ಮುನಿಯಾಲು ಆಸ್ಪತ್ರೆಯಲ್ಲಿ ಮೊಣಕಾಲು ನೋವು ಚಿಕಿತ್ಸಾ ಶಿಬಿರ

| Published : Jun 11 2024, 01:30 AM IST

ಮುನಿಯಾಲು ಆಸ್ಪತ್ರೆಯಲ್ಲಿ ಮೊಣಕಾಲು ನೋವು ಚಿಕಿತ್ಸಾ ಶಿಬಿರ
Share this Article
  • FB
  • TW
  • Linkdin
  • Email

ಸಾರಾಂಶ

ಈ ಶಿಬಿರವನ್ನು ಸೋಮವಾರ ಕಾಲೇಜಿನ ಪ್ರಾಂಶುಪಾಲ ಡಾ. ಸತ್ಯನಾರಾಯಣ ಬಿ., ಪಿ.ಜಿ. ಡೀನ್ ಮತ್ತು ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ. ಚಂದ್ರಕಾಂತ್ ಭಟ್, ರಸಶಾಸ್ತ್ರ ಮತ್ತು ಬೈಷಜ್ಯ ವಿಭಾಗದ ಮುಖ್ಯಸ್ಥ ಡಾ. ದಿನೇಶ್ ನಾಯಕ್ ಜೆ., ಕಾಯಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ರಶ್ಮಿ ಕಲ್ಕೂರ, ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಪ್ರಿಯಾಂಕ ರಾಥೋಡ್‌ ಅವರು ಜೊತೆಯಾಗಿ ದೀಪೋಜ್ವಲನ ಮಾಡುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಇಲ್ಲಿನ ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಕಾಯಚಿಕಿತ್ಸಾ ಸ್ನಾತಕೋತ್ತರ ವಿಭಾಗದ ವತಿಯಿಂದ ಜೂನ್ ೧೦ರಿಂದ ಜೂನ್ ೧೬ರ ವರೆಗೆ ಬೆಳಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆ ವರೆಗೆ ಮೊಣಕಾಲು ನೋವು (ಒಸ್ಟಿಯೋ ಆರ್ತ್ರೈಟಿಸ್) ರೋಗದ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಈ ಶಿಬಿರವನ್ನು ಸೋಮವಾರ ಕಾಲೇಜಿನ ಪ್ರಾಂಶುಪಾಲ ಡಾ. ಸತ್ಯನಾರಾಯಣ ಬಿ., ಪಿ.ಜಿ. ಡೀನ್ ಮತ್ತು ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ. ಚಂದ್ರಕಾಂತ್ ಭಟ್, ರಸಶಾಸ್ತ್ರ ಮತ್ತು ಬೈಷಜ್ಯ ವಿಭಾಗದ ಮುಖ್ಯಸ್ಥ ಡಾ. ದಿನೇಶ್ ನಾಯಕ್ ಜೆ., ಕಾಯಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ರಶ್ಮಿ ಕಲ್ಕೂರ, ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಪ್ರಿಯಾಂಕ ರಾಥೋಡ್‌ ಅವರು ಜೊತೆಯಾಗಿ ದೀಪೋಜ್ವಲನ ಮಾಡುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು. ಸಂಸ್ಥೆಯ ಇತರ ವೈದ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜೂನ್ ೧೬ ರವರೆಗೆ ಈ ಚಿಕಿತ್ಸಾ ಶಿಬಿರವು ನಡೆಯಲಿದ್ದು, ಆಸಕ್ತರು ಈ ಉಚಿತ ಚಿಕಿತ್ಸೆಯ ಪ್ರಯೋಜನ ಪಡೆಯಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.