ಕೈಲ್ ಮುಹೂರ್ತ ಜಂಬರ -2026ರ ಸಂಭ್ರಮಕ್ಕೆ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕ ಎ. ಎಸ್ ಪೊನ್ನಣ್ಣ ಅವರನ್ನು ಗುರುವಾರ ಕೊಡಗು ಗೌಡ ಸಮಾಜ, ಬೆಂಗಳೂರು ಆಡಳಿತ ಮಂಡಳಿ ಪದಾಧಿಕಾರಿಗಳು ಭೇಟಿ ಮಾಡಿ ಆಹ್ವಾನಿಸಿದರು.
ನಾಪೋಕ್ಲು: ಕೈಲ್ ಮುಹೂರ್ತ ಜಂಬರ -2026ರ ಸಂಭ್ರಮಕ್ಕೆ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕ ಎ. ಎಸ್ ಪೊನ್ನಣ್ಣ ಅವರನ್ನು ಗುರುವಾರ ಕೊಡಗು ಗೌಡ ಸಮಾಜ, ಬೆಂಗಳೂರು ಆಡಳಿತ ಮಂಡಳಿ ಪದಾಧಿಕಾರಿಗಳು ಭೇಟಿ ಮಾಡಿ ಆಹ್ವಾನಿಸಿದರು.ವಿಧಾನಸೌಧದಲ್ಲಿ ಶಾಸಕ ಪೊನ್ನಣ್ಣ ಅವರನ್ನು ಭೇಟಿ ಮಾಡಿ ಅ. 4ರಂದು ಕೊಡಗು ಗೌಡ ಸಮಾಜ ಸಭಾಂಗಣ, ಉಳ್ಳಾಲು, ಬೆಂಗಳೂರಿನಲ್ಲಿ ಏರ್ಪಡಿಸಿರುವ ಕೈಲ್ ಮುಹೂರ್ತ ಜಂಬರ -2026ರ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ಕೊಡಗು ಗೌಡ ಸಮಾಜ ಬೆಂಗಳೂರು ಅಧ್ಯಕ್ಷ ವಿಂಗ್ ಕಮಾಂಡರ್ ಅಯ್ಯಟೀರ ಮನೋಜ್ ಕುಮಾರ್, ಉಪಾಧ್ಯಕ್ಷರಾದ ಕುದುಪಜೆ ಮೋಹನ್, ಗೌರವ ಕಾರ್ಯದರ್ಶಿಗಳಾದ ಬೇಕಲ್ ಬಿಪಿನ್, ಜಂಟಿ ಕಾರ್ಯದರ್ಶಿಗಳಾದ ಗೋವಿಂದಮ್ಮನ ಪ್ರವೀಣ್ ಕುಮಾರ್, ಸದಸ್ಯರಾದ ಕೆ ಆರ್ ದಿನೇಶ್ ಹಾಗೂ ಕಾನೂನು ಸಲಹೆಗಾರರಾದ ನಿಡ್ಡೆಮಲೆ ಪ್ರಕಾಶ್ ಉಪಸ್ಥಿತರಿದ್ದರು.