ಸಾವಿರಾರು ಭಕ್ತರ ಸಮ್ಮುಖದಲ್ಲಿ ಕೋಲಾರಮ್ಮ ಬ್ರಹ್ಮರಥೋತ್ಸವ

| Published : Apr 04 2024, 01:07 AM IST

ಸಾರಾಂಶ

ಪ್ರತಿ ವರ್ಷದಂತೆ ಈ ವರ್ಷವೂ ಬಜರಂಗದಳ ಮುಖಂಡರು ರಥೋತ್ಸವದ ಅಂಗವಾಗಿ ನಗರದ ಎರಡು ಕಡೆಗಳಲ್ಲಿ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಿದರು. ಕಾರ್ಯಕರ್ತರು ಕೋಲಾರಮ್ಮನಿಗೆ ಬಾಗಿನ ಅರ್ಪಿಸಿ ರಥ ಎಳೆಯುವ ಮೂಲಕ ತಾಯಿಗೆ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರ

ನಗರ ದೇವತೆ ಶ್ರೀ ಕೋಲಾರಮ್ಮ ದೇವಿ ಬ್ರಹ್ಮರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.

ಬ್ರಹ್ಮರಥೋತ್ಸವದ ಅಂಗವಾಗಿ ದೇವರಿಗೆ ಅಭಿಷೇಕ, ರಥ ಶಾಂತಿ, ರಥ ಬಲಿ, ಆಚಾರ್ಯ ಪೂಜೆ, ಪ್ರಸಾದ ಸೇವೆ ನಡೆಯಿತಲ್ಲದೆ, ನಗರದ ಪ್ರಮುಖ ರಸ್ತೆಗಳಲ್ಲಿ ಬ್ರಹ್ಮರಥೋತ್ಸವ ಸಂಚರಿಸಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.

ನೂರಾರು ಜನರು ಕೋಲಾರಮ್ಮನಿಗೆ ಜೈ ಎಂಬ ಜಯ ಘೋಷಣೆಯೊಂದಿಗೆ ಭಕ್ತಿ ಪರವಶವಾಗಿ ರಥವನ್ನು ಎಳೆದರಲ್ಲದೆ, ದಾರಿಯುದ್ದಕ್ಕೂ ಭಕ್ತರು ದವನ, ಬಾಳೆ ಹಣ್ಣುಗಳನ್ನು ರಥದ ಮೇಲೆ ಎಸೆಯುವ ಮೂಲಕ ಹರಕೆ ತೀರಿಸಿದರು. ರಾತ್ರಿ ಧೂಳೋತ್ಸವ ನಡೆಯಿತು.

ದೇಗುಲದಲ್ಲಿ ನಡೆದ ಎಲ್ಲಾ ಪೂಜಾ ಕಾರ್ಯಗಳನ್ನು ಪ್ರಧಾನ ಅರ್ಚಕರಾದ ಸಿ. ಸೋಮಶೇಖರ್ ದೀಕ್ಷಿತ್ ರವರ ಉಪಸ್ಥಿತಿಯಲ್ಲಿ, ಕಾರ್ತಿಕ್ ದೀಕ್ಷಿತ್, ವಿನಯ್ ದೀಕ್ಷಿತ್ ನೆರವೇರಿಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ಬಜರಂಗದಳ ಮುಖಂಡರು ರಥೋತ್ಸವದ ಅಂಗವಾಗಿ ನಗರದ ಎರಡು ಕಡೆಗಳಲ್ಲಿ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಿದರು. ಕಾರ್ಯಕರ್ತರು ಕೋಲಾರಮ್ಮನಿಗೆ ಬಾಗಿನ ಅರ್ಪಿಸಿ ರಥ ಎಳೆಯುವ ಮೂಲಕ ತಾಯಿಗೆ ಪೂಜೆ ಸಲ್ಲಿಸಿದರು.

ಬಜರಂಗದಳ ಮುಖಂಡರಾದ ಆನಂದ್ ಅಪ್ಪಿ, ಕೋಲಾರ ಜಿಲ್ಲೆ ಕ್ಯಾ. ಮಂಜುನಾಥ್ ಸೋಮಶೇಖರ್, ಈಶ್ವರಪ್ಪ, ಎಸ್‌ಐ ನಿವೃತ್ತ ಅರ್ಜುನ್, ಪ್ರಸನ್ನ ಕುಮಾರ್, ರಾಮಕೃಷ್ಣಪ್ಪ, ಸುನಿಲ್, ವಿಶ್ವನಾಥ್, ಮೋಟಿ, ಬಜರಂಗದಳ ನಗರ ಸಂಚಾಲಕರು ಸತೀಶ್, ಕಿರಣ್, ಸುಧಾಕರ್, ಆನಂದ್, ಕುಮಾರ್ ಇದ್ದರು.