ಕೊಡಗಿನ ಸಾಂಪ್ರದಾಯಿಕ ಸುಗ್ಗಿ ಹಬ್ಬ ಹುತ್ತರಿ ಹಬ್ಬವನ್ನು ಮೈಸೂರು ಕೊಡಗು ಗೌಡ ಸಮಾಜದ ವತಿಯಿಂದ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕೊಡಗಿನ ಸಾಂಪ್ರದಾಯಿಕ ಸುಗ್ಗಿ ಹಬ್ಬ ಹುತ್ತರಿ ಹಬ್ಬವನ್ನು ಮೈಸೂರು ಕೊಡಗು ಗೌಡ ಸಮಾಜದ ವತಿಯಿಂದ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಸಮಾಜದ ಆವರಣದಲ್ಲಿ ನಿರ್ಮಿಸಿದ ಗದ್ದೆಯಿಂದ ಸಮಾಜದ ಅಧ್ಯಕ್ಷರಾದ ಕೋoಬಾರನ ಬಸಪ್ಪನವರ ನೇತೃತ್ವದಲ್ಲಿ ಕದಿರು ತೆಗೆದು ಸಮಾಜದಲ್ಲಿ ನೆರೆದಿದ್ದ ಸಮುದಾಯ ಬಾಂಧವರಿಗೆ ವಿತರಿಸಲಾಯಿತು.ಇದಕ್ಕೂ ಮೊದಲು ಹಬ್ಬದ ಪ್ರಯುಕ್ತ ವಿವಿಧ ಅರೆಭಾಷೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಹುತ್ತರಿ ಹಬ್ಬದ ವಿಶೇಷ ತಿನಿಸಾದ ತಂಬಿಟ್ಟು ಮತ್ತಿತರ ತಿಂಡಿ ತಿನಿಸುಗಳನ್ನು ಮಹಿಳೆಯರು ಆಗಮಿಸಿದ ಸಭಿಕರಿಗೆ ಹಂಚಿದರೆ, ಕೊಡಗು ಗೌಡ ಯುವ ವೇದಿಕೆ ಸದಸ್ಯರು ಪಟಾಕಿ ಹೊಡೆದು ಸಂಭ್ರಮಿಸಿದರು.ಕಾರ್ಯಕ್ರಮದಲ್ಲಿ ಮೈಸೂರು ಕೊಡಗು ಗೌಡ ಸಮಾಜದ ಪದಾಧಿಕಾರಿಗಳಾದ ನಡುವಟ್ಟಿರ ಲಕ್ಷ್ಮಣ್, ನಡುಮನೆ ಚಂಗಪ್ಪ, ನಿರ್ದೇಶಕರಾದ ಹೊಸೂರು ರಾಘವ, ಕುಂಟುಪುಣಿ ರಮೇಶ್, ಕೊಂಬಾರನ ಸುಬ್ಬಯ್ಯ, ತೋಟಂಬೈಲು ಇಂದಿರಾ, ಚಪ್ಪೆರ ಯಮುನಾ, ಕುಂಟುಪುಣಿ ಶೀಲ, ಮೈಸೂರಿನ ಕೊಡಗು ಮತ್ತು ದಕ್ಷಿಣ ಕನ್ನಡ ಮಹಿಳಾ ಸಮಾಜದ ಅಧ್ಯಕ್ಷರಾದ ನಡುವಟ್ಟಿರ ಗೀತಾ, ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಚಂಡೀರ ಬಸಪ್ಪ, ಹೂಟಗಳ್ಳಿ ಕ್ಷೇಮಾಭಿವ್ನದ್ಧಿ ಸಂಘದ ಅಧ್ಯಕ್ಷರಾದ ಪೊನ್ನಚ್ಚನ ಅಪ್ಪಯ್ಯ, ಯುವ ವೇದಿಕೆಯ ಅಧ್ಯಕ್ಷರಾದ ಮೊಟ್ಟನ ಕೌಶಿಕ್, ಪಾಣತ್ತಲೆ ನಾಗೇಶ್ ಹಾಗೂ ಸಮಾಜದ ಗಣ್ಯರೆಲ್ಲರೂ ಉಪಸ್ಥಿತರಿದ್ದರು.ಕಾರ್ಯದರ್ಶಿ ಪೊನ್ನೆಟಿ ನಂದ ಅವರು ಕಾರ್ಯಕ್ರಮದಲ್ಲಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.