ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ ಸರ್ಕಾರಿ ಆಸ್ತಿಗಳನ್ನು ವೈಜ್ಞಾನಿಕವಾಗಿ ಗುರುತಿಸಿ, ಇವು ಖಾಸಗಿಯವರ ಪಾಲಾಗದಂತೆ ರಕ್ಷಿಸಿ, ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಲ್ಯಾಂಡ್ ಬೀಟ್ ಆ್ಯಪ್ ಬಳಸಿಕೊಂಡು, ವಿವಿಧ ಜಮೀನುಗಳಲ್ಲಿರುವ ಸರಕಾರಿ ಭೂಮಿಯನ್ನು ಜಿಯೋ ಫೆನ್ಸಿಂಗ್ ಮಾಡಿ, ರಕ್ಷಣೆ ಮಾಡುವ ಕಾರ್ಯದಲ್ಲಿ ಕೋಲಾರ ಜಿಲ್ಲೆಯು ಇಡೀ ರಾಜ್ಯದಲ್ಲಿಯೇ ಮುಂಚೂಣಿ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಸರ್ಕಾರಿ ಆಸ್ತಿಗಳು ಇರುವ ಒಟ್ಟು ೩೪೩೭೫ ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಸ್ಥಳಗಳ ಪೈಕಿ ೨೭೪೫೧ ಸ್ಥಳಗಳಿಗೆ ಗ್ರಾಮ ಆಡಳಿತ ಅಧಿಕಾರಿಗಳು ಭೇಟಿ ನೀಡಿ ಈಗಾಗಲೇ ಪರಿಶೀಲನೆ ನಡೆಸಿದ್ದಾರೆ. ಈ ಆಸ್ತಿಗಳಿಗೆ ಜಿಯೋ ಫೆನ್ಸಿಂಗ್ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಇದು ರಾಜ್ಯದಲ್ಲಿಯೇ ಅತ್ಯಧಿಕ ಸಂಖ್ಯೆಯಾಗಿದೆ.
೨೭೪೫೧ ಆಸ್ತಿಗೆ ಫೆನ್ಸಿಂಗ್ಈ ಜಮೀನುಗಳಲ್ಲಿರುವ ಸರಕಾರಿ ಆಸ್ತಿಗಳ ಬಗ್ಗೆ ಸಂಬ೦ಧಪಟ್ಟ ಗ್ರಾಮ ಆಡಳಿತ ಅಧಿಕಾರಿಗಳು, ತಮ್ಮ ವ್ಯಾಪ್ತಿಯ ಕಂದಾಯ ನಿರೀಕ್ಷಕರಿಗೆ ಲ್ಯಾಂಡ್ ಬಿಟ್ ಆ್ಯಪ್ ಮೂಲಕ ವರದಿ ನೀಡಿದ್ದು, ಆ ವರದಿ ಸಂಬ೦ಧಪಟ್ಟ ತಾಲೂಕಿನ ತಹಶೀಲ್ದಾರ್‌ಗಳು ಅಂತಿಮಗೊಳಿಸುತ್ತಿದ್ದಾರೆ, ಜಿಲ್ಲೆಯಲ್ಲಿ ಇದುವರೆಗೆ ೨೭೪೫೧ ಸರಕಾರಿ ಆಸ್ತಿಗಳಿಗೆ ಸಂಪೂರ್ಣ ಜಿಯೋ ಫೆನ್ಸಿಂಗ್ ಮಾಡಲಾಗಿದ್ದು, ಈ ಮೂಲಕ ಜಿಲ್ಲೆಯ ಈ ಸರಕಾರಿ ಆಸ್ತಿಗಳ ಸಂಪೂರ್ಣ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿದೆ.ಜಿಲ್ಲೆಯಲ್ಲಿ ಇದುವರೆಗೆ ಕೋಲಾರ ತಾಲೂಕಿನಲ್ಲಿನ ೮೯೨೦ ಸರಕಾರಿ ಆಸ್ತಿಗಳಲ್ಲಿ , ೭೦೬೭ ಆಸ್ತಿಗಳಿಗೆ ಜಿಯೋ ಫೆನ್ಸಿಂಗ್ ಕಾರ್ಯ ಮಾಡಲು ಸ್ಥಳ ಭೇಟಿ ನಡೆಸಿ ವರದಿ ನೀಡಿದ್ದು, ಶೇ ೮೫.