ಸಾರಾಂಶ
ಸ್ಥಳೀಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ಜರುಗಿದ ತಾಲೂಕು ಕೃಷಿಕ ಸಮಾಜದ ಪದಾಧಿಕಾರಿಗಳ ಚುನಾವಣೆಯಲ್ಲಿ ಕೃಷಿಕ ಸಮಾಜದ ಅಧ್ಯಕ್ಷರಾಗಿ ಕೋಮಲ ಜಿನಗೊಂಡ, ಉಪಾಧ್ಯಕ್ಷರಾಗಿ ರಮೇಶ ಪಾಟೀಲ, ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ ಹೊಸೂರ, ಖಜಾಂಚಿಯಾಗಿ ಈರಣ್ಣ ಹಟ್ಟಿಹೊಳಿ, ಜಿಲ್ಲಾ ಪ್ರತಿನಿಧಿಯಾಗಿ ಕೃಷ್ಣಾಜಿ ಪಾಟೀಲ ಅವಿರೋಧವಾಗಿ ಆಯ್ಕೆಯಾದರು.
ಕನ್ನಡಪ್ರಭ ವಾರ್ತೆ ಖಾನಾಪುರ
ಸ್ಥಳೀಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ಜರುಗಿದ ತಾಲೂಕು ಕೃಷಿಕ ಸಮಾಜದ ಪದಾಧಿಕಾರಿಗಳ ಚುನಾವಣೆಯಲ್ಲಿ ಕೃಷಿಕ ಸಮಾಜದ ಅಧ್ಯಕ್ಷರಾಗಿ ಕೋಮಲ ಜಿನಗೊಂಡ, ಉಪಾಧ್ಯಕ್ಷರಾಗಿ ರಮೇಶ ಪಾಟೀಲ, ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ ಹೊಸೂರ, ಖಜಾಂಚಿಯಾಗಿ ಈರಣ್ಣ ಹಟ್ಟಿಹೊಳಿ, ಜಿಲ್ಲಾ ಪ್ರತಿನಿಧಿಯಾಗಿ ಕೃಷ್ಣಾಜಿ ಪಾಟೀಲ ಅವಿರೋಧವಾಗಿ ಆಯ್ಕೆಯಾದರು. ಸಹಾಯಕ ಕೃಷಿ ನಿರ್ದೇಶಕ ಮತ್ತು ಕೃಷಿಕ ಸಮಾಜದ ಕಾರ್ಯದರ್ಶಿ ಸತೀಶ ಮಾವಿನಕೊಪ್ಪ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಕೃಷಿಕ ಸಮಾಜ ಸದಸ್ಯರಾದ ಜ್ಯೋತಿಬಾ ರೇಮಾಣಿ, ಸುರೇಶ ದೇಸಾಯಿ, ಪಾರೀಸ ಮುತಗಿ, ಈರಪ್ಪ ಕಣಬರಗಿ, ಬಾಹುಬಲಿ ಅನಿಗೋಳ, ರುದ್ರಪ್ಪ ಕರೆಣ್ಣವರ, ವಿಜಯ ಕಾಮತ, ನಿಂಗಪ್ಪ ದಾಸ್ತಿಕೊಪ್ಪ, ಮಂಜುನಾಥ ಅಳವಣಿ, ಗೋವಿಂದ ದೇಸಾಯಿ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.