ಕನ್ನಡ ನಾಡಿನ ಜೀವನದಿ, ದಕ್ಷಿಣದ ಕಾಶಿ, ಕಾವೇರಿಯ ಉಗಮ ಸ್ಥಾನ ತಲಕಾವೇರಿ ಕೊಡಗಿನ ಪವಿತ್ರ ಕ್ಷೇತ್ರ. ಇಲ್ಲಿರುವ ಪುಟ್ಟ ಕುಂಡಿಕೆಯಲ್ಲಿ ಕಾವೇರಿ ಜನಿಸುತ್ತಾಳೆ. ತಲಕಾವೇರಿ ಕ್ಷೇತ್ರಕ್ಕೆ ಶತಮಾನಗಳ ಹಿನ್ನೆಲೆಯಿದೆ. ಅಗಸ್ತ್ಯೇಶ್ವರ, ಗಣಪತಿ ಸೇರಿದಂತೆ ಹಲವು ದೇವತೆಗಳ ಗುಡಿಗಳನ್ನು ಇಲ್ಲಿ ಕಾಣಬಹುದು. ಅಕ್ಟೋಬರ್ ತಿಂಗಳಲ್ಲಿ ಜರುಗುವ ತುಲಾ ಸಂಕ್ರಮಣದಂದು ಕಾವೇರಿ ತಲಕಾವೇರಿ ಕುಂಡಿಕೆಯಲ್ಲಿ ಕಾವೇರಿ ಉದ್ಭವಾಗುವುದರ ಪ್ರತ್ಯಕ್ಷ ಅನುಭವಾಗುತ್ತದೆ. ಸಂಜೆ 6 ಗಂಟೆ ನಂತರ ಕ್ಷೇತ್ರಕ್ಕೆ ಪ್ರವೇಶವಿಲ್ಲ. ಪ್ರಸ್ತುತ ಕ್ಷೇತ್ರದಲ್ಲಿ ವಸ್ತ್ರ ಸಂಹಿತೆ ಜಾರಿಯಲ್ಲಿದೆ. ಇಲ್ಲಿ ಬ್ರಹ್ಮಗಿರಿ ಬೆಟ್ಟವು ಆಕರ್ಷಣೀಯವಾಗಿದೆ.

ಎಸ್.ಎ. ಮುರುಳೀಧರ್, ಸೋಮವಾರಪೇಟೆ ಕನ್ನಡ ನಾಡಿನ ಜೀವನದಿ, ದಕ್ಷಿಣದ ಕಾಶಿ, ಕಾವೇರಿಯ ಉಗಮ ಸ್ಥಾನ ತಲಕಾವೇರಿ ಕೊಡಗಿನ ಪವಿತ್ರ ಕ್ಷೇತ್ರ. ಇಲ್ಲಿರುವ ಪುಟ್ಟ ಕುಂಡಿಕೆಯಲ್ಲಿ ಕಾವೇರಿ ಜನಿಸುತ್ತಾಳೆ. ತಲಕಾವೇರಿ ಕ್ಷೇತ್ರಕ್ಕೆ ಶತಮಾನಗಳ ಹಿನ್ನೆಲೆಯಿದೆ. ಅಗಸ್ತ್ಯೇಶ್ವರ, ಗಣಪತಿ ಸೇರಿದಂತೆ ಹಲವು ದೇವತೆಗಳ ಗುಡಿಗಳನ್ನು ಇಲ್ಲಿ ಕಾಣಬಹುದು. ಅಕ್ಟೋಬರ್ ತಿಂಗಳಲ್ಲಿ ಜರುಗುವ ತುಲಾ ಸಂಕ್ರಮಣದಂದು ಕಾವೇರಿ ತಲಕಾವೇರಿ ಕುಂಡಿಕೆಯಲ್ಲಿ ಕಾವೇರಿ ಉದ್ಭವಾಗುವುದರ ಪ್ರತ್ಯಕ್ಷ ಅನುಭವಾಗುತ್ತದೆ. ಸಂಜೆ 6 ಗಂಟೆ ನಂತರ ಕ್ಷೇತ್ರಕ್ಕೆ ಪ್ರವೇಶವಿಲ್ಲ. ಪ್ರಸ್ತುತ ಕ್ಷೇತ್ರದಲ್ಲಿ ವಸ್ತ್ರ ಸಂಹಿತೆ ಜಾರಿಯಲ್ಲಿದೆ. ಇಲ್ಲಿ ಬ್ರಹ್ಮಗಿರಿ ಬೆಟ್ಟವು ಆಕರ್ಷಣೀಯವಾಗಿದೆ.

ಕೊಡಗಿನ ಪ್ರಸಿದ್ಧ ಪವಿತ್ರ ತೀರ್ಥಕ್ಷೇತ್ರ ಭಾಗಮಂಡಲ. ಇದು ಮಡಿಕೇರಿಯಿಂದ ದಕ್ಷಿಣಕ್ಕೆ ಸುಮಾರು 30 ಕಿ.ಮೀ. ದೂರದಲ್ಲಿದೆ. ಭಾಗಮಂಡಲದಲ್ಲಿ ಹಾದುಹೋಗುವ ಕಾವೇರಿ ಮಾತೆ ಕನ್ನಿಕಾ ಮತ್ತು ಸುಜ್ಯೋತಿ ನದಿಗಳೊಂದಿಗೆ ಸಂಗಮಗೊಳ್ಳುತ್ತಾಳೆ. ಇದಕ್ಕೆ ತ್ರಿವೇಣಿ ಸಂಗಮ ಎಂದು ಕರೆಯಲಾಗುತ್ತದೆ. ದಕ್ಷಿಣ ಭಾರತದ ಮೂಲೆಮೂಲೆಗಳಿಂದ ಜನರನ್ನು ತನ್ನತ್ತ ಸೆಳೆಯುವ ಭಾಗಮಂಡಲದಲ್ಲಿ ಭಗಂಡೇಶ್ವರ, ಸುಬ್ರಹ್ಮಣ್ಯ ಮತ್ತು ಗಣಪತಿ ದೇವಾಲಯಗಳಿವೆ.

ಕುಶಾಲನಗರ ತಾಲೂಕಿನ ಕಣಿವೆ ರಾಮಲಿಂಗೇಶ್ವರ ದೇಗುಲ ಸುಮಾರು 10ನೇ ಶತಮಾನದ ಪ್ರಾರಂಭದಲ್ಲಿ ಸ್ಥಾಪನೆಗೊಂಡಿರುವ ಇತಿಹಾಸ ಹೊಂದಿದೆ. ತ್ರೇತಾ ಯುಗದಲ್ಲಿ ಶ್ರೀರಾಮ ಇಲ್ಲಿ ನೆಲೆಸಿದ್ದು, ರಾಮ ಮರಳಲ್ಲಿ ಶಿವಲಿಂಗ ರಚನೆ ಮಾಡಿದ ಕಾರಣಕ್ಕೆ ರಾಮಲಿಂಗೇಶ್ವರ, ಲಕ್ಷ್ಮಣನು ಹನುಮಂತನನ್ನು ಕಾಶಿಗೆ ಕಳುಹಿಸಿ ಅಲ್ಲಿಂದ ತಂದ ಶಿವಲಿಂಗವನ್ನು ತಾನು ಸ್ಥಾಪಿಸಿದ ಕಾರಣಕ್ಕೆ ಲಕ್ಷ್ಮಣೇಶ್ವರ ಎಂದು ಕರೆಯುವ ದೇಗುಲಗಳಿವೆ.