ಸಾರಾಂಶ
ಊರಿನ ದೇವಾಲಯದ ಎದುರು ಯುವಕರಿಗೆ ಮಳೆರಾಯನ ಕಳಸಹೊರಿಸಿ ದೇವರಿಗೆ ಪೂಜೆ ಸಲ್ಲಿಸಿದರು. ಮಳೆರಾಯನ ಕಳಸಹೊತ್ತು ಯುವಕರು ಊರಿನಲ್ಲಿ ಮೆರವಣಿಗೆ ನಡೆಸಿದರು. ಈ ವೇಳೆ ಕಳಸ ಹೊತ್ತ ಯುವಕರಿಗೆ ತುಂಬಿದ ಕೊಡದಲ್ಲಿ ಮಹಿಳೆಯರು ನೀರು ಸುರಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಕೀಲಾರ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆರಾಯನ ಕಳಸ ಹೊತ್ತು ಮೆರವಣಿಗೆ ಮಾಡಿ ಕೊಂಡೋತ್ಸವ ಆಚರಿಸಿದರು.ಊರಿನ ದೇವಾಲಯದ ಎದುರು ಯುವಕರಿಗೆ ಮಳೆರಾಯನ ಕಳಸಹೊರಿಸಿ ದೇವರಿಗೆ ಪೂಜೆ ಸಲ್ಲಿಸಿದರು. ಮಳೆರಾಯನ ಕಳಸಹೊತ್ತು ಯುವಕರು ಊರಿನಲ್ಲಿ ಮೆರವಣಿಗೆ ನಡೆಸಿದರು. ಈ ವೇಳೆ ಕಳಸ ಹೊತ್ತ ಯುವಕರಿಗೆ ತುಂಬಿದ ಕೊಡದಲ್ಲಿ ಮಹಿಳೆಯರು ನೀರು ಸುರಿದರು. ಮೆರವಣಿಗೆ ನಡೆಸಿದ ಯುವಕರು ಊರಿನ ಮುಂಭಾಗದಲ್ಲಿ ಹಾಕಿದ್ದ ಕೊಂಡವನ್ನು ಹಾಯ್ದು ದೇವರ ಹೆಸರಿನಲ್ಲಿ ಪರ ನಡೆಸಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಿದರು.
ನಾಳೆ ಶ್ರೀಮದ್ದೂರಮ್ಮ ಅಗ್ನಿಕೊಂಡ ಮಹೋತ್ಸವಮದ್ದೂರು:ಪಟ್ಟಣದಲ್ಲಿ ಮೇ ರಂದು ಶಕ್ತಿ ದೇವತೆ ಶ್ರೀ ಮದ್ದೂರಮ್ಮನವರ ಅಗ್ನಿಕೊಂಡ ಮಹೋತ್ಸವ ನಡೆಯಲಿದೆ.
ಶ್ರೀಮದ್ದೂರಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾಗಿವೆ. ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಮದ್ದೂರಮ್ಮನವರ ಮಠಮನೆ ದೇವಸ್ಥಾನದಲ್ಲಿ ಹೋಮ ಹವನ ಕಾರ್ಯ, ಮಧ್ಯಾಹ್ನ 2:30ಕ್ಕೆ ಎಲ್ಲಮ್ಮ ದೇವಿ ಗೆ ಚಂದ್ರ ಬಂಡಾರ ಸೇವೆ, ಸಂಜೆ 4 ಗಂಟೆಗೆ ಕೊಂಡ ಬಂಡಿ ಉತ್ಸವ, ಸಂಜೆ 6.30 ಕ ಮದ್ದೂರಮ್ಮನವರ ಮೂಲ ದೇವಸ್ಥಾನದಲ್ಲಿ ಅಭಿಷೇಕ ಮತ್ತು ಹೋಮ ಅವನಾದಿಗಳು ಹಾಗೂ ಮಹಾಮಂಗಳಾರತಿ ನಡೆಯಲಿದೆ. ರಾತ್ರಿ 11:30ಕ್ಕೆ ಕೊಂಡಕ್ಕೆ ಅಗ್ನಿ ವರ್ಷ, ನಂತರ ಮೇ ಒಂದರಂದು ಬೆಳಗ್ಗೆ ಮದ್ದೂರಮ್ಮನವರ ಕೊಂಡ ಮಹೋತ್ಸವ ಜರುಗಲಿದೆ. ಮೇ 2ರ ಸಂಜೆ 4 ಸಿಡಿ ಉತ್ಸವ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.ಅಕ್ಷರ ಜಾತ್ರೆಗೆ ಕವನಗಳು, ಪ್ರಶಸ್ತಿಗೆ ಹೆಸರುಗಳ ಆಹ್ವಾನಕನ್ನಡಪ್ರಭ ವಾರ್ತೆ ಮಂಡ್ಯರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ ಜೂ.೧೬ ರಂದು ನಗರದ ಗಾಂಧಿ ಭವನದಲ್ಲಿ ಕನ್ನಡ ಅಕ್ಷರ ಜಾತ್ರೆ ಆಯೋಜಿಸಿದ್ದು, ಆಸಕ್ತ ಕವಿಗಳಿಂದ ಕವನ ಹಾಗೂ ವಿವಿಧ ಪ್ರಶಸ್ತಿಗೆ ಸಾಧಕರ ಹೆಸರನ್ನು ಆಹ್ವಾನಿಸಲಾಗಿದೆ.
