ಕೊಡಗು ವಿಶ್ವವಿದ್ಯಾನಿಲಯ ಅಂತರ್‌ ಕಾಲೇಜು ಗುಡ್ಡಗಾಟು ಓಟ ಸ್ಪರ್ಧೆ

| Published : Nov 15 2024, 12:31 AM IST

ಸಾರಾಂಶ

ಕೊಡಗು ವಿಶ್ವವಿದ್ಯಾಲಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ದೈಹಿಕ ಶಿಕ್ಷಣ ವಿಭಾಗ ಮಡಿಕೇರಿ ವತಿಯಿಂದ ಕೊಡಗು ವಿಶ್ವವಿದ್ಯಾಲಯ ಅಂತರ್ ಕಾಲೇಜು ಗುಡ್ಡಗಾಡು ಓಟ ಸ್ಪರ್ಧೆ ಗುರುವಾರ ನಡೆಯಿತು. ಮುಂಜಾನೆ 10 ಕಿಲೋಮೀಟರ್ ಓಟ ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ವಿಶ್ವವಿದ್ಯಾಲಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ದೈಹಿಕ ಶಿಕ್ಷಣ ವಿಭಾಗ ಮಡಿಕೇರಿ ವತಿಯಿಂದ ಕೊಡಗು ವಿಶ್ವವಿದ್ಯಾಲಯ ಅಂತರ್ ಕಾಲೇಜು ಗುಡ್ಡಗಾಡು ಓಟ ಸ್ಪರ್ಧೆ ಗುರುವಾರ ನಡೆಯಿತು. ಮುಂಜಾನೆ 10 ಕಿಲೋಮೀಟರ್ ಓಟ ಏರ್ಪಡಿಸಲಾಗಿತ್ತು.

ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ 19 ಕರ್ನಲ್ ರೆಜಿತ್ ಮುಕುಂದನ್, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಶಾರೀರಿಕ ಮತ್ತು ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ದೈಹಿಕ ದೃಢತೆ ಹೆಚ್ಚಿಸಿಕೊಳ್ಳಬೇಕು ಗುಡ್ಡಗಾಡು ಓಟ ಬಹಳ ಕಷ್ಟಕರವಾದ ಕ್ರೀಡೆ ಎಂದರು.

ಸಮಾರೋಪ ಸಮಾರಂಭವಕ್ಕೆ ಆಗಮಿಸಿದ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಎವರೆಸ್ಟ್ ರೋಡ್ರಿಗಸ್ ಮಾತನಾಡಿ, ಸೋಲು-ಗೆಲವುಗಳನ್ನು ಸಮಾನವಾಗಿ ಸ್ವೀಕರಿಸಿ, ಕ್ರೀಡಾಸ್ಪೂರ್ತಿ ಮೆರೆಯುವುದು ದೊಡ್ಡ ಸಾಧನೆ ಎಂದರು.

ಬಹುಮಾನ ವಿಜೇತರು:

ಪ್ರಥಮ ಸ್ಥಾನ- ಜಿಎಫ್‌ಜಿಸಿ ಮಡಿಕೇರಿ, ದ್ವಿತೀಯ ಸ್ಥಾನ -ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು, ಮಡಿಕೇರಿ, ತೃತೀಯ ಸ್ಥಾನ-ಜಿಎಫ್‌ಜಿಸಿ ವಿರಾಜಪೇಟೆ ಪಡೆದುಕೊಂಡವು.

ವೈಯಕ್ತಿಕ ಬಹುಮಾನವನ್ನು ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನ ನಾಪೋಕ್ಲು ಜಿಎಫ್‌ಜಿಸಿಯ ಗೌತಮ್ ಎಸ್. (36.03.68), ದ್ವಿತೀಯ ಬಹುಮಾನ ಗೋಣಿಕೊಪ್ಪ ಕಾವೇರಿ ಕಾಲೇಜಿನ ಗೌತಮ್. ಪಿ.ಸಿ, (36.51.73), ತೃತೀಯ ಬಹುಮಾನ ಸೋಮವಾರಪೇಟೆಯ ಸೇಂಟ್ ಜೋಸೆಫ್ ಪದವಿ ಕಾಲೇಜುವಿನ ದೀಪಕ್ (38.25.32) ಪಡೆದುಕೊಂಡರು.

ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ರಕ್ಷಿತಾ (53.25). ದ್ವಿತೀಯ ಬಹುಮಾನ ಸೋಮವಾರಪೇಟೆಯ ಸೇಂಟ್ ಜೋಸೆಫ್ ಪದವಿ ಕಾಲೇಜಿನ ಐಶ್ವರ್ಯ (54.30). ತೃತೀಯ ಬಹುಮಾನವನ್ನು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ನಿಲಿಶಾ ಜೋಜೋ (55.40) ಪಡೆದುಕೊಂಡರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮಡಿಕೇರಿಯ ಪ್ರಾಂಶುಪಾಲ ಮೇಜರ್ ಪ್ರೋ.ರಾಘವ ಬಿ. ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ರಾಖಿ ಪೂವಣ್ಣ ದೈಹಿಕ ಶಿಕ್ಷಣ ನಿರ್ದೇಶಕರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮಡಿಕೇರಿ, ದೈಹಿಕ ಶಿಕ್ಷಣ ನಿರ್ದೇಶಕರು ಸಂತ ಜೋಸೆಫರ ಪದವಿ ಕಾಲೇಜು ಸೋಮವಾರಪೇಟೆ ಶಿವಕುಮಾರ್ ಆರ್., ಕ್ರೀಡಾ ಸಂಯೋಜಕರು ಕ್ರೀಡಾ ವಿಭಾಗ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮಡಿಕೇರಿ, ಸುಬೇದಾರ್ ಮೇಜರ್ ಸಿಜು ಪಿ. ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮಡಿಕೇರಿಯ ದೈಹಿಕ ಶಿಕ್ಷಕ ರಮೇಶ್ ಪಿ.ಸಿ. ಇದ್ದರು.