ಕೊಡವೂರು ದೇವಸ್ಥಾನ: ಸೇನೆಯ ಕ್ಷೇಮಕ್ಕೆ ಸಾಮೂಹಿಕ ಪ್ರಾರ್ಥನೆ

| Published : May 11 2025, 11:51 PM IST

ಕೊಡವೂರು ದೇವಸ್ಥಾನ: ಸೇನೆಯ ಕ್ಷೇಮಕ್ಕೆ ಸಾಮೂಹಿಕ ಪ್ರಾರ್ಥನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನರಸಿಂಹ ದೇವರ ಸಾಮೂಹಿಕ ಮಂತ್ರ ಪಠಣ, ವಿಶೇಷ ಪೂಜೆಯೊಂದಿಗೆ ದೇಶ ರಕ್ಷಣೆಗಾಗಿ ಭಾರತೀಯ ಸೇನೆಗೆ ವಿಶೇಷ ಶಕ್ತಿ ದೊರಕಲಿ, ಶತ್ರುಗಳ ಕಾಟ, ಅಶಾಂತಿ ತೊಲಗಲಿ ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಪಾಕಿಸ್ತಾನದ ಮೇಲೆ ಭಾರತೀಯ ಸೈನ್ಯದ ಅಪರೇಷನ್ ಸಿಂದೂರದ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರದ ಸುತ್ತೋಲೆಯಂತೆ ಇಲ್ಲಿನ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನರಸಿಂಹ ದೇವರ ಸಾಮೂಹಿಕ ಮಂತ್ರ ಪಠಣ, ವಿಶೇಷ ಪೂಜೆಯೊಂದಿಗೆ ದೇಶ ರಕ್ಷಣೆಗಾಗಿ ಭಾರತೀಯ ಸೇನೆಗೆ ವಿಶೇಷ ಶಕ್ತಿ ದೊರಕಲಿ, ಶತ್ರುಗಳ ಕಾಟ, ಅಶಾಂತಿ ತೊಲಗಲಿ ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಸರ್ವ ಸದಸ್ಯರು ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಬೆಳ್ಕಳೆ ಮಾಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಭಕ್ತವೃಂದದ ಅಧ್ಯಕ್ಷ ದಿವಾಕರ್ ಶೆಟ್ಟಿ ತೋಟದ ಮನೆ, ಉದ್ಯಮಿ ಆನಂದ ಪಿ. ಸುವರ್ಣ, ರಾಮ ಶೇರಿಗಾರ ಚಂದ್ರಶೇಖರ್ ಕೊಡವೂರು ಉಪಸ್ಥಿತರಿದ್ದರು. ದೇವಳದ ತಂತ್ರಿ ವಾದಿರಾಜ ತಂತ್ರಿ ಮತ್ತು ದೇವಳದ ಅರ್ಚಕ ವೃಂದದವರು ವಿಶೇಷ ಪೂಜೆ, ಪ್ರಾರ್ಥನೆಯನ್ನು ನೆರವೇರಿಸಿದರು