ಕೊಳತೂರು ಡೇರಿಗೆಸ್ವೀಡನ್ ತಂಡ ಭೇಟಿ

| Published : Jul 05 2024, 12:49 AM IST

ಸಾರಾಂಶ

ಹೊಸಕೋಟೆ: ತಾಲೂಕಿನ ಕಸಬಾ ಹೋಬಳಿಯ ಕೊಳತೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸ್ವೀಡನ್ ದೇಶದ ಹಾಲು ಉತ್ಪಾದಕ ಮಂಡಳಿಯ ಟೆಟ್ರಾ ಪ್ಯಾಕ್ ಕಂಪನಿ ಅಧಿಕಾರಿಗಳ ತಂಡ ಭೇಟಿ ನೀಡಿತ್ತು.

ಹೊಸಕೋಟೆ: ತಾಲೂಕಿನ ಕಸಬಾ ಹೋಬಳಿಯ ಕೊಳತೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸ್ವೀಡನ್ ದೇಶದ ಹಾಲು ಉತ್ಪಾದಕ ಮಂಡಳಿಯ ಟೆಟ್ರಾ ಪ್ಯಾಕ್ ಕಂಪನಿ ಅಧಿಕಾರಿಗಳ ತಂಡ ಭೇಟಿ ನೀಡಿತ್ತು.

ಬೆಂಗಳೂರು ಹಾಲು ಒಕ್ಕೂಟದ ಸಂಘಗಳು ಹಾಲು ಸಂಗ್ರಹಣೆ ರೀತಿ, ಹಾಲು ಉತ್ಪಾದಕರಿಗೆ ಹಣ ಪಾವತಿ ರೀತಿ, ಹಾಲು ಉತ್ಪಾದಕರು ದನದ ಕೊಟ್ಟಿಗೆಗಳ ನಿರ್ವಹಣೆ ರೀತಿ ಸೇರಿದಂತೆ ದಾಸ್ತಾನು ಕೊಠಡಿಗಳ ಪರಿಶೀಲನೆ ನಡೆಸಿದರು.

ಹೊಸಕೋಟೆ ಶಿಬಿರದ ಉಪ ವ್ಯವಸ್ಥಾಪಕ ಶಿವಾಜಿ ನಾಯಕ್ ಮಾತನಾಡಿ, ತಾಲೂಕಿನ ವಿವಿಧ ಅಭಿವೃದ್ಧಿಯತ್ತ ಮುಂಚೂಣಿಯಲ್ಲಿರುವ ಡೇರಿಗಳಲ್ಲಿ ಕೊಳತೂರು ಡೇರಿ ಒಂದಾಗಿದ್ದು ಇದರ ವ್ಯಾಪ್ತಿಯಲ್ಲಿ ೨೫೦ಕ್ಕೂ ಹೆಚ್ಚಿನ ಹಾಲು ಕರೆಯುವ ಹಸುಗಳಿದ್ದು ೩೦ ಜನ ಹಾಲು ಉತ್ಪಾದಕರು ಹಾಲು ಕರೆಯುವ ಹಾಗೂ ಮೇವು ಕತ್ತರಿಸುವ ಯಂತ್ರಗಳನ್ನು ಬಳಕೆ ಮಾಡುತ್ತಿದ್ದಾರೆ. ಸ್ವಚ್ಛತೆ ಹಾಗೂ ಗುಣಮಟ್ಟದ ಹಾಲು ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದೆ. ಪ್ರಮುಖವಾಗಿ ಸದಾಕಾಲ ೪.೨೦ ಹಾಗೂ ೮೫೬ ಗುಣಮಟ್ಟದ ಹಾಲನ್ನು ಸರಬರಾಜು ಮಾಡಲಾಗುತ್ತಿದೆ. ಇದರಿಂದಲೆ ವರ್ಲ್ಡ್ ಗ್ಲೋಬಲ್ ಹೆಡ್‌ನ ಟೆಟ್ರಾ ಪ್ಯಾಕ್ ಕಂಪನಿ ಅಧಿಕಾರಿಗಳು ಹಾಗೂ ೧೭೦ ದೇಶಗಳ ಸೌತ್ ಏಷ್ಯಾ ಮಾರ್ಕೆಟಿಂಗ್ ವ್ಯವಸ್ಥಾಪಕ ನಿರ್ದೇಶಕಿ ಕ್ಯಾಸಿಯೋ ಸಿಮೋಸ್, ಉಪಾಧ್ಯಕ್ಷೆ ಜೂಲಿಯಾ ಲುಸ್ಚರ್, ಉಪಾಧ್ಯಕ್ಷ ಟಾಟ್ಯಾನಾ ಲಿಸೆಟಿ, ಗ್ರಾಹಕ ಸೇವಾ ಅಧಿಕಾರಿ ಕ್ಲಾಡಿಯೋ ನಸ್ಕಿಮೆಂಟೋ ಭೇಟಿ ನೀಡಿದ್ದಾರೆ ಎಂದರು.

