ಸಾರಾಂಶ
ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಶೇ. 90 ಕ್ಕಿಂತ ಅಧಿಕ ಅಂಕಗಳನ್ನು ಪಡೆದ ಅರ್ಪಿತ್ ಜೆ ಆಚಾರ್ಯ, ಅಂಕಿತ್ ಜೆ ಆಚಾರ್ಯ, ಪ್ರತೀಕ್ಷಾ ಸಿ ಆಚಾರ್ಯ ಅವರನ್ನು ಗೌರವಿಸಲಾಯಿತು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 200 ಕ್ಕೂ ಅಧಿಕ ವಿಶ್ವಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ನಡೆಯಿತು.
ಕನ್ನಡಪ್ರಭವಾರ್ತೆ ಮೂಲ್ಕಿ
ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ಸಾಧಕರ ಗುರುತಿಸಿ ಗೌರವಿಸುವ ಸಂಸ್ಥೆಗಳಿಂದ ನಡೆಯಬೇಕು ಎಂದು ಕೊಲಕಾಡಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ ಸುಧಾಕರ ಆಚಾರ್ಯ ಹೇಳಿದರು.ಕೊಲಕಾಡಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಸಹ ಸಂಸ್ಥೆಯಾದ ವಿಶ್ವಬ್ರಾಹ್ಮಣ ಯುವಕ ವೃಂದದ ವತಿಯಿಂದ ಕೊಲಕಾಡಿ ಶ್ರೀ ಕಾಳಿಕಾಂಬಾ ಕ್ಷೇತ್ರದ ವೇದಿಕೆಯಲ್ಲಿ ನಡೆದ ಪುಸ್ತಕ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಶೇ. 90 ಕ್ಕಿಂತ ಅಧಿಕ ಅಂಕಗಳನ್ನು ಪಡೆದ ಅರ್ಪಿತ್ ಜೆ ಆಚಾರ್ಯ, ಅಂಕಿತ್ ಜೆ ಆಚಾರ್ಯ, ಪ್ರತೀಕ್ಷಾ ಸಿ ಆಚಾರ್ಯ ಅವರನ್ನು ಗೌರವಿಸಲಾಯಿತು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 200 ಕ್ಕೂ ಅಧಿಕ ವಿಶ್ವಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ನಡೆಯಿತು. ಉಪನ್ಯಾಸಕರಾದ ರೇಷ್ಮಾ ಸತೀಶ್ ಆಚಾರ್ಯ ಕಾರ್ನಾಡು, ಶೈಲಜಾ ಕಿನ್ನಿಗೋಳಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕೆ ಸುಬ್ರಾಯ ಆಚಾರ್ಯ, ಕೂಡುವಳಿಕೆ ಮೊಕ್ತೇಸರರಾದ ಸದಾಶಿವ ಆಚಾರ್ಯ, ಯುವಕ ವೃಂದದ ಅಧ್ಯಕ್ಷ ಶರತ್ ಆಚಾರ್ಯ, ಮಹಿಳಾ ವಿಭಾಗದ ಅಧ್ಯಕ್ಷೆ ಪ್ರೇಮಾ ಸುಧಾಕರ ಆಚಾರ್ಯ, ಜೈ ಜಗದಂಬಾ ಯಕ್ಷಗಾನ ಕಲಾ ಮಂಡಳಿ ಅಧ್ಯಕ್ಷ ಪ್ರಶಾಂತ್ ಆಚಾರ್ಯ, ಕಿಶೋರ್ ಆಚಾರ್ಯ, ಆಕಾಶ್ ಎಂ, ಶುಭ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.