ಕೊಡವೂರು: ಧೀಂಕಿಟ ಯಕ್ಷಗಾನ ಹೆಜ್ಜೆ ತರಬೇತಿ

| Published : Aug 05 2025, 11:47 PM IST

ಸಾರಾಂಶ

ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಧೀಂಕಿಟ - ಯಕ್ಷಗಾನ ಹೆಜ್ಜೆ ತರಬೇತಿ ಶಿಬಿರದ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ನೆರವೇರಿಸಿದರು.

ಉಡುಪಿ: ಇಲ್ಲಿನ ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಕರ್ನಾಟಕ ಯಕ್ಷಗಾನ ನಾಟಕ ಅಕಾಡೆಮಿ, ಸುಮನಸಾ ಕೊಡವೂರು, ಕನ್ನಡ ಸಂಸ್ಕೃತಿ ಇಲಾಖೆಗಳ ಸಹಯೋಗದೊಂದಿಗೆ ಧೀಂಕಿಟ - ಯಕ್ಷಗಾನ ಹೆಜ್ಜೆ ತರಬೇತಿ ಶಿಬಿರದ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ನೆರವೇರಿಸಿದರು.

ನಂತರ ಮಾತನಾಡಿದ ಅವರು, ಯಕ್ಷಗಾನ ಕೇವಲ ಕಲೆಯಷ್ಟೇ ಅಲ್ಲಾ ಅದು ನಮ್ಮ ಸಂಸ್ಕ್ರತಿಯ ಪ್ರತೀಕ, ಈಗಿನ ಒತ್ತಡದ ಬದುಕಿನ ನಡುವೆ ಸಾಂಸ್ಕೃತಿಕವಾಗಿ ತಮ್ಮನ್ನು ತೊಡಗಿಸಿಕೊಂಡಲ್ಲಿ ಆರೋಗ್ಯಕ್ಕೂ ಉತ್ತಮ ಎಂದು ಹೇಳಿದರು.

ವೇದಿಕೆಯಲ್ಲಿ ಕಲ್ಮಾಡಿಯ ಬ್ರಹ್ಮಬೈದೇರುಗಳ ಗರಡಿ ಇದರ ಅಧ್ಯಕ್ಷ ಶಶಿಧರ್ ವಡಬಾಂಡೇಶ್ವರ, ಯಕ್ಷ ಸಂಜೀವ ಟ್ರಸ್ಟ್ ಇದರ ಪ್ರವರ್ತಕ ಗುರು ಬನ್ನಂಜೆ ಸಂಜೀವ ಸುವರ್ಣ, ಸುಮನಸಾ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು, ಸುಮನಸಾ ಸಂಸ್ಥೆಯ ಸಂಚಾಲ ಭಾಸ್ಕರ್ ಪಾಲನ್ ಬಾಚನಬೈಲು, ಶಂಕರನಾರಾಯಣ ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಾಜಾ ಸೇರಿಗಾರ್ ಇದ್ದರು.

ಈ ಸಂದರ್ಭ ಯಕ್ಷಗಾನ ಗುರು ಮನೋಜ್ ಅವರನ್ನು ಗೌರವಿಸಲಾಯಿತು. ವಿದ್ಯಾದಾಯಿನಿ ಪ್ರಾರ್ಥಿಸಿದರು. ಸಭೆಯಲ್ಲಿ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು, ಸ್ವಸ್ತಿ ಪ್ರಶಾಂತ್ ವಂದಿಸಿದರು. ಚಂದ್ರಕಾಂತ್ ಕಲ್ಮಾಡಿ ಕಾರ್ಯಕ್ರಮ ನಿರೂಪಿಸಿದರು.