ಆಯುರ್ವೇದದ ಅರಿವು ಅಗತ್ಯ: ನ್ಯಾ.ರೇಣುಕಾ

| Published : Dec 05 2024, 01:31 AM IST

ಸಾರಾಂಶ

ರಾಮನಗರ: ಉತ್ತಮ ಆರೋಗ್ಯಕ್ಕೆ ಆಯುರ್ವೇದವೂ ಅಗತ್ಯವಾಗಿದೆ. ಈ ಆಯುರ್ವೇದದ ಬಗ್ಗೆ ಅರಿವು ಪಡೆದುಕೊಳ್ಳುವುದು ಒಳ್ಳೆಯ ಕಾರ್ಯ ಎಂದು ಜಿಲ್ಲಾ ಸತ್ರ ನ್ಯಾಯಾಧೀಶರಾದ ರೇಣುಕಾ ಹೇಳಿದರು.

ರಾಮನಗರ: ಉತ್ತಮ ಆರೋಗ್ಯಕ್ಕೆ ಆಯುರ್ವೇದವೂ ಅಗತ್ಯವಾಗಿದೆ. ಈ ಆಯುರ್ವೇದದ ಬಗ್ಗೆ ಅರಿವು ಪಡೆದುಕೊಳ್ಳುವುದು ಒಳ್ಳೆಯ ಕಾರ್ಯ ಎಂದು ಜಿಲ್ಲಾ ಸತ್ರ ನ್ಯಾಯಾಧೀಶರಾದ ರೇಣುಕಾ ಹೇಳಿದರು.

ನಗರದ ಜಿಲ್ಲಾ ವಕೀಲರ ಸಂಘದ ಆವರಣದಲ್ಲಿ ಜಿಲ್ಲಾ ಆಯುಷ್ ಇಲಾಖೆ ಹಾಗೂ ವಕೀಲರ ಸಂಘ ಆಯೋಜಿಸಿದ್ದ ವಕೀಲರಿಗೆ ಆಯೋಗ್ಯ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ಕಾಲಘಟ್ಟದಲ್ಲಿ ಆಯುರ್ವೇದ ಹೆಚ್ಚು ಬಳಕೆಗೆ ಬಂದಿತು. ಈ ಪದ್ಧತಿಯಲ್ಲಿ ಮನೆಯಲ್ಲಿ ಔಷಧಿ ತಯಾರಿಸಿಕೊಂಡು ಉಪಯೋಗಿಸಬಹುದಾಗಿದೆ ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಕೆ.ವಿ.ಆನಂದ್ ಮಾತನಾಡಿ, ಇಂದಿನ ಕಾಲದಲ್ಲಿ ಸಕ್ಕರೆ ಕಾಯಿಲೆ ಸಾಮಾನ್ಯವಾಗಿ ಬಿಟ್ಟಿದೆ. ಇದರ ಬಗ್ಗೆ ಎಲ್ಲರು ಗಮನ ಹರಿಸಬೇಕು. ನಿತ್ಯ ವ್ಯಾಯಾಮ ಮಾಡುವುದರ ಮೂಲಕ ಈ ಕಾಯಿಲೆಯನ್ನು ನಿಯಂತ್ರಿಸಬಹುದಾಗಿದೆ ಎಂದು ಹೇಳಿದರು.

ಜನಸಂಖ್ಯೆಯಲ್ಲಿ 100 ಮಂದಿಗೆ ಸಕ್ಕರೆ ಕಾಯಿಲೆ ಇದೆ ಎಂದಾದರೆ ಅವರಲ್ಲಿ ಕೇವಲ 40 ಮಂದಿ ಮಾತ್ರ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಡಯಾಬಿಟಿಸ್ ಕಾಯಿಲೆ ಚಿಕಿತ್ಸೆ ಪಡೆದ 10ರಿಂದ 15 ವರ್ಷದ ಅವಧಿಯಲ್ಲಿ ವ್ಯಕ್ತಿಯು ಮುಖ ಚಹರೆಯು ಬದಲಾಗುತ್ತದೆ. ನಡೆಯುವಾಗ ಕಾಲು ನೆಲದ ಮೇಲೆ ಇಟ್ಟ ಸ್ಪರ್ಶವೂ ಕಡಿಮೆಯಾಗುತ್ತದೆ. ಜೋಮು ಹಿಡಿಯುವುದು ಮುಂದುವರೆಯುತ್ತಿದೆ ಎಂದು ತಿಳಿಸಿದರು.

ವ್ಯಕ್ತಿಯ ಅಂಗಾಂಗಳ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ಕಣ್ಣು, ಕಿಡ್ನಿ, ಹೃದಯ ಹಾಗೂ ಯಕೃತ್ ಅಂಗದ ಮೇಲೆ ಸಾಕಷ್ಟು ಪರಿಣಾವನ್ನುಂಟು ಮಾಡುತ್ತಿದೆ. ಹಾಗಾಗಿ ನಿತ್ಯ ವ್ಯಾಯಮ ಮಾಡುವುದರಿಂದ ಈ ರೋಗವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂದು ಹೇಳಿದರು.

ಈ ವೇಳೆ ನ್ಯಾ.ಸವಿತಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀವತ್ಸ, ಪ್ರಧಾನ ಕಾರ್ಯದಶರ್ಿ ತಿಮ್ಮೇಗೌಡ, ಖಜಾಂಚಿ ಮಂಜೇಗೌಡ, ಆಯೂಷ್ ಇಲಾಖೆ ಅಧಿಕಾರಿಗಳಾದ ಡಾ.ಉಷಾ, ಡಾ.ಆಶಾ, ಡಾ.ರಜನಿ ರಮೇಶ್, ಡಾ.ಲೀನಾ, ಸಿಬ್ಬಂದಿಗಳಾದ ಫಡ್ನಾವಿಸ್, ಕೋಮಲ, ಸಫೀವುಲ್ಲಾ, ಶಬಾನ ತಾಜ್, ಆಯಿಷಾ ಉಪಸ್ಥಿತರಿದ್ದರು.

4ಕೆಆರ್ ಎಂಎನ್ 4.ಜೆಪಿಜಿ

ರಾಮನಗರದ ಜಿಲ್ಲಾ ವಕೀಲರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ಆಯೋಗ್ಯ ಶಿಬಿರವನ್ನು ನ್ಯಾಯಾಧೀಶರಾದ ರೇಣುಕಾ ಉದ್ಘಾಟಿಸಿದರು.