ಕೊಣ್ಣೂರ ಪುರಸಭೆ; ವಿನೋದ ಅಧ್ಯಕ್ಷ, ಯಲ್ಲವ್ವ ಉಪಾಧ್ಯಕ್ಷೆ

| Published : Aug 29 2024, 12:47 AM IST

ಕೊಣ್ಣೂರ ಪುರಸಭೆ; ವಿನೋದ ಅಧ್ಯಕ್ಷ, ಯಲ್ಲವ್ವ ಉಪಾಧ್ಯಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಗೋಕಾಕ ತಾಲೂಕಿನ ಕೊಣ್ಣೂರ ಪುರಸಭೆಯ ನೂತನ ಅಧ್ಯಕ್ಷರಾಗಿ ವಿನೋದ ಕರನಿಂಗ ಮತ್ತು ಉಪಾಧ್ಯಕ್ಷರಾಗಿ ಯಲ್ಲವ್ವ ಲಗಮಣ್ಣ ನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಗೋಕಾಕ

ತಾಲೂಕಿನ ಕೊಣ್ಣೂರ ಪುರಸಭೆಯ ನೂತನ ಅಧ್ಯಕ್ಷರಾಗಿ ವಿನೋದ ಕರನಿಂಗ ಮತ್ತು ಉಪಾಧ್ಯಕ್ಷರಾಗಿ ಯಲ್ಲವ್ವ ಲಗಮಣ್ಣ ನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬುಧವಾರ ಜರುಗಿದ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ತಲಾ ಒಂದೊಂದು ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ಎರಡು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿವೆ ಎಂದು ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ಡಾ.ಮೊಹನ ಬಸ್ಮೆ ಘೋಷಿಸಿದರು.

ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಿದ್ದವು. ಶಾಸಕ ರಮೇಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಅವಿರೋಧವಾಗಿ ನಡೆಯಿತು.

ಚುನಾವಣೆ ಬಳಿಕ ನೂತನ ಅಧ್ಯಕ್ಷ ವಿನೋದ ಗೋವಿಂದ ಕರನಿಂಗ ಮಾತನಾಡಿ, ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಹಾಗೂ ಪುರಸಭೆಯ ಸದಸ್ಯರು ಹಾಗೂ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೊಣ್ಣೂರ, ನಾಯಿಕವಾಡಿ, ಮರಡಿಮಠ, ಮಾನಿಕವಾಡಿ ಮತ್ತು ಗೋಕಾಕ ಫಾಲ್ಸ್‌ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸುತ್ತೇನೆಂದು ತಿಳಿಸಿದರು.

ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರನ್ನು ಪುರಸಭೆ ಸಿಬ್ಬಂದಿ, ಸದಸ್ಯರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಶಿವಾನಂದ ಹಿರೆಮಠ, ಪುರಸಭೆಯ ಸದಸ್ಯರು, ಶಾಸಕರ ಆಪ್ತ ಸಹಾಯಕ ಸುರೇಶ ಸನದಿ, ಗ್ರಾಮಲೆಕ್ಕಾಧಿಕಾರಿ ಟಿ.ಎಲ್. ಪಮ್ಮಾರ, ಗ್ರಾಮೀಣ ಪೊಲೀಸ್‌ ಠಾಣೆಯ ಎಎಸ್‌ಐ ಟಿ.ಎಸ್. ದಳವಾಯಿ, ಸಿಬ್ಬಂದಿ ಹಣಮಂತ ಗೌಡಿ, ನಾಗರಾಜ ದುರದುಂಡಿ ಮತ್ತು ಮುಖಂಡರಾದ ಈರಪ್ಪ ಮಲ್ಲಪ್ಪ ಕಮತ, ಮಡಿವಾಳಪ್ಪ ಶಿಗಿಹಳ್ಳಿ, ಶ್ರೀಶೈಲ ಕಮತ್ ಇದ್ದರು.