ದಸರಾ ಮಕ್ಕಳ ದಸರಾದಲ್ಲಿ ಚಿಕ್ಕವಡ್ಡರಗುಡಿ ಸರ್ಕಾರಿ ಪ್ರೌಡಶಾಲೆ ವಿದ್ಯಾರ್ಥಿಗಳಿಂದ ಕೋಲಾಟ

| Published : Oct 08 2024, 01:24 AM IST / Updated: Oct 08 2024, 11:00 AM IST

ದಸರಾ ಮಕ್ಕಳ ದಸರಾದಲ್ಲಿ ಚಿಕ್ಕವಡ್ಡರಗುಡಿ ಸರ್ಕಾರಿ ಪ್ರೌಡಶಾಲೆ ವಿದ್ಯಾರ್ಥಿಗಳಿಂದ ಕೋಲಾಟ
Share this Article
  • FB
  • TW
  • Linkdin
  • Email

ಸಾರಾಂಶ

ಮಳಿಗೆಯಲ್ಲಿ ಸಿರಿಧಾನ್ಯದಿಂದ ತಯಾರಿಸಿದ ನವಣೆ ಪಾಯಸ ಮತ್ತು ಬಿಸಿಬೇಳೆಬಾತ್ ತಯಾರಿಸಿ ಸಾವಿರ ಮಂದಿಗೆ ವಿತರಿಸಿ ಸಿರಿಧಾನ್ಯದ ಮಹತ್ವದ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಡಲಾಯಿತು.

  ಕೆ.ಆರ್. ನಗರ : ತಾಲೂಕಿನ ಚಿಕ್ಕವಡ್ಡರಗುಡಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮೈಸೂರಿನ ಕಲಾ ಮಂದಿರದಲ್ಲಿ ನಡೆದ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೋಲಾಟ ಪ್ರದರ್ಶನ ನೀಡಿದರು.

ಬಿಆರ್‌ಸಿ ವೆಂಕಟೇಶ್ ಮತ್ತು ಶಾಲೆಯ ಮುಖ್ಯ ಶಿಕ್ಷಕಿ ಸಿ.ಇ.ತ್ರಿವೇಣಿ ಅವರ ನೇತೃತ್ವದಲ್ಲಿ ತೆರಳಿದ ಮಕ್ಕಳು ಉತ್ತಮ ಪ್ರದರ್ಶನ ನೀಡಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾದರು.

ಇದರ ಜತೆಗೆ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ತಾಲೂಕು ಬಿಇಒ ಮತ್ತು ಬಿಆರ್‌ಸಿ ಕೇಂದ್ರದ ವತಿಯಿಂದ ಸಿರಿಧಾನ್ಯ ಮಳಿಗೆ ತೆರೆದಿದ್ದು ಇಲ್ಲಿ ಸಿರಿಧಾನ್ಯದಿಂದ ಮಹಾಗಣಪತಿ ವಿಗ್ರಹ ರೂಪಿಸಿದ್ದು ಎಲ್ಲರ ಗಮನ ಸೆಳೆಯಿತು. ಮಳಿಗೆಯಲ್ಲಿ ಸಿರಿಧಾನ್ಯದಿಂದ ತಯಾರಿಸಿದ ನವಣೆ ಪಾಯಸ ಮತ್ತು ಬಿಸಿಬೇಳೆಬಾತ್ ತಯಾರಿಸಿ ಸಾವಿರ ಮಂದಿಗೆ ವಿತರಿಸಿ ಸಿರಿಧಾನ್ಯದ ಮಹತ್ವದ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಡಲಾಯಿತು. ಕೆ.ಆರ್. ನಗರ ತಾಲೂಕಿನ ಚಿಕ್ಕವಡ್ಡರಗುಡಿ ಶಾಲೆಯ ಮಕ್ಕಳ ಕೋಲಾಟದ ಪ್ರದರ್ಶನ ಮತ್ತು ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕಿನ ಶಿಕ್ಷಕರ ಸಹಕಾರದೊಂದಿಗೆ ಬಿಇಒ ಮತ್ತು ಬಿಆರ್‌ಸಿ ಕೇಂದ್ರದವರು ಸಿರಿಧಾನ್ಯ ಮಳಿಗೆ ತೆರೆದು ತಮ್ಮ ಪ್ರತಿಭೆ ಪ್ರದರ್ಶನ ಮಾಡಿದ್ದಕ್ಕೆ ಡಿಡಿಪಿಐ ಎಸ್.ಟಿ.ಜವರೇಗೌಡ ಬಿಇಒ ಆರ್.ಕೃಷ್ಣಪ್ಪ ಅಭಿನಂದನೆ ಸಲ್ಲಿಸಿದ್ದಾರೆ.