ಜ್ಞಾನ ವಿಜ್ಞಾನವಾಗಬೇಕು: ಶ್ರೀ ಗುಣನಾಥಸ್ವಾಮೀಜಿ

| Published : Dec 31 2024, 01:01 AM IST

ಸಾರಾಂಶ

ಶೃಂಗೇರಿ: ಮನುಷ್ಯನನ್ನು ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿಸುವುದು ಜ್ಞಾನ. ಜ್ಞಾನ ವಿಜ್ಞಾನವಾಗಬೇಕು ಎಂದು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮಿಜಿ ಹೇಳಿದರು.

ಶೃಂಗೇರಿ: ಮನುಷ್ಯನನ್ನು ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿಸುವುದು ಜ್ಞಾನ. ಜ್ಞಾನ ವಿಜ್ಞಾನವಾಗಬೇಕು ಎಂದು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮಿಜಿ ಹೇಳಿದರು.

ಪಟ್ಟಣದ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮಿ ವೇದಿಕೆಯಲ್ಲಿ ರಂಗಸಿಂಗಾರ ಆಯೋಜಿಸಿದ್ದ ಶಿವದೂತ ಗುಳಿಗ ನಾಟಕ ಪ್ರದರ್ಶನ ಉದ್ಘಾಟನೆಯಲ್ಲಿ ಆಶೀರ್ವಚನ ನೀಡಿದರು. ಶಿವದೂತ ಗುಳಿಗ ನಾಟಕ ಹೆಸರು ಕೇಳಿದಂತೆ ಪೌರಾಣಿಕವೆಂಬಂತೆ ಎನಿಸುತ್ತದೆ. ಇದು ವೈಜ್ಞಾನಿಕತೆ, ವೈಚಾರಿಕ ಕ್ರಾಂತಿ ಮೂಡಿಸುವ ನಾಟಕ. ರಾಷ್ಟ್ರಕವಿ ಕುವೆಂಪು ವೈಚಾರಿಕ ಕ್ರಾಂತಿ ಮೂಡಿಸಿದರು. ಇವರ ಜನ್ಮ ದಿನದ ಸಂದರ್ಭದಲ್ಲಿ ಇಂತಹ ನಾಟಕ ಪ್ರದರ್ಶನವಾಗುತ್ತಿರುವುದು ಒಳ್ಳೆಯ ಕೆಲಸ ಎಂದರು.

ಸಾಹಿತಿ ,ವಕೀಲ ಸುದೀರ್ ಕುಮಾರ್ ಮುರೋಳಿ ಮಾತನಾಡಿ ರಂಗಭೂಮಿ ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ನಾಟಕಗಳ ಪ್ರದರ್ಶನ ಹೆಚ್ಚು ಹೆಚ್ಚು ನಡೆಯಬೇಕಿದೆ. ನಮ್ಮ ಕಲೆ, ಸಾಂಹಿತ್ಯ, ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು. ಇದೇ ಸಂದರ್ಭದಲ್ಲಿ ನಾಟಕ ತಂಡದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ರವರನ್ನು ಸನ್ಮಾನಿಸಲಾಯಿತು. ಅನಿಲ್ ಹೊಸಕೊಪ್ಪ, ಕಲ್ಕುಳಿ ಚಂದ್ರಶೇಖರ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಕಾಶ್ ಸ್ವಾಗತಿಸಿ ವಂದಿಸಿದರು.

30 ಶ್ರೀ ಚಿತ್ರ3-

ಶೃಂಗೇರಿ ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮಿ ವೇದಿಕೆಯಲ್ಲಿ ನಡೆದ ಶಿವದೂತ ಗುಳಿಗ ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಗುಣನಾಥಸ್ವಾಮಿಜಿ ಆಶೀರ್ವಚನ ನೀಡಿದರು.