೭೨ ಆಸ್ತಿಗಳಿಗೆ ಈಗಾಗಲೇ ಸಂಪೂರ್ಣ ಜಿಯೋ ಫೆನ್ಸಿಂಗ್ ಮಾಡಲಾಗಿದೆ. ಬಂಗಾರಪೇಟೆ ತಾಲೂಕಿನ ೩೩೨೦ಸರಕಾರಿ ಆಸ್ತಿಗಳಲ್ಲಿ ೨೮೩೫ ಆಸ್ತಿಗಳಿಗೆ, ಕೆ ಜಿ ಎಫ್ ತಾಲೂಕಿನ ೨೮೯೫ ಆಸ್ತಿಗಳಲ್ಲಿ ೨೪೨೧ ಆಸ್ತಿಗಳಿಗೆ, ಮುಳಬಾಗಿಲು ತಾಲೂಕಿನ ೭೨೯೪ ಆಸ್ತಿಗಳಲ್ಲಿ ೫೮೮೩ ಆಸ್ತಿಗಳಿಗೆ, ಶ್ರೀನಿವಾಸಪುರ ತಾಲೂಕಿನ ೬೩೯೪ ಆಸ್ತಿಗಳಲ್ಲಿ ೫೩೯೪ ಆಸ್ತಿಗಳಿಗೆ ಹಾಗೂ ಮಾಲೂರು ತಾಲೂಕಿನ ೫೫೫೨ ಆಸ್ತಿಗಳಲ್ಲಿ ೪೬೦೨ ಆಸ್ತಿಗಳಿಗೆ, ಈಗಾಗಲೇ ಸಂಪೂರ್ಣ ಜಿಯೋ ಫೆನ್ಸಿಂಗ್ ಮಾಡಲಾಗಿದೆ.ಲ್ಯಾಂಡ್ ಬೀಟ್ ತಂತ್ರಾ೦ಶ
ಈ ಲ್ಯಾಂಡ್ ಬೀಟ್ ಆ್ಯಪ್‌ನಲ್ಲಿ, ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಜಮೀನುಗಳಾದ ಗೋಮಾಳ, ಹುಲ್ಲು ಬನ್ನಿ ಖರಾಬು, ಸರ್ಕಾರಿ ಫಡಾ, ಸರ್ಕಾರಿ ಖರಾಬು, ಸರ್ಕಾರಿ ಬೀಳು, ದನಗಳಿಗೆ ಮುಫತ್ತು, ಸರ್ಕಾರಿದಾರಿ, ಗುಂಡು ತೋಪು ಇತ್ಯಾದಿ ಹಾಗೂ ಸರ್ಕಾರಿ ಕೆರೆ ಮತ್ತು ಸರ್ಕಾರಿ ಸ್ಮಶಾನಗಳನ್ನು ಸಂಬ೦ಧಪಟ್ಟ ಗ್ರಾಮ ಆಡಳಿತ ಅಧಿಕಾರಿಗಳು ಲ್ಯಾಂಡ್ ಬೀಟ್ ತಂತ್ರಾ೦ಶದಲ್ಲಿ ಕಡ್ಡಾಯವಾಗಿ ಕ್ಷೇತ್ರ ಪರಿಶೀಲನೆ ಮಾಡಿದ್ದಾರೆ.ಸರ್ಕಾರಿ ಜಮೀನುಗಳ ಪೈಕಿ ಅರಣ್ಯ ಜಮೀನುಗಳು, ಇತರೆ ಯೋಜನೆಗಳಿಗೆ ಸ್ವಾಧೀನಪಡಿಸಿಕೊಂಡ ಜಮೀನುಗಳು (ಭೂಸ್ವಾಧೀನ), ಶಾಲೆಗಳು ಮತ್ತು ಆಸ್ಪತ್ರೆಗಳು ಇತ್ಯಾದಿಗಳಂತಹ ಇತರ ಇಲಾಖೆಗಳ ಜಮೀನುಗಳನ್ನು ಒಳಗೊಂಡಿದ್ದು, ಇಂತಹ ಜಮೀನುಗಳನ್ನು ಕ್ಷೇತ್ರ ಪರಿಶೀಲನೆಗಾಗಿ ಮುಂದಿನ ದಿನಗಳಲ್ಲಿ ಆಯಾ ಇಲಾಖೆಗಳಿಗೆ ಕಳುಹಿಸಲು ತಂತ್ರಾ೦ಶದಲ್ಲಿ ಅಗತ್ಯ ತಾಂತ್ರಿಕ ಬದಲಾವಣೆ ಮಾಡಲಾಗುತ್ತಿದೆ.ಫೆನ್ಸಿಂಗ್ ಮೂಲಕ ರಕ್ಷಣೆಸರಕಾರದ ಸೂಚನೆಯಂತೆ ಲ್ಯಾಂಡ್ ಬೀಟ್ ಆ್ಯಪ್ ಮೂಲಕ ಜಿಲ್ಲೆಯಲ್ಲಿನ ಸರಕಾರಿ ಭೂಮಿಗಳನ್ನು ಗುರುತಿಸಿ, ಜಿಯೋ ಫೆನ್ಸಿಂಗ್ ಮಾಡುವ ಮೂಲಕ ಅವುಗಳನ್ನು ಸಂರಕ್ಷಿಸುವ ಕಾರ್ಯವನ್ನು ಸಮರೋಪಾದಿಯಲಿ ಕೈಗೊಂಡಿದ್ದು, ಈ ಕಾರ್ಯ ಪೂರ್ಣಗೊಂಡ ನಂತರ ಜಿಲ್ಲೆಯಲ್ಲಿ ಲಭ್ಯವಿರುವ ಸರಕಾರಿ ಜಮೀನಿನ ನಿಖರ ಪ್ರಮಾಣದ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ. ಮುಂದಿನ ದಿನಗಳಲ್ಲಿ ಇವುಗಳ ಅತಿಕ್ರಮಣವಾಗದಂತೆ ತಡೆಯುವ ಮೂಲಕ ಸಾರ್ವಜನಿಕ ಉದ್ದೇಶಗಳಿಗೆ ಜಿಲ್ಲೆಯಲ್ಲಿ ಸರ್ಕಾರಿ ಭೂಮಿ ದೊರೆಯಲಿದೆ.