ಆಸಕ್ತರು ೨೫ ಸಾಲಿನ ಎರಡು ಕವನಗಳು, ಕಿರು ಪರಿಚಯ, ಪೋಟೋ, ಮೊಬೈಲ್ ಸಂಖ್ಯೆ, ವಿಳಾಸವನ್ನು ಮತ್ತು ಸಾಧಕರು ಸಾಧನೆಯ ವಿವರಗಳನ್ನು ಮೇ ೧೦ರೊಳಗೆ ಕಳುಹಿಸಬೇಕು. ವ್ಯಾಟ್ಸಪ್‌ನಲ್ಲಿ ಮೊದಲು ನೋಂದಣಿ ಮಾಡಿಕೊಂಡು, ನಂತರ ಅಂಚೆ ಮೂಲಕ ಕಳುಹಿಸಬೇಕು. ಕವನಗಳು ಯಾವುದಾದರೂ ವಿಷಯವನ್ನು ಒಳಗೊಂಡಿರಬಹುದು. ಆಯ್ಕೆಯಾದ ಕವಿತೆಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗುವುದು. ಐವತ್ತು ಮಂದಿ ಕವಿಗಳಿಗೆ ಕವಿಗೋಷ್ಠಿಯಲ್ಲಿ ಅವಕಾಶ ಕಲ್ಪಿಸಲಾಗುವುದು. ಉತ್ತಮ ಸಾಧಕರನ್ನು ಅಖಿಲ ಕರ್ನಾಟಕ ಕನ್ನಡ ಅಕ್ಷರ ಜಾತ್ರೆ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸಲಾಗುವುದು. ಕವಿಗೋಷ್ಠಿಯಲ್ಲಿ ಭಾಗವಹಿಸುವವರಿಗೆ ಕವನ ವಾಚನಕ್ಕೆ ಅವಕಾಶ, ಪ್ರಮಾಣ ಪತ್ರ, ನೆನಪಿನ ಕಾಣಿಕೆ ನೀಡಿಗೌರವಿಸಲಾಗುವುದು. ಹತ್ತು ಉತ್ತಮ ಕವನಗಳಿಗೆ ‘ಕಾವ್ಯಶ್ರೀ ಹಾಗೂ ತಲಾ ಹತ್ತು ಮಂದಿ ಸಾಧಕರಿಗೆ ‘ನಾಲ್ವಡಿ ಕೃಷ್ಣರಾಜ ಒಡೆಯರ್ ‘ಕನ್ನಡರತ್ನ, ‘ಸಮಾಜ ಸೇವಾ ರತ್ನ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ನೀಡಲಾಗುವುದು. ಕವಿಗಳು, ಕವನಗಳು, ಸಾಧಕರು ಪರಿಚಯವನ್ನು ವಿಳಾಸ: ಎಸ್. ಕೃಷ್ಣಸ್ವರ್ಣಸಂದ್ರ, ಕವಿಮಿತ್ರ, ನಂ-೭೬೭, ಸ್ವರ್ಣಸಂದ್ರ, ಮಂಡ್ಯ-೨ ಕಳುಹಿಸಬೇಕು. ಸಂಪರ್ಕ ಮತ್ತು ವ್ಯಾಟ್ಸಾಪ್ ನಂ-೯೪೪೮೪೨೪೩೮೦ಗೆ ಕಳುಹಿಸಬೇಕಾಗಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.