ಭಾಗವತ ಆಲಿಕೆಯಿಂದ ಶ್ರವಣದಿಂದ ಜ್ಞಾನ ಸುಧಾರಣೆ

| Published : Aug 07 2024, 01:05 AM IST

ಸಾರಾಂಶ

ಭಾಗವತ ಶ್ರವಣದಿಂದ ಜೀವನವನ್ನು ನೋಡುವ ವಿಧಾನ ಬದಲಾಗುತ್ತದೆ. ಪ್ರಪಂಚವನ್ನು ಪರಿಭಾವಿಸುವ ದೃಷ್ಟಿ ಸುಧಾರಣೆಗೊಳ್ಳುತ್ತದೆ. ಪ್ರಕೃತಿಯ ಮಿತಿಗಳನ್ನು ಅರಿಯುವ ಜ್ಞಾನ ಬರುತ್ತದೆ. ಭಾಗವತ ಶ್ರವಣದಿಂದ ಪುಣ್ಯ ಪ್ರಾಪ್ತಿ ಸಾಧ್ಯ ಎಂದು ಪಂಡಿತ ಶ್ರೀಮಧ್ವಾಚಾರ್ಯ ಮಣೂರ ಹೇಳಿದರು.

ಕನ್ನಡಪ್ರಭ ವಾರ್ತೆ ಜೇವರ್ಗಿ

ಭಾಗವತ ಶ್ರವಣದಿಂದ ಜೀವನವನ್ನು ನೋಡುವ ವಿಧಾನ ಬದಲಾಗುತ್ತದೆ. ಪ್ರಪಂಚವನ್ನು ಪರಿಭಾವಿಸುವ ದೃಷ್ಟಿ ಸುಧಾರಣೆಗೊಳ್ಳುತ್ತದೆ. ಪ್ರಕೃತಿಯ ಮಿತಿಗಳನ್ನು ಅರಿಯುವ ಜ್ಞಾನ ಬರುತ್ತದೆ. ಭಾಗವತ ಶ್ರವಣದಿಂದ ಪುಣ್ಯ ಪ್ರಾಪ್ತಿ ಸಾಧ್ಯ ಎಂದು ಪಂಡಿತ ಶ್ರೀಮಧ್ವಾಚಾರ್ಯ ಮಣೂರ ಹೇಳಿದರು.

ತಾಲೂಕಿನ ಯಾಳವಾರ ಗ್ರಾಮದ ಹಣಮಂತರಾವ ಕುಲಕರ್ಣಿ ಅವರ ಮನೆಯಲ್ಲಿ ಆಷಾಡ ಮಾಸದ ನಿಮಿತ್ತ ಪಂಡಿತ ಶ್ರೀಮಧ್ವಾಚಾರ್ಯ ಮಣೂರ ಅವರಿಂದ ಭಾಗವತ ಪ್ರವಚನ ಜು.31ರಿಂದ ಆ.6ರ ವರೆಗೆ ಬೆ.7ರಿಂದ ಮ.12 ಹಾಗೂ ಸಂಜೆ 6ರಿಂದ 9ರ ವರೆಗೆ ನಡೆಯಿತು. 7 ದಿನಗಳ ಪರ್ಯಂತ ಆಯೋಜಿಸಿದ್ದ ಭಾಗವತ ಪ್ರವಚನ ಮಂಗಲ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಜಗತ್ತು ಸಾಧನಾ ಭೂಮಿ. ನಮ್ಮ ಶಾಶ್ವತ ಸಂಬಂಧಗಳೆನಿದ್ದರೂ ಅವು ದೇವರೊಂದಿಗೆ ಇರಬೇಕು ಎಂದು ಭಾಗವತ ಹೇಳಿದೆ. ಭಾಗವತ ಕೇವಲ ಗ್ರಂಥವಲ್ಲ. ಬದುಕಿನಲ್ಲಿ ಯಾವುದನ್ನು ಮಾಡಬೇಕು. ಎನನ್ನು ಮಾಡಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ ಇಂದಿನ ದಿನಮಾನಗಳಲ್ಲಿ ನಾವು ಮಾಡಬಾರದ್ದನೇ ಮಾಡಿ ನಿತ್ಯವೂ ದುಃಖಪಡುವ ಸ್ಥಿತಿ ಬಂದೋದಗಿದೆ. ಹಾಗಾಗದಂತೆ ನಾವೆಲ್ಲರೂ ನೋಡಿಕೊಳ್ಳಬೇಕು. ದಾನ ಧರ್ಮ, ಪರೋಪಕಾರ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೇ ಯಾದರೆ ಜನ್ಮ ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ವಿಪ್ರ ಸಮಾಜದ ತಾಲೂಕು ಘಟಕದ ಅಧ್ಯಕ್ಷ ರಮೇಶಬಾಬು ವಕೀಲ್, ಹಣಮಂತರಾವ ಕುಲಕರ್ಣಿ ಯಾಳವಾರ, ಸರೇಶ ಕುಲಕರ್ಣಿ, ಕಿಶನರಾವ ಕುಲಕರ್ಣಿ, ರವೀಂದ್ರ ಕುಲಕರ್ಣಿ, ಗುರುರಾಜ ಕುಲಕರ್ಣಿ, ಪ್ರತೀಕ ಕುಲಕರ್ಣಿ, ರಾಘವೇಂದ್ರ ಆಲಬಾಳ, ಎಲ್.ವಿ.ಕುಲಕರ್ಣಿ, ಶಾಮರಾವ ಕುಲಕರ್ಣಿ ರ‍್ಯಾವನೂರ, ಅಪ್ಪಣ್ಣಗೌಡ ಕೂಟನೂರ, ಕೃಷ್ಣಾಭಟ್ಟ ಹೆಬ್ಬಾಳ, ಶ್ರೀರಂಗ ಕರಲಗಿ, ದತ್ತಾತ್ರೆಯರಾವ ಕುಲಕರ್ಣಿ ರೇವನೂರ, ಸುದರ್ಶನ ಆಲಬಾಳ, ಪರಿಮಳಬಾಯಿ ಯಾಳವಾರ, ಲಕ್ಷ್ಮೀ ಯಾಳವಾರ, ನಂದಬಾಯಿ ಪಟವಾರಿ, ಸೀತಾ ಯಾಳವಾರ, ಅನುರಾಧಾ ಕುಲಕರ್ಣಿ ಜೇವರ್ಗಿ, ಶಾಂತಾ ಯಾಳವಾರ, ವಿಮಲಾಬಾಯಿ ಕಲಬುರ್ಗಿ ಸೇರಿದಂತೆ ವಿಪ್ರ ಬಾಂಧವರು ಮಹಿಳೆಯರು ಯಾಳವಾರ ಗ್ರಾಮಸ್ಥರು ಭಾಗವತ ಪ್ರವಚನ ಮಂಗಲ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.