ಉತ್ತರ ಕೊಡಗಿನ ಸಾಂಪ್ರದಾಯಿಕ ಆಚರಣೆಯಲ್ಲಿ ಒಂದಾಗಿರುವ ಕೂತಿನಾಡು ಶ್ರೀ ಸಬ್ಬಮ್ಮ ದೇವಿಯ ಉತ್ಸವ ಏಪ್ರಿಲ್ ತಿಂಗಳ 6ರಂದು ನಡೆಯಲಿದೆ.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಉತ್ತರ ಕೊಡಗಿನ ಸಾಂಪ್ರದಾಯಿಕ ಆಚರಣೆಯಲ್ಲಿ ಒಂದಾಗಿರುವ ಕೂತಿನಾಡು ಶ್ರೀ ಸಬ್ಬಮ್ಮ ದೇವಿಯ ಉತ್ಸವ ಏಪ್ರಿಲ್ ತಿಂಗಳ 6ರಂದು ನಡೆಯಲಿದೆ.ಈ ಹಿನ್ನೆಲೆಯಲ್ಲಿ ಸುಗ್ಗಿ ಆಚರಣೆಯ ಪ್ರಾರಂಭದ ದಿನವಾದ ಭಾನುವಾರದಂದು ದೇವರ ತವರೂರೆಂದು ಕರೆಸಿಕೊಳ್ಳುವ ಕೂತಿ ಗ್ರಾಮದ ಚಾವಡಿಕಟ್ಟೆಯಲ್ಲಿ ಗ್ರಾಮದಲ್ಲಿನ ಬಂದೂಕುಗಳಿಗೆ ಪ್ರಧಾನ ಅರ್ಚಕ ಅನಂತರಾಮ್ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು. ನಂತರ ಗ್ರಾಮಸ್ಥರು ದೇವರ ಕಟ್ಟೆಗೆ ಬಂದೂಕು ಹಿಡಿದು, ಪ್ರದಕ್ಷಿಣೆ ಬಂದು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಸುಗ್ಗಿ ಉತ್ಸವಕ್ಕೆ ಚಾಲನೆ ನೀಡಲಾಯಿತು.ಈ ಸಂದರ್ಭ ಕೂತಿ ಗ್ರಾಮಾಭಿವೃದ್ದಿ ಮಂಡಳಿಯ ಅಧ್ಯಕ್ಷ ಎಚ್.ಎಂ.ಜಯರಾಮ್, ಉಪಾಧ್ಯಕ್ಷ ಕೆ.ಡಿ.ಗಿರೀಶ್, ಕಾರ್ಯದರ್ಶಿ ಯಾದವ್ ಕುಮಾರ್, ಖಜಾಂಚಿ ಲಕ್ಷö್ಮಯ್ಯ, ಗ್ರಾಮದ ಪ್ರಮುಖರಾದ ಕೆ.ಟ.ಜೋಯಪ್ಪ, ಅಶ್ವಥ್, ಬೋಪಯ್ಯ, ಭರತ್ ಸೇರಿದಂತೆ ಗ್ರಾಮಸ್ಥರು ಇದ್ದರು.