ಫೆಂಗಲ್ ಅಬ್ಬರಕ್ಕೆ ಕೋಲಾರ ಜಿಲ್ಲೆ ತತ್ತರ, ಬೆಳೆ ಹಾನಿ

| Published : Dec 03 2024, 12:31 AM IST

ಸಾರಾಂಶ

ಕೋಲಾರ ತಾಲೂಕಿನ ಬಸವನತ್ತದಲ್ಲಿ ನೂರಾರು ಎಕರೆಯಷ್ಟು ರಾಗಿ ಬೆಳೆ ನಾಶವಾಗಿದೆ. ಪ್ರತಿ ವರ್ಷ ಒಂದೂ ಲಕ್ಷ ಹೆಕ್ಟರ್ ಪ್ರದೇಶದಲ್ಲಿ ರಾಗಿ ಬೆಳೆಯುತ್ತಿದ್ದ ರೈತರು ಇನ್ನೇನು ಕಟ್ಟಾವಿಗೆ ಬಂದಿರುವ ರಾಗಿ ಬೆಳೆಯು ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಈ ಬಾರಿ ಕೇವಲ ೫೦ ಸಾವಿರ ಹೆಕ್ಟರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿತ್ತು. ಈಗಾಗಲೇ ರಾಗಿ ಖರೀದಿಗೆ ನೋಂದಣಿ ಆರಂಭವಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರಫೆಂಗಲ್ ಚಂಡಮಾರುತದಿಂದಾಗಿ ಕೋಲಾರ ಜಿಲ್ಲೆಯಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಗೆ ಜನತೆ ತತ್ತರಿಸಿಹೋಗಿದ್ದಾರೆ. ಬೆಳೆಗಳಿಗೂ ಹಾನಿಯಾಗಿದ್ದು ರೈತರಿಗೆ ದಿಕ್ಕುತೋಚದಂತಾಗಿದೆ.

ವಾಯುಭಾರ ಕುಸಿತದ ಕಾರಣ ಚಳಿ ಗಾಳಿ ಬೀಸುತ್ತಿತ್ತು. ಆದರೆ ಶನಿವಾರ ರಾತ್ರಿಯಿಂದ ಪ್ರಾರಂಭವಾದ ಮಳೆ ಅಬ್ಬರ ಸೋಮವಾರವೂ ಮುಂದುವರಿದಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಕೊರೆಯುವ ಚಳಿಯಿಂದಾಗಿ ಮಾರುಕಟ್ಟೆ ಪ್ರದೇಶಗಳು ಗ್ರಾಕರಿಲ್ಲದೆ ಬಣಗುಟ್ಟುತ್ತಿವೆ.

ನೆಗಡಿ, ಕೆಮ್ಮು, ಜ್ವರ ಪ್ರಕರಣ ಹೆಚ್ಚಳ

ವಾತಾವರಣದ ಏರುಪೇರಿನಿಂದಾಗಿ ವಯಸ್ಕರು ಹಾಗೂ ಮಕ್ಕಳು ಆನಾರೋಗ್ಯಕ್ಕೆ ಒಳಗಾಗುತ್ತಿದ್ದು, ಮಕ್ಕಳಲ್ಲಿ ನೆಗಡಿ, ಕೆಮ್ಮು, ಜ್ವರದ ಲಕ್ಷಣಗಳು ಕಂಡುಬಂದಿದ್ದು, ಜಿಲ್ಲಾಸ್ಪತ್ರೆ ಸೇರಿದಂತೆ ಆಸ್ಪತ್ರೆಗಳಿಗೆ ಬರುವ ರೋಗಿಗಳ ಸಂಖ್ಯೆ ಏರಿಕೆಯಾಗಿದೆ. ಜಿಲ್ಲಾಸ್ಪತ್ರೆಗೆ ಬರುತ್ತಿರುವಂತಹ ಮಕ್ಕಳ ಪೈಕಿ ಶೇ.೬೦ರಷ್ಟು ಮಕ್ಕಳಲ್ಲಿ ಜ್ವರ, ನೆಗಡಿ ಹಾಗೂ ಕೆಮ್ಮು ಲಕ್ಷಣಗಳಿರುವುದು ಕಂಡುಬರುತ್ತಿದೆ.

ಕೋಲಾರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಯಲ್ಲಿ ತಾಯಿ ಹಾಗೂ ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ ಕಾಯ್ದಿರಿಸಿರುವ ಬೆಡ್‌ಗಳು ಭರ್ತಿಯಾಗಿದ್ದು, ಒಂದು ಬೆಡ್‌ನಲ್ಲಿ ಇಬ್ಬರು ಮಕ್ಕಳನ್ನು ದಾಖಲಿಸುವಂತಹ ಪರಿಸ್ಥಿತಿಯಿದೆ. ದೂರದ ಊರುಗಳಿಂದ ಬರುವ ಪೋಷಕರಿಗೆ ಬೆಡ್ ಸಿಗದ ಹಿನ್ನೆಲೆಯಲ್ಲಿ ತೊಂದರೆ ಎದುರಿಸುವಂತಾಗಿದೆ.ಫೆಂಗಲ್ ಎಫೆಕ್ಟ್‌ಗೆ ರಾಗಿ ಬೆಳೆನಷ್ಟ

ಕೋಲಾರ ತಾಲೂಕಿನ ಬಸವನತ್ತದಲ್ಲಿ ಭಾರಿ ನಷ್ಟವಾಗಿದೆ, ನೂರಾರು ಎಕರೆಯಷ್ಟು ರಾಗಿ ಬೆಳೆ ನಾಶವಾಗಿದೆ. ಪ್ರತಿ ವರ್ಷ ಒಂದೂ ಲಕ್ಷ ಹೆಕ್ಟರ್ ಪ್ರದೇಶದಲ್ಲಿ ರಾಗಿ ಬೆಳೆಯುತ್ತಿದ್ದ ರೈತರು ಇನ್ನೇನು ಕಟ್ಟಾವಿಗೆ ಬಂದಿರುವ ರಾಗಿ ಬೆಳೆಯು ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಈ ಬಾರಿ ಕೇವಲ ೫೦ ಸಾವಿರ ಹೆಕ್ಟರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿತ್ತು. ಈಗಾಗಲೇ ರಾಗಿ ಖರೀದಿ ಕೇಂದ್ರದಲ್ಲೂ ನೋಂದಣಿ ಕಾರ್ಯ ಶುರುವಾಗಿದೆ. ಆದರೆ ಈಗ ಮಳೆಗೆ ರಾಗಿ ಬೆಳೆ ನೆಲಕಚ್ಚಿದೆ.

ಕೋಟ್.....................ಚಂಡಮಾರುತದ ಪ್ರಭಾವದಿಂದಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಉಂಟಾಗಲಿದೆ. ಇದರಿಂದ ಜನರು ಆತಂಕಗೊಳ್ಳದೆ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಿರು. ಮಕ್ಕಳು, ವಯೋವೃದ್ಧರು, ಅನಾರೋಗ್ಯಸಮಸ್ಯೆಗಳಿಂದ ನರಳುತ್ತಿರುವವರು ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು.- ಡಾ.ಎ.ವಿ.ನಾರಾಯಣಸ್ವಾಮಿ, ಟಿಎಚ್‌ಒ.

ಕೋಟ್...................ಕಳೆದ ಎರಡು ವಾರಗಳಿಂದ ಮಕ್ಕಳು ಹೆಚ್ಚು ಅನಾರೋಗ್ಯಕ್ಕೆ ಒಳಗಾಗುತ್ತಿರುವುದು ಕಂಡುಬಂದಿದೆ. ಮಕ್ಕಳಲ್ಲಿ ವೈರಾಣು ಜ್ವರ, ನೆಗಡಿ, ಕೆಮ್ಮು ಲಕ್ಷಣಗಳು ಸಾಮಾಣ್ಯವಾಗಿವೆ. ಕೆಲವರಲ್ಲಿ ಡೆಂಘೀ ಕಾಣಿಸಿಕೊಂಡಿದೆ. ಸತತ ಎರಡು ದಿನಗಳಿಗೂ ಹೆಚ್ಚು ಜ್ವರ, ನೆಗಡಿ, ಕೆಮ್ಮಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.-ಡಾ.ಅರವಿಂದ್, ಮಕ್ಕಳ ತಜ್ಞರು.