ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ ಜಗತ್ತಿನಲ್ಲಿ ಜ್ಞಾನಕ್ಕೆ ಸಮನಾದದ್ದು ಯಾವುದು ಇಲ್ಲ. ಜ್ಞಾನವೇ ಗುರಿ ಮುಟ್ಟಲು ನಮಗೆಲ್ಲ ಪ್ರೇರಣೆಯಾಗಿದೆ ಎಂದು ಪ್ರೆಸ್ ಕ್ಲಬ್ ಅಧ್ಯಕ್ಷ ಶಾಂತೂ ಹಿರೇಮಠ ಹೇಳಿದರು. ಪಟ್ಟಣದ ಪ್ರೇರಣಾ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ 2024-25 ನೇ ಸಾಲಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಶಾಲಾ ಸಂಸತ್ ಪದಾಧಿಕಾರಿಗಳ ಪ್ರತಿಜ್ಞಾವಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಸಿಂದಗಿ
ಜಗತ್ತಿನಲ್ಲಿ ಜ್ಞಾನಕ್ಕೆ ಸಮನಾದದ್ದು ಯಾವುದು ಇಲ್ಲ. ಜ್ಞಾನವೇ ಗುರಿ ಮುಟ್ಟಲು ನಮಗೆಲ್ಲ ಪ್ರೇರಣೆಯಾಗಿದೆ ಎಂದು ಪ್ರೆಸ್ ಕ್ಲಬ್ ಅಧ್ಯಕ್ಷ ಶಾಂತೂ ಹಿರೇಮಠ ಹೇಳಿದರು.ಪಟ್ಟಣದ ಪ್ರೇರಣಾ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ 2024-25 ನೇ ಸಾಲಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಶಾಲಾ ಸಂಸತ್ ಪದಾಧಿಕಾರಿಗಳ ಪ್ರತಿಜ್ಞಾವಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಔಪಚಾರಿಕ ಶಿಕ್ಷಣ ನಮಗೆ ಅಗತ್ಯವಿಲ್ಲ, ಸಂಸ್ಕಾರದ ಶಿಕ್ಷಣ ಅಗತ್ಯವಾಗಿದೆ. ಜಾಗತಿಕರಣ ಯುಗದಲ್ಲಿ ಖಾಸಗಿ ಶಾಲೆಗಳು ವ್ಯವಹಾರ ಕೇಂದ್ರಗಳಾಗಿವೆ. ಆದರೆ ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾದ ಮಾನವೀಯ ಮೌಲ್ಯಗಳನ್ನು ಕೊಡುವಲ್ಲಿ ಈ ಸಂಸ್ಥೆ ಅಧ್ಭುತ ಸಾಧನೆ ಮಾಡಿದೆ ಎಂದರು.
ಆದರ್ಶ ಮಾಹಾವಿದ್ಯಾಲಯದ ಪ್ರಾಚಾರ್ಯ ಎಸ್.ಕೆ.ಬಿರಾದಾರ, ಎಚ್.ಜಿ.ಬಾಲಕರ ಪ್ರೌಢ ಶಾಲೆಯ ಮುಖ್ಯಗುರು ಎಸ್.ಬಿ.ಕುಲಕರ್ಣಿ ಹಾಗೂ ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ ಮಾತನಾಡಿ, ಪಠ್ಯದ ಜೊತೆಗೆ ಪಠ್ಯೇತರ ಕೌಶಲಗಳನ್ನು ಬಳಸಿಕೊಂಡು ಪ್ರತಿಭೆ ಅನಾವರಣಗೊಳಿಸುವುದು ಮುಖ್ಯವಾಗಿದೆ. .ಪುಸ್ತಕ ಜ್ಞಾನದ ಸಂಕೇತ ವಿದ್ಯಾರ್ಥಿಗಳು ಅಭ್ಯಾಸ ಮಾಡಿ ಪರೀಕ್ಷೆ ಬರೆಯುವುದು ಅನಿವಾರ್ಯ ಎಂದು ತಿಳಿಸಿದರು.ಶಾಲೆಯ ಪಿ.ಡಿ.ಕುಲಕರ್ಣಿ, ಮುಖ್ಯಗುರುಮಾತೆ ಎಸ್.ಐ.ಅಸ್ಕಿ ಇದ್ದರು. ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.ಶಾಲಾ ಶಿಕ್ಷಕರಾದ ಸಚಿನ ಮಠಪತಿ, ಶ್ರೀಕಾಂತ ಗೋಗಿ, ಸತೀಶ ಕುಲಕರ್ಣಿ, ವಿದ್ಯಾಶ್ರೀ ಅಂಬಲಗಿ, ನಂದಕುಮಾರ ಹೊಳ್ಳ ಸೇರಿದಂತೆ ಶಾಲಾ ಶಿಕ್ಷಕರ ಬಳಗ ಉಪಸ್ಥಿತರಿದ್ದರು.