ಸಾರಾಂಶ
ಜಿಲ್ಲೆಯ 20 ಸರ್ಕಾರಿ ಪ್ರೌಢಶಾಲೆಯಿಂದ ತಲಾ 2 ಎರಡು ಮಕ್ಕಳನ್ನು ಆಯ್ಕೆ ಮಾಡಿಕೊಂಡು ಸೋಮವಾರಪೇಟೆಯಲ್ಲಿ 40 ಮಕ್ಕಳಿಗೆ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಮಕ್ಕಳೊಂದಿಗೆ ಜಿಲ್ಲೆಯ ಶಾಸಕರು ಸಂವಾದ ನಡೆಸಬೇಕು ಎಂದು ನಾವು ಪ್ರತಿಷ್ಠಾನದ ಮುಖ್ಯಸ್ಥರಾದ ಗೌತಮ್ ಕಿರಗಂದೂರು ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಯುನಿಸೆಫ್, ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ವತಿಯಿಂದ ನವೆಂಬರ್‌ನಲ್ಲಿ ವಿಧಾನಸೌಧದಲ್ಲಿ ನಡೆಯುವ ಮಕ್ಕಳ ಹಕ್ಕುಗಳ ಸಂಸತ್‌ಗೆ ಕೊಡಗು ಜಿಲ್ಲೆಯ ಮಕ್ಕಳ ಪ್ರತಿನಿಧಿಗಳ ಆಯ್ಕೆ ಬಗ್ಗೆ ನಾವು ಪ್ರತಿಷ್ಠಾನ ಕೊಡಗು ಸಂಸ್ಥೆಯ ಪ್ರತಿನಿಧಿಗಳು ಶಾಸಕ ಡಾ.ಮಂತರ್‌ಗೌಡ ಅವರೊಂದಿಗೆ ಕಚೇರಿಯಲ್ಲಿ ಈಚೆಗೆ ಚರ್ಚೆ ನಡೆಸಿದರು.ಜಿಲ್ಲೆಯ 20 ಸರ್ಕಾರಿ ಪ್ರೌಢಶಾಲೆಯಿಂದ ತಲಾ 2 ಎರಡು ಮಕ್ಕಳನ್ನು ಆಯ್ಕೆ ಮಾಡಿಕೊಂಡು ಸೋಮವಾರಪೇಟೆಯಲ್ಲಿ 40 ಮಕ್ಕಳಿಗೆ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಮಕ್ಕಳೊಂದಿಗೆ ಜಿಲ್ಲೆಯ ಶಾಸಕರು ಸಂವಾದ ನಡೆಸಬೇಕು ಎಂದು ನಾವು ಪ್ರತಿಷ್ಠಾನದ ಮುಖ್ಯಸ್ಥರಾದ ಗೌತಮ್ ಕಿರಗಂದೂರು ಮನವಿ ಮಾಡಿದರು.ಕೊಡಗು ಜಿಲ್ಲೆಯಲ್ಲಿನ ಮಕ್ಕಳ ಸಮಸ್ಯೆಗಳು, ಅವರ ಬೇಡಿಕೆಗಳು, ಇನ್ನು ಅನೇಕ ವಿಷಯಗಳ ಬಗ್ಗೆ ಚರ್ಚಿಸಬೇಕಿದೆ. ಮಕ್ಕಳ ಹಕ್ಕುಗಳ ಸಂಸತ್‌ನಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಲಿದ್ದು, ಕೊಡಗು ಜಿಲ್ಲೆಯ ಮಕ್ಕಳಿಗೆ ಬೇಕಾದ ಸೌಲಭ್ಯಗಳ ಬಗ್ಗೆ ಮನವರಿಕೆ ಮಾಡಬೇಕು ಎಂದು ಶಾಸಕರನ್ನು ಮನವಿ ಮಾಡಿದರು. ಮನವಿ ಪತ್ರ ಸಲ್ಲಿಸುವ ಸಂದರ್ಭ ದಾನಿಗಳಾದ ಸಿ.ಇ ಚೇತನ್, ನಾವು ಪ್ರತಿಷ್ಠಾನದ ಪ್ರತಿನಿಧಿಗಳಾದ ಸವಿತಾ, ಸಂತೋಷ್, ಗಿರೀಶ್ ಹಾಗು ಜಯಪ್ರಕಾಶ್ ಇದ್ದರು.