ಕೊಳತೂರು ಗ್ರಾಮದ ಡೇರಿ ವ್ಯಾಪ್ತಿಯ ಹಾಲು ಉತ್ಪಾದಕರ ಮನೆಗೆ ತೆರಳಿ ಅಲ್ಲಿನ ಕೊಟ್ಟಿಗೆಗಳು, ಹಾಲು ಕರೆಯುವ ವಿಧಾನ ಸೇರಿದಂತೆ ಡೈರಿಯಲ್ಲಿ ಹಾಲು ಸಂಗ್ರಹಣೆಯ ವಿಧಾನ ಪರಿಶೀಲಿಸಿದರು.

ಕರ್ನಾಟಕ ರಾಜ್ಯದ ಟೆಟ್ರಾ ಪ್ಯಾಕ್ ಮುಖ್ಯಸ್ಥ ರಾಜೇಶ್, ಹೊಸಕೋಟೆ ಶಿಬಿರದ ಸಹಾಯಕ ವ್ಯವಸ್ಥಾಪಕ ಶ್ರೀರಾಮ್, ಡೈರಿ ಅಧ್ಯಕ್ಷ ಸುರೇಶ್ ಕೆಎಂ, ಕಾರ್ಯದರ್ಶಿ ಮುನಿರಾಜು, ಉಪಾಧ್ಯಕ್ಷ ವೆಂಕಟರಾಜು, ಡೈರಿ ನಿರ್ದೇಶಕರಾದ ರಾಮಚಂದ್ರ, ಸೋಮಶೇಖರ್, ರಾಮಾಂಜಿನಪ್ಪ, ಅಂಜಿನಪ್ಪ ಕೆಎನ್, ಆನಂದ್, ಸುಬ್ರಮಣಿ, ಲಕ್ಷ್ಮಣ ಮೂರ್ತಿ, ಪದ್ಮ, ಅನಿತಾ, ಅಶೋಕ್ ಸೇರಿದಂತೆ ಎಲ್ಲಾ ವಿಸ್ತರಣಾಧಿಕಾರಿಗಳು ಹಾಜರಿದ್ದರು.ಫೋಟೋ : 4 ಹೆಚ್ ಎಸ್ ಕೆ 1, 2 ಮತ್ತು 3

1: ಹೊಸಕೋಟೆ ತಾಲೂಕಿನ ಕಸಬಾ ಹೋಬಳಿಯ ಕೊಳತೂರು ಡೇರಿಗೆ ವರ್ಲ್ಡ್ ಗ್ಲೋಬಲ್ ಹೆಡ್‌ನ ಟೆಟ್ರಾ ಪ್ಯಾಕ್ ಕಂಪನಿ ಅಧಿಕಾರಿಗಳು ಹಾಗೂ ೧೭೦ ದೇಶಗಳ ಸೌತ್ ಏಷ್ಯಾ ಮಾರ್ಕೆಟಿಂಗ್ ವ್ಯವಸ್ಥಾಪಕ ನಿರ್ದೇಶಕಿ ಕ್ಯಾಸಿಯೋ ಸಿಮೋಸ್, ಉಪಾಧ್ಯಕ್ಷೆ ಜೂಲಿಯಾ ಲುಸ್ಚರ್, ಉಪಾಧ್ಯಕ್ಷ ಟಾಟ್ಯಾನಾ ಲಿಸೆಟಿ, ಗ್ರಾಹಕ ಸೇವಾಧಿಕಾರಿ ಕ್ಲಾಡಿಯೋ ನಸ್ಕಿಮೆಂಟೋ ಭೇಟಿ ನೀಡಿದ್ದರು.