆಲೀರ ಎಂ. ರಶೀದ್ ಅವರನ್ನು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ವಿರಾಜಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ. ಎಂ. ಎ. ನಿರ್ದೇಶಕರೂ ಆಗಿರುವ ಆಲೀರ ಎಂ. ರಶೀದ್ ಅವರನ್ನು ಸಮುದಾಯದ ಪರವಾಗಿ ಸತ್ಕರಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ರಶೀದ್, ಗುರುತಿಸುವಿಕೆ ಮತ್ತು ಸನ್ಮಾನದಂತಹ ಗೌರವಗಳು ಮತ್ತಷ್ಟು ಸಮಾಜ ಸೇವೆಗೆ ಪ್ರೇರಣೆ ನೀಡುತ್ತದೆ. ಅಲ್ಲದೆ ಸಾಮಾಜಿಕ ಹೊಣೆಗಾರಿಕೆಗಳನ್ನು ಕೂಡ ಹೆಚ್ಚು ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಮಾತನಾಡಿ, ಪ್ರತಿಯೊಬ್ಬರಿಗೂ ಸಮಾಜ ಸೇವೆ ಮಾಡುವ ಅವಕಾಶವಿದ್ದರೂ, ಶಾಸನಬದ್ಧವಾದ ಅಧಿಕಾರ ಹೊಂದಿರುವ ಸ್ಥಾನದಲ್ಲಿ ನಿಂತು ಮಾಡುವ ಸಮಾಜ ಸೇವೆ ನಿಜಕ್ಕೂ ಮೌಲ್ಯಯುತವಾದದ್ದು ಎಂದರು.

ಕೊಡವ ಮುಸ್ಲಿಂ ಅಸೋಸಿಯೇಷನ್ ಹಿರಿಯ ಉಪಾಧ್ಯಕ್ಷ ಡಾ. ಜೋಯಿಪೆರ ಎ. ಕುಂಜ್ಹಬ್ದುಲ್ಲಾ ಮಾತನಾಡಿ, ಜನಪ್ರತಿನಿಧಿಯಾದವರಿಗೆ ಜಾತಿ,ಮತ, ಧರ್ಮ ಭಾಷೆಗಳನ್ನು ಮೀರಿ ಸಮಾಜ ಸೇವೆ ಮಾಡುವ ಅವಕಾಶವಿದೆ. ಇದನ್ನು ದೊರೆಯುವ ಅಧಿಕಾರಾವಧಿಯಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು.ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಅಕ್ಕಳತಂಡ ಎಸ್. ಮೊಯ್ದು, ಸಂಸ್ಥೆಯ ಮಾಜಿ ನಿರ್ದೇಶಕ ಮತ್ತು ನಿವೃತ್ತ ಉಪ ತಹಸೀಲ್ದಾರ್‌ ಚಿಮ್ಮಿಚ್ಚಿರ ಎ. ಅಬ್ದುಲ್ಹಾ ಹಾಜಿ ಮತ್ತಿತರರಿದ್ದರು.

ಕೆಎಂಎ ಆಡಳಿತ ಮಂಡಳಿ ಪದಾಧಿಕಾರಿಗಳಾದ ಚಿಮ್ಮಿಚ್ಚಿರ ಕೆ. ಇಬ್ರಾಹಿಂ, ಮಂಡೆಂಡ ಎ. ಮೊಯ್ದು, ಪುದಿಯತ್ತಂಡ ಎಚ್. ಸಂಶುದ್ದೀನ್, ಪೊಯಕೆರ ಎಸ್. ಮೊಹಮ್ಮದ್ ರಫೀಕ್, ಪುದಿಯಾಣೆರ ಎಂ. ಹನೀಫ್, ಕುಪ್ಪೋಡಂಡ ಎ. ಅಬ್ದುಲ್ ರಶೀದ್, ಪುಡಿಯಂಡ ಯು. ಹನೀಫ್, ಆಲೀರ ಬಿ. ಅಬ್ದುಲ್ಲಾ, ಕೋಳುಮಂಡ ರಫೀಕ್, ಕೆಂಗೋಟಂಡ ಎಸ್. ಸೂಫಿ, ದುದ್ದಿಯಂಡ ಹೆಚ್. ಮೊಯ್ದು, ಆಲೀರ ಎಚ್. ಅಬ್ದುಲ್ ಲತೀಫ್, ಮಂದಮಾಡ ಎ.ಮುನೀರ್, ಕುಂಡಂಡ ಎ. ರಜಾಕ್, ಪರವಂಡ ಸಿರಾಜ್, ಕತ್ತಣಿರ ಹೆಚ್. ಅಬ್ದುಲ್ ರೆಹಮಾನ್ (ಅಂದಾಯಿ) ಮೊದಲಾದವರು ಹಾಜರಿದ್ದರು.

ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಎಂ.ಎಂ. ಇಸ್ಮಾಯಿಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಫೀಕ್ ತೂಚಮಕೇರಿ ಕಾರ್ಯಕ್ರಮ ನಿರ್ವಹಿಸಿದರು. ಜಂಟಿ ಕಾರ್ಯದರ್ಶಿ ಮುಸ್ತಫ ವಂದಿಸಿದರು.