ಕೋಲಾರ : ಉಪ ಅರಣ್ಯ ಸಂರಕ್ಷಣಾ ಇಲಾಖೆಯಿಂದ 10 ಸಾವಿರ ಎಕರೆ ಅರಣ್ಯ ಭೂಮಿ ಒತ್ತುವರಿ

| N/A | Published : Mar 28 2025, 12:34 AM IST / Updated: Mar 28 2025, 04:20 AM IST

ಕೋಲಾರ : ಉಪ ಅರಣ್ಯ ಸಂರಕ್ಷಣಾ ಇಲಾಖೆಯಿಂದ 10 ಸಾವಿರ ಎಕರೆ ಅರಣ್ಯ ಭೂಮಿ ಒತ್ತುವರಿ
Share this Article
  • FB
  • TW
  • Linkdin
  • Email

ಸಾರಾಂಶ

ಉಪ ಅರಣ್ಯ ಸಂರಕ್ಷಣಾ ಇಲಾಖೆಯಿಂದ ಜಿಲ್ಲೆಯಾದಾದ್ಯಂತ ಒತ್ತುವರಿ ತೆರವು ಕಾರ್ಯವನ್ನು ಮುಂದುವರೆಸಿದೆ, ಈಗಾಗಲೇ ಈ ಹಿಂದಿನ ಅಧಿಕಾರಿ ಏಡಕೊಂಡಲು ಒತ್ತುವರಿ ತೆರವು ಕಾರ್ಯ ಪ್ರಾರಂಭಿಸಿದ್ದರು.

 ಕೋಲಾರ  : ಉಪ ಅರಣ್ಯ ಸಂರಕ್ಷಣಾ ಇಲಾಖೆಯಿಂದ ಜಿಲ್ಲೆಯಾದಾದ್ಯಂತ ಒತ್ತುವರಿ ತೆರವು ಕಾರ್ಯವನ್ನು ಮುಂದುವರೆಸಿದೆ, ಈಗಾಗಲೇ ಈ ಹಿಂದಿನ ಅಧಿಕಾರಿ ಏಡಕೊಂಡಲು ಒತ್ತುವರಿ ತೆರವು ಕಾರ್ಯ ಪ್ರಾರಂಭಿಸಿದ್ದರು. ಅವರ ವರ್ಗಾವಣೆ ನಂತರ ಅವರ ಸ್ಥಾನಕ್ಕೆ ಬಂದ ಡಿಎಫ್‌ಓ ಸರೀನಾ ಸಿಕ್ಕಲಿಗಾರ್ ಕಾರ್ಯಾಚಾರಣೆ ಮುಂದುವರಿಸಿದ್ದಾರೆ. ನಗರದ ಹೊರವಲಯದ ಉಪರಣ್ಯ ಸಂರಕ್ಷಣಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಎಫ್‌ಒ, ಜಿಲ್ಲೆಯಲ್ಲಿ ಸುಮಾರು ಅರಣ್ಯ ಇಲಾಖೆಯ 10 ಸಾವಿರ ಎಕರೆ ಜಾಗ ಒತ್ತುವರಿಯಾಗಿದೆ. ಕೆಲವರು ನಕಲಿ ದಾಖಲೆ ಸೃಷ್ಠಿಸಿ ಒತ್ತುವರಿ ಮಾಡಿಕೊಂಡಿದ್ದಾರೆ ಅವುಗಳನ್ನು ತೆರವು ಕಾರ್ಯಾಚರಣೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹಂತ ಹಂತವಾಗಿ ಪ್ರಾರಂಭಿಸಲಾಗಿದೆ ಎಂದು ಹೇಳಿದರು.ರೈತ, ಬಡವ ಪ್ರಶ್ನೆಯೇ ಇಲ್ಲ

ಈಗಾಗಲೇ ಕಾಮಸಮುದ್ರದಲ್ಲಿ 70  ಎಕರೆ ಹಾಗೂ ಕೋಲಾರ ತಾಲ್ಲೂಕಿನ ಅಬ್ಬಣಿ ಅರಣ್ಯದ 616 ಎಕರೆ ಒತ್ತುವರಿಯಲ್ಲಿ ಈಗಾಗಲೇ 210 ಎಕರೆ ಒತ್ತುವರಿ ತೆರವು ಮಾಡಿದೆ, ಈ ಹಿಂದೆ ಏಡಕೊಂಡಲು 2800 ಎಕರೆ ಒತ್ತುವರಿ ತೆರವು ಮಾಡಿಸಿದ್ದರು. ಇಲ್ಲಿ ರೈತರು, ಬಡವರು ಎಂಬ ಪ್ರಶ್ನೆಯೇ ಬರುವುದಿಲ್ಲ, ಕಾನೂನಿಗೆ ಎಲ್ಲರೂ ಒಂದೇ ಎಂದರು.

