ಕೊಪ್ಪ ಗಾಯತ್ರಿ ಸೌಹಾರ್ದಕ್ಕೆ ₹೪೪.೯೧ ಲಕ್ಷ ಲಾಭ: ಮಂಗಳ ಪ್ರವೀಣ್

| Published : Sep 26 2025, 01:00 AM IST

ಕೊಪ್ಪ ಗಾಯತ್ರಿ ಸೌಹಾರ್ದಕ್ಕೆ ₹೪೪.೯೧ ಲಕ್ಷ ಲಾಭ: ಮಂಗಳ ಪ್ರವೀಣ್
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪ, ಗಾಯಿತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘ ನಿಯಮಿತ, ಕೊಪ್ಪ ಇದರ ೨೦೨೪-೨೫ ನೇ ಸಾಲಿನ ೨೫ನೇ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷೆ ಮಂಗಳ ಪ್ರವೀಣ್ ಅಧ್ಯಕ್ಷತೆಯಲ್ಲಿ ಗಾಯತ್ರಿ ಸಾಂಸ್ಕೃತಿಕ ಭವನದಲ್ಲಿ ನಡೆಯಿತು.

- ೨೫ನೇ ವಾರ್ಷಿಕ ಮಹಾಸಭೆಯಲ್ಲಿ ಮಾಹಿತಿ

ಕನ್ನಡಪ್ರಭ ವಾರ್ತೆ, ಕೊಪ್ಪ

ಗಾಯಿತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘ ನಿಯಮಿತ, ಕೊಪ್ಪ ಇದರ ೨೦೨೪-೨೫ ನೇ ಸಾಲಿನ ೨೫ನೇ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷೆ ಮಂಗಳ ಪ್ರವೀಣ್ ಅಧ್ಯಕ್ಷತೆಯಲ್ಲಿ ಗಾಯತ್ರಿ ಸಾಂಸ್ಕೃತಿಕ ಭವನದಲ್ಲಿ ನಡೆಯಿತು. ಸುಮಾರು ೩೮೦ ಷೇರುದಾರರು ಭಾಗವಹಿಸಿದ ಈ ಸಭೆಯಲ್ಲಿ, ಅಧ್ಯಕ್ಷರು ಲೆಕ್ಕಪತ್ರಗಳನ್ನು ಮಂಡಿಸಿದರು. ಈ ಸಾಲಿನಲ್ಲಿ ಒಟ್ಟು ₹೧೧೯.೫೮ ಕೋಟಿಗೆ ವ್ಯವಹಾರ ಹೆಚ್ಚಿಸಿಕೊಂಡಿದ್ದು, ₹೪೪.೯೧ ಲಕ್ಷ ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ೧೦ನೇ ತರಗತಿ ಮತ್ತು ಪಿಯುಸಿಯ ಬೇರೆ ಬೇರೆ ವಿಭಾಗದ ಪ್ರತಿಭಾನ್ವಿತ ಮಕ್ಕಳಿಗೆ ಧನ ಸಹಾಯ ದೊಂದಿಗೆ ಗೌರವಿಸಲಾಯಿತು. ಅಧ್ಯಕ್ಷರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಮಣಿಪಾಲ್ ಹೆಲ್ತ್ ಕಾರ್ಡ್, ಯಶಸ್ವಿನಿ ಕಾರ್ಡ್, ಗೋಲ್ಡ್ ಲೋನ್, ಪ್ಲೆಡ್ಜ್ ಲೋನ್‌ ಗಳ ಜೊತೆಗೆ ೦% ಬಡ್ಡಿ ದರದಲ್ಲಿ ಸೋಲಾರ್ ಉಪಕರಣಗಳ ಸೌಲಭ್ಯ ಇದೆ. ರೋಗಿಗಳಿಗೆ ಡಿಸ್ಕೌಂಟ್ ರೇಟ್‌ನಲ್ಲಿ ಡಯಾಲಿಸಿಸ್ ಮಾಡಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.

ಎಲ್ಲಾ ಸಹಕಾರಿ ಬಂಧುಗಳಿಂದ ನಮ್ಮ ಸಂಸ್ಥೆ ಪ್ರಗತಿ ಹೊಂದುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಷೇರುದಾರರು ಹೆಚ್ಚಿನ ವ್ಯವಹಾರ ಮಾಡಿ, ಸಂಸ್ಥೆ ಇನ್ನಷ್ಟು ಪ್ರಗತಿಯತ್ತ ಕೊಂಡೊಯ್ಯಬೇಕೆಂದು ಅಧ್ಯಕ್ಷರು ಮನವಿ ಮಾಡಿದರು. ಜೆ.ಎಂ. ಶ್ರೀಹರ್ಷ ಮತ್ತು ಕವಿತಾ ಸತೀಶ್ ಪ್ರತಿಭಾ ಪುರಸ್ಕಾರ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ದಿವಾಕರ್, ನಿರ್ದೇಶಕರು, ವೃತ್ತಿಪರ ನಿರ್ದೇಶಕರು, ಲೆಕ್ಕಪರಿಶೋಧಕರಾಗಿದ ರವೀಂದ್ರನಾಥ್, ಮುಖ್ಯ ಕಾರ್ಯನಿರ್ವಾಹಕರಾದ ಪೃಥ್ವಿರಾಜ್, ವೆಂಕಟರಮಣ, ರಾಘವೇಂದ್ರ, ಎಲ್ಲಾ ಸಿಬ್ಬಂದಿ , ವಕೀಲರು ಹಾಜರಿದ್ದರು.