ಸಾರಾಂಶ
ಕರಂಬಳ್ಳಿ ವೆಂಕಟ್ರಮಣ ದೇವಸ್ಥಾನ ಆಡಳಿತ ಮಂಡಳಿ ಮತ್ತು ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಆಶ್ರಯದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಹಮ್ಮಿಕೊಂಡ ಜ್ಞಾನ ದೀಪೋತ್ಸವವು ವಿಜೃಂಭಣೆಯಿಂದ ಮಂಗಳವಾರ ಸಂಪನ್ನಗೊಂಡಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಕರಂಬಳ್ಳಿ ವೆಂಕಟ್ರಮಣ ದೇವಸ್ಥಾನ ಆಡಳಿತ ಮಂಡಳಿ ಮತ್ತು ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಆಶ್ರಯದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಹಮ್ಮಿಕೊಂಡ ಜ್ಞಾನ ದೀಪೋತ್ಸವವು ವಿಜೃಂಭಣೆಯಿಂದ ಮಂಗಳವಾರ ಸಂಪನ್ನಗೊಂಡಿತು.7 ದಿನಗಳ ಪರ್ಯಂತ ಭಾಗವತ ಸಪ್ತಾಹ (ದಶಮ ಸ್ಕಂದ )ಪ್ರವಚನವನ್ನು ನಡೆಸಿ ಕೊಟ್ಟ ಉಡುಪಿ ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯ ಶ್ರೀಪಾದರನ್ನು ಈ ಸಂದರ್ಭ ಅಭಿನಂದಿಸಲಾಯಿತು.ವಾಸ್ತು ತಜ್ಞ ಶ್ರೀ ಸುಬ್ರಮಣ್ಯ ಭಟ್ ಗುಂಡಿಬೈಲ್ ಅವರು ಕಾರ್ತಿಕ ಮಾಸ ಜ್ಞಾನ ದೀಪೋತ್ಸವದ ಮಹತ್ವವನ್ನು ತಿಳಿಸಿದರು. ಉಡುಪಿ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ ಚಟುವಟಿಕೆಗಳನ್ನು ಕೊಂಡಾಡಿದರು.ದೇವಳದ ಅರ್ಚಕ ದಿವಾಕರ್ ಐತಾಳ್ ಉಪಸ್ಥಿತರಿದ್ದರು. ಸಮಿತಿ ಅಧ್ಯಕ್ಷ ಕೀಳಂಜೆ ಶ್ರೀಕೃಷ್ಣರಾಜ್ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ನಾಗರಾಜ್ ಭಟ್ ವಂದಿಸಿದರು.ಸಮಿತಿಯ ಪದಾಧಿಕಾರಿಗಳಾದ ಅಜಿತ್ ಬಿಜಾಪುರ್, ರಂಗನಾಥ ಸಾಮಗ, ಲಕ್ಷ್ಮೀನಾರಾಯಣ ಆಚಾರ್, ರಂಗನಾಥ ಸರಳಾಯ, ರಾಜಶೇಖರ್, ಪ್ರಕಾಶಾಚಾರ್, ಶ್ರೀಪತಿ ಭಟ್, ವೇದವ್ಯಾಸಾಚಾರ್, ಚಂದ್ರಕಾಂತ್ ಸಹಕರಿಸಿದರು. ವಾಸುದೇವ ಭಟ್ ನಿರ್ವಹಿಸಿದರು.