ಶ್ರೀನಿವಾಸಪುರ ತಾಲ್ಲೂಕಿನ ಜಿನುಗುಲಕುಂಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒತ್ತುವರಿದಾರರಿಗೆ ೩ ಬಾರಿ ನೋಟಿಸ್‌ ಜಾರಿ ಮಾಡಲಾಗಿತ್ತು, ಈ ಸಂದರ್ಭದಲ್ಲಿ ಕೆಲವು ದಾಖಲೆಗಳನ್ನು ಮುಂದಿಟ್ಟುಕೊಂಡು ನ್ಯಾಯಾಲಯದ ಮೊರೆ ಹೋಗಿದ್ದಾರೆ, ನಾವು ಈಗಾಗಲೇ ಜಂಟಿ ಸರ್ವೇ ಸಹ ಮಾಡಲಾಗಿದೆ, ಸುಮಾರು 50 -  60 ಮಂದಿ 3-  4 ಎಕರೆ ತಂಡು ಭೂಮಿಯ ದಾಖಲೆಗಳನ್ನು ಮಾಡಿಸಿಕೊಂಡಿರುವ ಹಿಂದೆ ರಿಯಲ್ ಎಸ್ಟೇಟ್ ದಂಧೆ ನಡೆಸುವವರ ಕೈವಾಡ ಇರಬಹುದು ಎಂದು ಸ್ಪಷ್ಟಪಡಿಸಿದರು.

ಅಂಕಿ ಅಂಶ ತಾಳೆಯಾಗುತ್ತಿಲ್ಲ

ಜಿನಗುಲಕುಂಟೆ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಂಕಿ ಅಂಶಗಳು ತಾಳೆಯಾಗದಿರುವುದು ಅಲ್ಪ ಸ್ವಲ್ಪ ಲೋಪ ದೋಷಗಳಿರಬಹುದೇನೂ ಪರಿಶೀಲಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ನಾವು ಸಹ ೯ ಆಕ್ಷೇಪಣೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ, ಮೊದಲ ದಿನವೇ 116 ಎಕರೆ ಭೂಮಿ ಸೇರಿದಂತೆ ಸುಮಾರು 200 ಎಕರೆ ತೆರವು ಮಾಡಬೇಕಾಗಿದ್ದು ಅದರ ಮೌಲ್ಯ 100 ಕೋಟಿಗೂ ಹೆಚ್ಚು ಮೌಲ್ಯಯುತವಾದದ್ದು ಎಂದು ತಿಳಿಸಿದರು.

ಎಂ.ಎಲ್.ಸಿ. ಗೋವಿಂದರಾಜು ಪ್ರಕರಣದ ಬಗ್ಗೆ ಸಮರ್ಪಕವಾದ ಮಾಹಿತಿ ಇಲ್ಲ. ಅಲ್ಲದೆ ಅವರು ನ್ಯಾಯಾಲಯದ ಹಂತದಲ್ಲಿ ವಿಚಾರಣೆ ನಡೆಯುತ್ತಿದೆ. ಕೆಲವೊಂದು ಪಕ್ಷಿಗಳು ಆ ಪ್ರದೇಶದಲ್ಲಿರುವುದರಿಂದ ಮಾನವಿಯತೆ ಮೇಲೆ ಕಾಲಾವಕಾಶ ನೀಡಲಾಗಿದೆ ಹೊರತಾಗಿ ಬೇರೆ ರೀತಿಯಲ್ಲಿ ಅರ್ಥೈಸಬಾರದು. ಕೆಲವರು ಒತ್ತುವರಿ ಮಾಡಿಕೊಂಡಿರುವ ಜಾಗದ ಮೇಲೆ ನಕಲಿ ದಾಖಲೆಗಳನ್ನು ಸೃಷ್ಠಿಸಿಕೊಂಡು ಸಾಲ ಪಡೆದಿರುವುದಾಗಿ ಹೇಳುತ್ತಾರೆ ಆದರೆ ಅದನ್ನು ಬಿಡಲು ಸಾಧ್ಯವೇ ಇಲ್ಲ ಎಂದರು. 

ಪ್ರವಾಸಿ ತಾಣವಾಗಿ ಯರಗೋಳ್‌ನಗರ ಹೊರವಲಯದ ತೇರಹಳ್ಳಿ ಹಾಗೂ ಯರಗೋಳ್ ಪ್ರದೇಶವನ್ನು ಪ್ರವಾಸಿ ತಾಣವಾಗಿ ಅಭಿವೃದ್ದಿಪಡಿಸುವ ಯೋಜನೆಗೆ ಅನುದಾನಕ್ಕೆ ಮನವಿ ಮಾಡಿದೆ, ಅನುದಾನ ಮಂಜೂರಾದ ಮೇಲೆ ತೇರಹಳ್ಳಿಯ ಬೆಟ್ಟದಲ್ಲಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಜಾಗಗಳನ್ನು ಗುರುತಿಸಲಾಗುವುದು ಒತ್ತುವರಿಯಾಗಿದ್ದರೆ ತೆರವು ಮಾಡಿಸಲಾಗುವುದು ಇದಕ್ಕೆ ಸ್ವಲ್ಪ ಕಾಲವಕಾಶ ಬೇಕಾಗಲಿದೆ ಎಂದರು.ಅರಣ್ಯ ಪ್ರದೇಶಗಳಲ್ಲಿ ರಸ್ತೆಗಳನ್ನು ನಿರ್ಮಿಸಲು ಅನುಮತಿ ಪಡೆಯಬೇಕಾಗುತ್ತದೆ. ಸರ್ಕಾರಿ ಇಲಾಖೆಗಳು ಮಾಡುತ್ತಿದ್ದಾರೆ ಬೇರೆ ಕಡೆ ಅಷ್ಟು ಜಾಗವನ್ನು ನೀಡಬೇಕಾಗುತ್ತದೆ, ಈಗಾಗಲೇ ಕಾಡು ಪ್ರದೇಶಗಳಲ್ಲಿ ಸಿಮೆಂಟ್ ನೀರಿನ ತೊಟ್ಟಿಗಳನ್ನು ಮಾಡಿ ನೀರು ಪೂರೈಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.