ಸಾರಾಂಶ
ತಾಲೂಕಿನ ಕೊರಟಕೆರೆ ಸಮೀಪದ, ಮುಜರಾಯಿ ಇಲಾಖೆ ಮೇಲುಸ್ತುವಾರಿಯ ಐತಿಹಾಸಿಕ ಕೊಣಚಗಲ್ ರಂಗನಾಥ ಸ್ವಾಮಿಯ ಕುದುರೆ ಮಹೋತ್ಸವ, ಜಾತ್ರೋತ್ಸವ ಶುಕ್ರವಾರ ಅದ್ಧೂರಿಯಾಗಿ ಜರುಗಿತು.
ಜಗಳೂರು: ತಾಲೂಕಿನ ಕೊರಟಕೆರೆ ಸಮೀಪದ, ಮುಜರಾಯಿ ಇಲಾಖೆ ಮೇಲುಸ್ತುವಾರಿಯ ಐತಿಹಾಸಿಕ ಕೊಣಚಗಲ್ ರಂಗನಾಥ ಸ್ವಾಮಿಯ ಕುದುರೆ ಮಹೋತ್ಸವ, ಜಾತ್ರೋತ್ಸವ ಶುಕ್ರವಾರ ಅದ್ಧೂರಿಯಾಗಿ ಜರುಗಿತು.
ಮಾ.27ರಿಂದ ಆರಂಭವಾದ ಜಾತ್ರೆಯಲ್ಲಿ ಏ.4ರವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿವೆ. ಭೂತನಸೇವೆ, ಕಂಕಣಧಾರಣೆ, ಮದಲಿಂಗ ಶಾಸ್ತ್ರ, ನವಿಲೋತ್ಸವ, ಗರುಡೋತ್ಸವ, ಹಿರೇಭೇಟೆ ಗಜೋತ್ಸವ, ಕುದುರೆಮಹೋತ್ಸವ ನಡೆದವು. ಏ.4 ಓಕಳಿ ಮತ್ತು ಕತ್ತಿ ಪವಾಡ ಕಾರ್ಯಕ್ರಮದೊಂದಿಗೆ ಧಾರ್ಮಿಕ ಕೈಂಕರ್ಯಗಳು ಜರುಗಿದವು.ಶಾಸಕ ಬಿ.ದೇವೇಂದ್ರಪ್ಪ ಅವರು ದೇವಸ್ಥಾನ ಅಭಿವೃದ್ಧಿ ಸಮಿತಿ ಹಾಗೂ ಭಕ್ತಮಂಡಳಿ ವತಿಯಿಂದ ಅನ್ನ ಸಂತರ್ಪಣೆ ನಡೆಸಲಾಯಿತು. ಸುತ್ತಮುತ್ತಲಿನ ಗ್ರಾಮಗಳ ಭಕ್ತಸಮೂಹ, ಪಾಳೆವು ಹಾಕುವ ಮೂಲಕ ಭಕ್ತರು ಹರಕೆ ತೀರಿಸಿದರು. ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಭಕ್ತರಿಗೆ ಪಾಯಸವನ್ನು ಬಡಿಸಿ, ಸೇವೆಗೈದರು.
ಈ ಸಂದರ್ಭ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್, ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ, ಮುಖಂಡರಾದ ಕೊರಟಕೆರೆ ಧನಂಜಯ್, ಮೆದಗಿನಕೆರೆ ಎಂ.ಎಚ್. ಮಂಜುನಾಥ್, ಕೊರಟಕೆರೆ ಗುರುಸಿದ್ದನಗೌಡ, ರಂಗಸ್ವಾಮಿ, ಆರ್.ಐ. ಧನಂಜಯ್, ಗ್ರಾಮಾಡಳಿತ ಅಧಿಕಾರಿಗಳಾದ ಮಲ್ಲಿಕಾರ್ಜುನ್, ಮಧುಕುಮಾರ್, ಇತರರು ಇದ್ದರು.- - - (** ಈ ಫೋಟೋ-ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಿ)
-೪ಜೆ.ಎಲ್.ಆರ್.೧.ಜೆಪಿಜಿ:ಜಗಳೂರು ತಾಲೂಕಿನ ಐತಿಹಾಸಿಕ ಕೊಣಚಗಲ್ ಶ್ರೀ ರಂಗನಾಥ ಕುದುರೆ ಮಹೋತ್ಸವದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಭಕ್ತರಿಗೆ ಅನ್ನ ಸಂತರ್ಪಣೆ ಬಡಿಸುವ ಮೂಲಕ ಸ್ವಾಮಿಯ ಸೇವೆಗೈದವರು. ಎಸಿ ಸಂತೋಷ್ ಕುಮಾರ್, ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ, ಧನಂಜಯ್, ಎಂ.ಎಚ್. ಮಂಜುನಾಥ್ ಇತರರು ಇದ್ದರು.